Advertisement
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ”ಇತ್ತೀಚಿನ ದಿನಗಳಲ್ಲಿ ನನ್ನ ಸಂಪುಟ ಸಭೆಯಲ್ಲಿ ಹೊಸ ಸಂಪ್ರದಾಯ ಶುರುವಾಗಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಮುಂಡಿಸುವ ಮೊದಲು ಆ ಮಸೂದೆ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುತ್ತದೆ. ಆಗ ಮಸೂದೆ ಜತೆಗೆ ಅಧಿಕಾರಿಗಳು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾದ ಟಿಪ್ಪಣಿಯನ್ನು ತರುತ್ತಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಾವ ದೇಶ ಉತ್ತಮವಾಗಿ ಕಾರ್ಯನಿರ್ವಹಿ ಸು ತ್ತಿದೆ? ನಿಯಮಗಳು ಏನಿವೆ? ನಾವು ಅವುಗಳನ್ನು ಹೇಗೆ ಸಾಧಿಸುವುದು ಇತ್ಯಾದಿ ಮಾಹಿತಿಯು ಅದರಲ್ಲಿ ರು ತ್ತದೆ. ಹೀಗೆ ಮಾಡುವುದರಿಂದ ನಾವು ಪ್ರತೀ ಟಿಪ್ಪಣಿ ಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸಾಧ್ಯವಾಗು ತ್ತಿದೆ” ಎಂದು ಮೋದಿ ಅವರು ತಿಳಿಸಿದರು.
Related Articles
ಭ್ರಷ್ಟಾಚಾರಿಗಳನ್ನು ಜೈಲಿನ ಹೊರಗೆ ಇಡಲು ಬಿಡು ವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿ ದ್ದಾರೆ. ಮೋದಿ ತಮಗಾಗಿ ಆಸ್ತಿ ಮಾಡಿಕೊಳ್ಳು ವುದಿಲ್ಲ. ಅಥವಾ ನನ್ನ ಸೋದರಳಿಯ ಅಥವಾ ಸಹೋದರರಿಗೆ ಮಾಡಬೇಕಾದ್ದೂ ಏನೂ ಇಲ್ಲ ಎಂದು ಮಮತಾ ಸೋದರಳಿ ಯ ಅಭಿಷೇಕ್ ಬ್ಯಾನರ್ಜಿಯರನ್ನು ಪರೋಕ್ಷ ವಾಗಿ ಉಲ್ಲೇಖೀಸಿ ಟೀಕಿಸಿದ್ದಾರೆ. ಜೂ. 4ರ ಬಳಿಕ ಹೊಸ ಸರಕಾರ ರಚನೆಯಾಗಲಿದೆ. ಭ್ರಷ್ಟಾಚಾರಿಗಳ ತಮ್ಮ ಜೀವ ನದ ಉಳಿದ ಅವಧಿಯನ್ನು ಜೈಲಿನಲ್ಲಿ ಕಳೆಯಲಿ ದ್ದಾರೆ. ಅವರ ವಿರುದ್ಧ ಹೆಚ್ಚಿನ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದು ಜನರಿಗೆ ನಾನು ನೀಡುತ್ತಿರುವ ಮತ್ತೂಂದು ಗ್ಯಾರಂಟಿ ಎಂದರು.
Advertisement