ಅಫಜಲಪುರ: ಮಕ್ಕಳಿಗೆ ಪಠ್ಯ ಶಿಕ್ಷಣ ಜೊತೆ ಕಲೆ, ಸಂಸ್ಕೃತಿ, ಆಟೋಟಗಳ ಕುರಿತು ಪರಿಚಯಿಸಬೇಕು. ಇದರಿಂದ ಮಕ್ಕಳು ಕ್ರಿಯಾಶೀಲರಾಗುತ್ತಾರೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ತಾಲೂಕಿನ ಬಿದನೂರ ಗ್ರಾಪಂ ವ್ಯಾಪ್ತಿಯಲ್ಲಿನ ಗೊಬ್ಬುರ(ಕೆ) ಗ್ರಾಮದಲ್ಲಿ ಪ್ರಸಕ್ತ ಸಾಲಿನ ಎಚ್‌ಕೆಆರ್ ಡಿಬಿ ಯೋಜನೆ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 52 ಲಕ್ಷ ರೂ. ವೆಚ್ಚದಲ್ಲಿ ಎಂಟು ಕೊಠಡಿಗೆ ಅಡಿಗಲ್ಲು ಹಾಕಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಪಾತ್ರ ದೊಡ್ಡದಾಗಿದೆ. ಹೀಗಾಗಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗಬೇಕೆಂಬ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದ ಅವರು, ಶಾಲಾ ಕಟ್ಟಡಕ್ಕೆ ಉಚಿತವಾಗಿ ರೈತರಾದ ಮಹಾಂತಪ್ಪ ಗೌಂಡಿ, ಮುತ್ತಪ್ಪ ಹೊಸ್ಮನಿ, ಅಂಬಣ್ಣ ಗೌಂಡಿ, ನಿಂಗಪ್ಪ ಹೊಸ್ಮನಿ ತಮ್ಮ ಒಂದುವರೇ ಎಕರೆ ಜಮೀನು ದಾನವಾಗಿ ನೀಡಿದ್ದಾರೆ ಎಂದರು.
ತಾಲೂಕಿನ ಜನ ಆರ್ಥಿಕವಾಗಿ ಬಲಿಷ್ಠರಾಗಬೇಕೆಂಬ ದೃಷ್ಟಿಯಿಂದ ಭೀಮಾ ನದಿಗೆ ಅಡ್ಡಲಾಗಿ ಸೊನ್ನ ಗ್ರಾಮದಲ್ಲಿ ಬ್ರಿàಜ್ ಕಂ ಬ್ಯಾರೇಜ್ ನಿರ್ಮಿಸಿ ಅದರಿಂದ ರೈತರ ಜಮೀನುಗಳಿಗೆ ನೀರುಣಿಸುವ ಕೆಲಸ ನಡೆಯುತ್ತಿದೆ. ಹಾವನೂರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗುತ್ತಿದೆ.ಕಲಬುರಗಿ ಚವಡಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಬಿದನೂರ(ಕೆ) ಗ್ರಾಮಕ್ಕೆ ಕೂಡು ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಬಿದನೂರ ಗ್ರಾಪಂ ಅಧ್ಯಕ್ಷ ಶರಣಯ್ಯಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ತಾಪಂ ಅಧ್ಯಕ್ಷೆ ರುಕ್ಮಿàಣಿ ಜಮಾದಾರ, ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಸದಸ್ಯೆ ಮಹಾದೇವಿ ರಾಠೊಡ, ಗ್ರಾಪಂ ಸದಸ್ಯೆ ಗಂಗುಬಾಯಿ ದೊಡ್ಮನಿ, ಆಶಾದೇವಿ ದೊಡ್ಮನಿ,
ಎಸ್‌ಡಿಎಂಸಿ ಅಧ್ಯಕ್ಷ ಮಹಾಂತಗೌಡ ಪೊ. ಪಾಟೀಲ್, ಎಪಿಎಂಸಿ ಅಧ್ಯಕ್ಷ ಬಿ.ವೈ. ಪಾಟೀಲ್, ಸಾವಿರಪ್ಪ ಪೂಜಾರಿ, ಕಾಶಿನಾಥ ದೇವತ್ಕಲ್, ದೇವೇಂದ್ರ ಜಮಾದಾರ, ಬಿಇಒ ಚಿತ್ರಶೇಖರ ದೇಗಲಮಡಿ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸಿಆರ್‌ಪಿ ತಾರಾನಾಥ ಚವ್ಹಾಣ, ಮುಖ್ಯಗುರು ಅಕºರ್‌ಬಾಷಾ ನದಾಫ್, ಭೂಸೇನಾ ನಿಗಮ ಮಂಡಳಿ ಎಇಇ ಜಾಫರ್ ಇದ್ದರು.