Advertisement
ಕಳೆದ ಬಾರಿಯ ಸೋಲಿಗೆ ಕಾರಣ ಏನು?ಮೂರು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರತಿ ಬಾರಿಯು ಸೋಲಿನ ಅಂತರ ಕಡಿಮೆ ಆಗಿದೆ. ಕಳೆದ ಬಾರಿ ಸೋಲಿಗೆ ಹೇಳಿಕೊಳ್ಳುವಂತಹ ನಕಾರಾತ್ಮಕ ಕಾರಣಗಳೇನೂ ಇಲ್ಲ. ಆದರೆ ಸಣ್ಣ ಅಂತರದಿಂದ ಸೋಲಾಗಿದೆ. ಮತದಾರರ ತೀರ್ಮಾನವನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ.
ಬಿಜೆಪಿ ಆಡಳಿತದ ವೈಫಲ್ಯ ಮತದಾರರಿಗೆ ತಿಳಿದಿದೆ. ಕಳೆದ ಬಾರಿ ಅವರು ಸುಳ್ಳು ಪ್ರಚಾರ ಮಾಡಿದರು. ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿ ಕಾಂಗ್ರೆಸ್‌ಗಿದೆ. ಈ ಬಾರಿ
ಮತ್ತೆ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಮಾಹಿತಿ ಸಿಕ್ಕಿದೆ. ಸುಳ್ಳು ಆರೋಪಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಈ ಬಾರಿ ಮತ್ತೆ ಸ್ಪರ್ಧೆ ಮಾಡುತ್ತೀರಾ? ಟಿಕೇಟ್ ದೊರೆಯುವ ಸಾಧ್ಯತೆ ಇದೆಯೇ?
ಸ್ಪರ್ಧಿಸುವ ಇರಾದೆ ಇದ್ದು, ಟಿಕೇಟ್ ಸಿಗುವ ಬಗ್ಗೆ ವಿಶ್ವಾಸ ಇದೆ. ಕಳೆದ ಐದು ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಆಗದಿರುವುದರಿಂದ ಜನರು ಬದಲಾವಣೆ ಬಯಸಿದ್ದಾರೆ. ಕಳೆದ ಬಾರಿ ಅಂತಹ ಅವಕಾಶ ಸಣ್ಣ ಅಂತರದಿಂದ ತಪ್ಪಿತ್ತು. ಈ ಬಾರಿ ಬದಲಾವಣೆ ಆಗುವುದು ನಿಶ್ಚಿತ. ಜನರು ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ.
Related Articles
ಮನೆ ಮನೆ ಭೇಟಿ, ಸಾಧನಾ ಸಮಾವೇಶದ ಮೂಲಕ ಈಗಾಗಲೇ ಪ್ರಚಾರ ಕಾರ್ಯವೇಗ ಪಡೆದಿದೆ. 48 ಗ್ರಾಮಗಳಲ್ಲಿಯು ಜನರನ್ನು ಭೇಟಿ ಮಾಡಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ ವಿಶ್ವಾಸ ಇದೆ. ಕಾರ್ಯಕರ್ತರು ರಾಜ್ಯ ಸರಕಾರದ ಸಾಧನೆ, ಬಿಜೆಪಿಯ ವೈಫಲ್ಯವನ್ನು ಜನರ ಮುಂದಿಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
Advertisement
ಕ್ಷೇತ್ರದಲ್ಲಿ ವೈಯಕ್ತಿಕವಾಗಿ ನಿಮ್ಮ ಸಾಧನೆ ಏನು?ಈ ಹಿಂದಿನ ಚುನಾವಣೆಯಲ್ಲಿ ಸೋತಿದ್ದರೂ ಕ್ಷೇತ್ರದ ಸಂಪರ್ಕ ಕಳೆದುಕೊಂಡಿಲ್ಲ. ನಿರಂತರ ಓಡಾಟ ನಡೆಸಿದ್ದೇನೆ. ರಾಜ್ಯ ಸರಕಾರದಿಂದ 30 ಕೋಟಿ ರೂ. ವಿಶೇಷ ಅನುದಾನ ತರಿಸಿದ್ದೇನೆ. ಐದು ವರ್ಷದಲ್ಲಿ ಜನರು ಬೇಡಿಕೆ ಇಟ್ಟ ಪ್ರತಿ ಸಂದರ್ಭದಲ್ಲೂ ಭೇಟಿ ಮಾಡಿ ಸಮಸ್ಯೆ ಆಲಿಸಿದ್ದೇನೆ. ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಿರಣ್ ಪ್ರಸಾದ್ ಕುಂಡಡ್ಕ