Advertisement

ಅಂತರ್ ರಾಜ್ಯ ಎಟಿಎಂ ಕಾರ್ಡ್ ವಂಚಕ ಮೂಡಿಗೆರೆ ಪೋಲೀಸರ ಬಲೆಗೆ

06:13 PM Jun 16, 2022 | Team Udayavani |

ಮೂಡಿಗೆರೆ : ಹಲವರಿಗೆ ಸಹಾಯ ಕೇಳುವ ನೆಪದಲ್ಲಿ ವಂಚಿಸುತ್ತಿದ್ದ ಅಂತರ್ ರಾಜ್ಯ ಎಟಿಎಂ ವಂಚಕನೊಬ್ಬನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ತಂಬಿರಾಜು ಎನ್ನುವವನಾಗಿದ್ದು ತಮಿಳುನಾಡಿನ ತೇಣಿ ಜಿಲ್ಲೆಯಾವನಾಗಿದ್ದಾನೆ. ಈತನ ಮೇಲೆ ಹಿಂದೆ ತಮಿಳುನಾಡಿನಲ್ಲಿ ಒಟ್ಟು 11 ಪ್ರಕರಣಗಳು ತನಿಖಾ ಹಂತದಲ್ಲಿವೆ. ಬಂಧಿತನ ಬಳಿ 70 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್ ಗಳು. 60 ಗ್ರಾಂ ಚಿನ್ನ 35 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಮೇಲೆ ರಾಜ್ಯದಲ್ಲಿ 7 ಪ್ರಕರಣಗಳು ದಾಖಾಲಾಗಿದ್ದು ತನಿಖೆ ಮುಂದುವರೆದಿದೆ.

ವಿಚಾರಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ ಆರ್ ಪೇಟೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಹಾಗೂ ಬೆಂಗಳೂರಿನಲ್ಲಿ ಎಟಿಎಂ ಗ್ರಾಹಕರಿಗೆ ಮೋಸ ಮಾಡಿ ಹಣ ಪಡೆದು ಹಾಗೂ ಜ್ಯುವೆಲರಿ ಗಳಲ್ಲಿ ಮೋಸ ಮಾಡಿದ ಎಟಿಎಂ ಗಳಲ್ಲಿ ಸ್ವೈಪ್ ಮಾಡಿ ಚಿನ್ನವನ್ನು ಪಡೆಯುತ್ತಿರುವುದು ಬಯಲಾಗಿದೆ.

ಜೂನ್ 8 ರಂದು ಮೂಡಿಗೆರೆಯ ಕಾಫಿ ಬೆಳೆಗಾರರೊಬ್ಬರಿಗೆ ಮೂಡಿಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಈತ ಹಣವನ್ನು ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ನ್ನು ಬದಲಾಯಿಸಿಕೊಂಡು ಹೋಗಿ ಚಿಕ್ಕಮಗಳೂರು ಎಟಿಎಂನಲ್ಲಿ 25 ಸಾವಿರ ರೂ ಹಣವನ್ನು ಡ್ರಾ ಮಾಡಿ, ಚಿಕ್ಕಮಗಳೂರು ಅರಹಮ್ ಜ್ಯುವೆಲರಿ ಶಾಪ್ ನಲ್ಲಿ 75 ಸಾವಿರ ರೂ ಹಣವನ್ನು ಸ್ವೈಪ್ ಮಾಡಿ ಚಿನ್ನವನ್ನು ಖರೀದಿ ಮಾಡಿದ್ದ.

Advertisement

ಈ ಕುರಿತು ವಂಚನೆಗೊಳಗಾದ ವ್ಯಕ್ತಿ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪ್ರಕರಣವನ್ನು ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಪ ಅಧೀಕ್ಷಕರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ.

ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್ ಜೆಸಿ ಇವರ ಸಾರಥ್ಯದಲ್ಲಿ ಮೂಡಿಗೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದರ್ಶ, ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಲೋಹಿತ್, ವಸಂತ್,ಮನು ಕುಮಾರ, ಇವರೊಂದಿಗೆ ಜೂನ್ 11 ರಂದು ಮಡಿಕೇರಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next