Advertisement

ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ: 21 ಲಕ್ಷ ನಗದು ವಶ

12:40 PM May 04, 2022 | Team Udayavani |

ದಾವಣಗೆರೆ: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಇಬ್ಬರು  ಅಂತರ್ ರಾಜ್ಯ ಕಳ್ಳರನ್ನು  ಬಂಧಿಸಿ 21 ಲಕ್ಷ ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ.

Advertisement

ಚೆನೈನ ನರೇಶ್ ಹಾಗೂ ಬೆಳಗಾವಿ ಗಡಿಭಾಗದ ಲೋಂಡಾದ ಮಹಮ್ಮದ್ ಹುಸೇನ್ ಬಂಧಿತರು. ದಾವಣಗೆರೆ ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಲಕ್ಷಾಂತರ ಹಣದೋಚಿ ಪರಾರಿಯಾದ ಬಗ್ಗೆ ಎರಡು ಪ್ರಕರಣಗಳು ವರದಿಯಾಗಿತ್ತು. ಪ್ರಕರಣ ವರದಿಯಾಗಿ ಆರೋಪಿತರು ಪತ್ತೆಯಾಗದ ಕಾರಣ  ಪ್ರಕರಣಗಳ ತನಿಖೆಯನ್ನು ಹಾಗೂ ಪ್ರಕರಣದ ಆರೋಪಿತರನ್ನು ಪತ್ತೆ ಮಾಡಲು  ಪೊಲೀಸ್ ಉಪಾಧೀಕ್ಷಕರಾದ  ಬಿ.ಎಸ್.ಬಸವರಾಜ್  , ಡಿಸಿಎಫ್ ಬಿ ಘಟಕ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತಂಡವು  ಆರೋಪಿತರ ಪತ್ತೆ ಬಗ್ಗೆ ಚೆನ್ನೈ , ಬೆಳಗಾವಿ , ಓ.ಜಿ.ಕುಪ್ಪಂ , ಬೆಳಗಾವಿಯ ಗಡಿಭಾಗದ ಲೋಂಡಾ , ಬೆಂಗಳೂರು ಮುಂತಾದ ಕಡೆಗಳಲ್ಲಿ ತಿರುಗಾಡಿ ಮಾಹಿತಿ ಕಲೆ ಹಾಕಿದ್ದು ಖಚಿತ ಮಾಹಿತಿಯನ್ನಾಧರಿಸಿ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಚೆನ್ನೈ ಮೂಲದ ನರೇಶ ಮತ್ತು ಲೋಂಡಾ ಮೂಲದ ಮೊಹಮದ್ ಹುಸೇನ್  ಎಂಬುವರನ್ನು ಹಿಡಿದು ವಿಚಾರಣೆ ನಡೆಸಿದಾಗ ಗಮನ ಬೇರೆಡೆ ಸೆಳೆದು ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:ಪುತ್ತೂರು: ಲಾರಿ – ಆಕ್ಟಿವಾ ಅಪಘಾತ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು, ಓರ್ವ ಗಂಭೀರ

ಆರೋಪಿತರು ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ಒಟ್ಟು 6 ಲಕ್ಷ ಹಣ , ಹರಿಹರ ನಗರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 2 ಲಕ್ಷ, ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 13 ಲಕ್ಷ ಹಣ ಎಲ್ಲಾ ಸೇರಿ 4 ಪ್ರಕರಣಗಳಲ್ಲಿ ಒಟ್ಟು 21 ಲಕ್ಷ ರೂಪಾಯಿ  ವಶಪಡಿಸಿಕೊಳ್ಳಲಾಗಿದೆ.

Advertisement

ಪ್ರಕರಣದಲ್ಲಿ ಡಿವೈಎಸ್ ಪಿ ಬಿ.ಎಸ್.ಬಸವರಾಜ್,  ಡಿಸಿಆರ್‌ಬಿ ಘಟಕದ ಅಧಿಕಾರಿ ಸಿಬ್ಬಂದಿಗಳಾದ ಎಂ . ಆಂಜನಪ್ಪ ಎಎಸ್‌ಐ , ಕೆ.ಸಿ ಮಜೀದ್ , ಕೆ.ಟಿ.ಆಂಜನೇಯ , ಡಿ.ರಾಘವೇಂದ್ರ , ಯು.ಮಾರುತಿ, ಪಿ.ಸುರೇಶ್‌ , ಜೆ.ಎಚ್.ಆರ್.ನಟರಾಜ್ , ಈ.ಬಿ.ಅಶೋಕ , ಆರ್ ರಮೇಶ್ ನಾಯ್ಡ್ , ಬಸವರಾಜ್ , ಸಿ.ಎಸ್.ಬಾಲರಾಜ್ , ಸಿ.ಮಲ್ಲಿಕಾರ್ಜುನ್ , ಅರುಣಕುಮಾರ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.

ಡಿವೈಎಸ್ ಪಿ ಬಿ.ಎಸ್ ಬಸವರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next