Advertisement
ಕಳೆದ ಬಾರಿ ಬಿಜೆಪಿ ಸೋಲಿಗೆ ಕಾರಣವೇನು?ಸೋಲಿಗೆ ಅನೇಕ ಕಾರಣಗಳಿದ್ದವು. ಅದರಲ್ಲಿ ಪಕ್ಷದ ಒಳಗೆ ಇದ್ದ ಕೆಲವು ಗೊಂದಲಗಳು ಮುಖ್ಯ ಕಾರಣವಾಗಿರಬಹುದು. ಚುನಾವಣೆ ಸಂದರ್ಭ ಬಿ.ಎಸ್. ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿಕೊಂಡಿದ್ದರು. ಇದರಿಂದಲೂ ನಮಗೆ ಹಿನ್ನಡೆಯಾಗಿರಬಹುದು. ಬಂಟ್ವಾಳಕ್ಕೆ ನಾನು ಹೊಸ ಮುಖವಾಗಿದ್ದುದೂ ಬಿಜೆಪಿ ಸೋಲಿಗೆ ಕಾರಣವಾಗಿರಬಹುದು.
ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಾನು ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಸಾಧ್ಯವಿರುವಷ್ಟು ಕೆಲಸ ಮಾಡಿದ್ದೇನೆ. ಮನೆ ಮನೆಗೆ ಭೇಟಿ ನೀಡಿ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೇನೆ. ಈಗ ಜನರಿಗೆ ನನ್ನ ಪರಿಚಯವಾಗಿದೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ 14,000ಕ್ಕೂ ಹೆಚ್ಚು ಮತಗಳಿಂದ ಲೀಡ್ ನೀಡಿದ್ದೇವೆ. ಬಿ.ಎಸ್. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿ ನೇತೃತ್ವ ವಹಿಸಿಕೊಂಡಿದ್ದಾರೆ. ಇದುವೇ ನಮಗೆ ಶಕ್ತಿ. ಕಾಂಗ್ರೆಸ್‌ನ ಯಾವ ಖಣಾತ್ಮಕ ಅಂಶ ನಿಮಗೆ ಈ ಚುನಾವಣೆಯಲ್ಲಿ ಸಹಕಾರಿಯಾಗಲಿದೆ?
ರಾಜ್ಯಸರಕಾರದ ವೈಫಲ್ಯವೇ ನಮಗೆ ಈ ಬಾರಿ ಗೆಲುವು ಸಾಧಿಸಲು ಸಹಕಾರಿ. ಒಂದು ವರ್ಗದ ಜನರ ಓಲೈಕೆ, ಜನವಿರೋಧಿ ನೀತಿ, ಕಲ್ಲಡ್ಕ ಶಾಲೆಗೆ ಊಟ ಕಡಿತ ಸೇರಿದಂತೆ ಸಮಾಜದಲ್ಲಿ ಗೊಂದಲ, ತಾರತಮ್ಯವನ್ನು ಕಾಂಗ್ರೆಸ್ ಹುಟ್ಟು ಹಾಕಿದೆ. ಬಂಟ್ವಾಳದಲ್ಲಿ ಕಳೆದ ಐದು ವರ್ಷಗಳಲ್ಲಿ ಉಂಟಾದ ಗಲಭೆಗಳಿಂದ ಇಲ್ಲಿನ ಜನ ಕಂಗೆಟ್ಟಿದ್ದಾರೆ. ಶಾಂತಿಗಾಗಿಯೇ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ.
Related Articles
ಶಾಂತಿಯುತ ಬಂಟ್ವಾಳ ನಮ್ಮ ಗುರಿ. ಈ ಭಾಗದ ಜನರು ನೆಮ್ಮದಿಯಿಂದ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಡಲಿದ್ದೇವೆ. ಇದರೊಂದಿಗೆ ಬಂಟ್ವಾಳಕ್ಕೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ನೇತ್ರಾವತಿ ಶುದ್ಧೀಕರಣ ಮಾಡುವ ಯೋಜನೆಯೂ ಇದೆ.
Advertisement
ಈ ಬಾರಿಯ ಬಿಜೆಪಿ ಅಭ್ಯರ್ಥಿ ನೀವು ಎನ್ನುವ ಬಗ್ಗೆ ?ಈ ಹಿಂದೆಯೂ ನನಗೆ ಟಿಕೆಟ್ ನೀಡಿ ಎಂದು ಪಕ್ಷವನ್ನು ಕೇಳಿಲ್ಲ. ಆದರೂ ಪಕ್ಷವೇ ನನಗೆ ಟಿಕೆಟ್ ನೀಡಿತ್ತು. ಹಾಗೆಯೇ ಈ ಬಾರಿಯೂ ಪಕ್ಷದ ಆದೇಶವನ್ನು ಪಾಲಿಸುತ್ತೇನೆ. ಪ್ರಜ್ಞಾ ಶೆಟ್ಟಿ