Advertisement

ಮಾತಿನ ಮತ, ಸಂದರ್ಶನ:

02:16 PM Apr 07, 2018 | Team Udayavani |

ಅವಕಾಶ ನೀಡಿದರೆ ಸ್ಪರ್ಧೆ

Advertisement

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವುದು ನನ್ನ ಉದ್ದೇಶವೇ ಅಲ್ಲ. ಪಕ್ಷ ತೀರ್ಮಾನ ಕೈಗೊಂಡು, ಟಿಕೆಟ್‌ ನೀಡಿದರೆ ಸ್ಪರ್ಧೆಗೆ ಸಿದ್ಧ. ಇಲ್ಲದೇ ಇದ್ದರೆ ಸ್ಪರ್ಧೆ ಮಾಡುವುದಿಲ್ಲ. ಅಭ್ಯರ್ಥಿಗಳಿಗೆ ಬೆಂಬಲವಾಗಿ ನಿಲ್ಲುತ್ತೇನೆ. 

ಹಿಂದಿನ ಚುನಾವಣೆಯಲ್ಲಿ ನಿಮ್ಮ ನಿರೀಕ್ಷೆ ಏನಾಗಿತ್ತು?
ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಶಕುಂತಳಾ ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎಂದಾಗಲೇ, ಗೆಲುವಿನ ಸೂಚನೆ ಹಲವರಿಗೆ ಸಿಕ್ಕಿತ್ತು. ಬಿಜೆಪಿ ಸೋಲಿಸಲಾದರೂ ಕಾಂಗ್ರೆಸ್‌ಗೆ ಓಟು ಹಾಕುತ್ತೇವೆ ಎಂದು ಹಲವು ಆತ್ಮೀಯರು ನನ್ನ ಬಳಿ ಹೇಳಿಕೊಂಡಿದ್ದರು. ಇನ್ನು ನಮ್ಮ ಸಣ್ಣ ಪ್ರಮಾಣದ ಮತ ಜೆಡಿಎಸ್‌ಗೆ ಹೋಯಿತು. ಹಾಗಿದ್ದರೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 4,442 ಮತ ಪಡೆದಿದ್ದೇನೆ. ಎಸ್‌ಡಿಪಿಐ ಅಭ್ಯರ್ಥಿಯನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಕಣಕ್ಕೆ ಇಳಿಸಲಾಗಿತ್ತು. ಆದ್ದರಿಂದ ಸಿಕ್ಕಿರುವ ಮತ ದೊಡ್ಡದೇ. 

ಈ ಬಾರಿಯ ಜನರ ಭಾವನೆ ಹೇಗಿದೆ?
ಹಿಂದಿನ ಬಾರಿ ಕಳೆದುಕೊಂಡ ಮತಗಳು ಈ ಬಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ಶಕುಂತಳಾ ಶೆಟ್ಟಿ ಬಗ್ಗೆ ಜನರ ಇಟ್ಟ ನಂಬಿಕೆ ಈಡೇರಿಲ್ಲ. ರಸ್ತೆ ಬಿಟ್ಟು ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಕೋಮು ಭಾವನೆ ಹದಗೆಡಿಸುವ ಪ್ರಯತ್ನ ನಡೆಯುತ್ತಲೇ ಇದೆ. ನೈತಿಕ ಪೊಲೀಸ್‌ಗಿರಿಯ ಬಗ್ಗೆ ಶಾಸಕಿ ಚಕಾರ ಎತ್ತಿಲ್ಲ. ಸರಕಾರಿ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಇದಾವುದರ ಬಗ್ಗೆಯೂ ಶಾಸಕಿ ಮಾತನಾಡಿಲ್ಲ. ಆದ್ದರಿಂದ ಹಿಂದಿನ ಬಾರಿ ಪಡೆದಷ್ಟು ಮತವನ್ನು ಈ ಬಾರಿ ಕಾಂಗ್ರೆಸ್‌ ಪಡೆಯದು.

ಮುಂದಿನ 5 ವರ್ಷದ ಬಗ್ಗೆ?
ಅನೈತಿಕ ಪೊಲೀಸ್‌ಗಿರಿ, ಕೋಮುವಾದದ ವಿರುದ್ಧ ಮುಂದೆಯೂ ಹೋರಾಟ ಮಾಡುತ್ತೇವೆ. ಇದನ್ನು ಹೋಗಲಾಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತೇವೆ. ಇನ್ನೂ ಹೆಚ್ಚಿನ ಕಡೆಗಳಲ್ಲಿ ಮನೆ, ಶೌಚಾಲಯ ಇಲ್ಲ. ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ.

Advertisement

ಈ ಬಾರಿಯ ಚುನಾವಣಾ ಸಿದ್ಧತೆ ಹೇಗಿದೆ?
ಗೆಲ್ಲುವ ನಿರೀಕ್ಷೆ ಇಲ್ಲದಿದ್ದರೂ, ಮುಂದಿನ ದಿನಗಳಿಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ. ನಮಗೆ ಆತ್ಮವಿಶ್ವಾಸ ತುಂಬಿಸುವ ಕೆಲಸವನ್ನು ಜನರು ಮಾಡಲಿದ್ದಾರೆ. ಉತ್ತಮ ಮತ ಪಡೆಯಲಿದ್ದೇವೆ. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರನ್ನು ತಯಾರು ಮಾಡುತ್ತಾ ಇದ್ದೇವೆ. ಪ್ರತಿ ಬೂತ್‌ನಲ್ಲೂ ಉತ್ತಮ ಮತ ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next