ಹೊಸದಿಲ್ಲಿ: ಜನಸಂಖ್ಯೆಯಲ್ಲಿ ಹಿಂದೂಗಳ ಕುಸಿತ ಹಾಗೂ ಅಲ್ಪ ಸಂಖ್ಯಾತರ ವೃದ್ಧಿ ಬಿಂಬಿಸುವ ವರದಿಯಿಂದ ಸುಳ್ಳು ಪ್ರಚಾರಗಳು ಬಹಿರಂಗಗೊಂಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಸಂದರ್ಶನದಲ್ಲಿ ಮಾತನಾಡಿದ ಅವರು, 1950ರಿಂದ 2015ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಶೇ.7.82 ಕುಸಿದರೆ, ಅಲ್ಪಸಂಖ್ಯಾತರದ್ದು 43 ಪ್ರತಿಶತ ಹೆಚ್ಚಾಗಿದೆ. ಹಾಗಾಗಿ ಯಾವುದೇ ಅಪಪ್ರಚಾರ ಮಾಡುವಲ್ಲಿ ಅರ್ಥವಿಲ್ಲ. ಅಲ್ಪಸಂಖ್ಯಾತರಿಗೆ ಅಪಾಯವೆಂದು ಯಾರು ಹಬ್ಬಿಸುತ್ತಿದ್ದಾರೊ ಅವರು ಸುಳ್ಳು ನಂಬಿಕೆಗಳಿಂದ ಹೊರಬರಬೇಕು ಎಂದರು.
ಭಾರತ ‘ವಸುದೈವ ಕುಟುಂಬಕಂ’ ಇಡೀ ವಿಶ್ವವೇ ಒಂದು ಕುಟುಂಬ ಎಂಬ ತತ್ವವನ್ನು ಬಲವಾಗಿ ನಂಬಿದೆ. ಆಸ್ತಿ ವಿಷಯದಲ್ಲೂ ನಾವು ಯಾರ ಭೂಮಿಯನ್ನೂ ಒಂದು ಇಂಚು ಸಹ ತೆಗೆದುಕೊಂಡಿಲ್ಲ. ಈ ವರದಿಯ ನಂತರ ಎಲ್ಲ ಸುಳ್ಳು ಆರೋಪಗಳು ಬಹಿರಂಗಗೊಂಡಿವೆ ಎಂದರು.
ಹಿಂದೂಗಳ ಜನಸಂಖ್ಯೆ ಕುಸಿತದ ಕಾಳಜಿ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಎಲ್ಲವನ್ನೂ ಒಳಗೊಂಡ ಈ ಶ್ರೇಷ್ಠ ಸಂಸ್ಕೃತಿ, ಭವಿಷ್ಯದಲ್ಲಿ ಇಡೀ ವಿಶ್ವವನ್ನು ಸಮತೋಲನದಿಂದ ಕಾಯ್ದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ಯಾರೊಂದಿಗೂ ಶತ್ರುತ್ವ ಹೊಂದದ ಹಿಂದೂ ಸಂಸ್ಕೃತಿ ಕ್ಷೀಣವಾದರೆ ತನ್ನ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಇಡೀ ಜಗತ್ತು ಹಿಂದುಗಳ ಜನಸಂಖ್ಯೆ ವೃಧಿœಯ ಕುರಿತು ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.
ಪುಟಿನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದೆ ಯುದ್ಧಕ್ಕಿದು ಸಮಯವಲ್ಲ
ವಿಶ್ವದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಭಾರತ ಪಕ್ಷಾತೀತ ಹಾಗೂ ಸ್ವತಂತ್ರ ನಿಲುವು ಹೊಂದಿದೆ. ತಮಗೆ ಬೆಂಬಲಿಸುವಂತೆ ಎಷ್ಟೇ ದೇಶಗಳು ಒತ್ತಡ ಹೇರಿದರೂ ಭಾರತ ಏಕಮಾತ್ರ ದೇಶ ಶಾಂತಿಯನ್ನು ಪ್ರತಿಪಾದಿ ಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮಂತ್ರಿ ಹೇಳಿದರು. ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತ ನಾ ಡಿದ ಅವರು, 2022ರ ಸೆಪ್ಟೆಂಬರ್‌ನಲ್ಲಿ ಉಕ್ರೇನ್ ವಿರುದ್ಧ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಭೇಟಿ ನೆನಪಿಸಿಕೊಂಡ ಪ್ರಧಾನಿ ಮೋದಿ, ಪುಟಿ® ಜೊತೆ ಕುಳಿತು ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದೆ “ಇದು ಯುದ್ಧದ ಸಮಯವಲ್ಲ. ಸಂಘರ್ಷದ ಸಮಯದಲ್ಲಿ ಪಕ್ಷಾತೀತವಾಗಿ ಇರುವುದು ಭಾರತದ ನಿರ್ಧಾರ. ಹೀಗಾಗಿಯೇ ಭಾರತ ಜಗತ್ತಿನಾದ್ಯಂತ ಅನೇಕ ದೇಶಗಳ ವಿಶ್ವಾಸ ಗಳಿಸಲು ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.
ರಂಜಾನ್‌ನಲ್ಲಿ ಯುದ್ಧ ಬೇಡ ಎಂದಿದ್ದೆ: ಮುಸ್ಲಿಮರ ಪವಿತ್ರ ಉಪವಾಸದ ಅವಧಿ ರಂಜಾನ್‌ನಲ್ಲಿ ಯುದ್ಧ ಬೇಡ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮನವಿ ಮಾಡಿದ್ದೆ ಎಂದು ಸಂದರ್ಶನದಲ್ಲಿ ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಸ್ರೇಲ್‌ಗೆ ವಿಶೇಷ ರಾಯಭಾರಿಯನ್ನೂ ಕಳುಹಿಸಿ ಕೊಟ್ಟಿದೆ ಎಂದು ಹೇಳಿದ್ದಾರೆ.