– ಕಳೆದ ಚುನಾವಣೆಯಲ್ಲಿ ನಮಗೆ ಮೊದಲ ಸ್ಪರ್ಧೆಯ ಅನುಭವವಾಗಿದ್ದರಿಂದ ಎಲ್ಲ ಮತದಾರರನ್ನು ತಲುಪುವುದು ಕಷ್ಟವಾಗಿತ್ತು. 2009ರಲ್ಲಿ ಪಕ್ಷ ಅಸ್ತಿತ್ವಕ್ಕೆ ಬಂದು, ಮೊದಲ ಬಾರಿ ಸ್ಪರ್ಧಿಸಿದ್ದೆವು. ಕೆಲವೊಂದು ಯೋಜನೆ -ಯೋಚನೆಗಳಲ್ಲೂ ಕೊರತೆಯಾಗಿತ್ತು. ಆದರೆ ಈ ಬಾರಿ ಪಕ್ಷ ಉತ್ತಮ ಸ್ಥಿತಿಯಲ್ಲಿದ್ದು, ಜನರು ಬೆಂಬಲಿಸುವ ಭರವಸೆ ಇದೆ.
Advertisement
ಈ ಬಾರಿ ನೀವು ಆಕಾಂಕ್ಷಿಯೇ?– ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಎಂಬ ಪದವೇ ಇಲ್ಲ. ನಮ್ಮ ಅಭ್ಯರ್ಥಿಗಳನ್ನು ಕಾರ್ಯಕರ್ತರೇ ಆರಿಸುತ್ತಾರೆ. ಕಾರ್ಯಕರ್ತರು ಒಮ್ಮತದ ತೀರ್ಮಾನ ಮಾಡಿ, ಜಿಲ್ಲೆ, ರಾಜ್ಯಕ್ಕೆ ಕಳುಹಿಸುತ್ತಾರೆ. ಪ್ರಸ್ತುತ ಮೂಡಬಿದಿರೆ ಕ್ಷೇತ್ರಕ್ಕೆ ನನ್ನ ಹಾಗೂ ಎ.ಕೆ. ಅಶ್ರಫ್ ಅವರ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯುತ್ತದೆ. ಎ.ಕೆ. ಅಶ್ರಫ್ ಉತ್ತಮ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದು, ಅವರು ಅಭ್ಯರ್ಥಿಯಾದರೂ ಅವರ ಗೆಲುವಿಗಾಗಿ ದುಡಿಯಲಿದ್ದೇನೆ.
– ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ. ಜೈನಕಾಶಿ ಎಂದು ಹೆಸರು ಪಡೆದಿರುವ ಮೂಡಬಿದಿರೆ ಪ್ರವಾಸಿ ತಾಣವಾದರೂ ಇಲ್ಲಿನ ರಸ್ತೆಗಳು ಇನ್ನೂ ಅಭಿವೃದ್ಧಿಗೊಂಡಿಲ್ಲ. ಮಂಗಳೂರು – ಕಾರ್ಕಳ ರಸ್ತೆಯು ತೀರಾ ಹದಗೆಟ್ಟಿದ್ದು, ಅದರ ಅಭಿವೃದ್ಧಿಯೂ ನಮ್ಮ ಆದ್ಯತೆ. ಮೂಡಬಿದಿರೆಗೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿಮಂದಿರದ ಅನಿವಾರ್ಯವೂ ಇದೆ. ಹಿಂದಿನ ಶಾಸಕರ ಕುರಿತು ನಿಮ್ಮ ಅಭಿಪ್ರಾಯ?
– ಅವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಕಳೆದ ಹಲವು ಅವಧಿಗಳಿಂದ ಅವರು ಆಯ್ಕೆಯಾಗಿದ್ದು, ಆಗಬೇಕಿರುವ ಸಾಕಷ್ಟು ಕಾಮಗಾರಿಗಳ ಕುರಿತು ಗಮನಹರಿಸಿಲ್ಲ. ಸರಕಾರಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಮೂಡಬಿದಿರೆಗೆ ಅಗತ್ಯ; ಈ ಕುರಿತು ಶಾಸಕರು ಪ್ರಯತ್ನ ಮಾಡಬೇಕಿತ್ತು.
Related Articles
– ಮೂಡಬಿದಿರೆಯ ಸ್ಥಿತಿಯನ್ನು ನೋಡುವಾಗ ಕಾಂಗ್ರೆಸ್ – ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡುಬರುತ್ತಿವೆ. ಈ ಕ್ಷೇತ್ರದಲ್ಲಿ ಏನು ಮಾಡದಿದ್ದರೂ ನಾವೇ ಗೆಲ್ಲುತ್ತೇವೆ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಿದ್ದರೂ ಅದು ಸಮರ್ಥ ವಿಪಕ್ಷವಾಗಿಯೂ ಕಾರ್ಯ ನಿರ್ವಹಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೂ ಅವರು ಹೋರಾಟ ಮಾಡಿಲ್ಲ.
Advertisement
— ಕಿರಣ್ ಸರಪಾಡಿ