Advertisement

Yogesh Kadyan; 19 ವರ್ಷದ ಗ್ಯಾಂಗ್ ಸ್ಟರ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್

01:59 PM Oct 27, 2023 | Team Udayavani |

ಹೊಸದಿಲ್ಲಿ: ಹರ್ಯಾಣದ 19 ವರ್ಷದ ಗ್ಯಾಂಗ್ ಸ್ಟರ್ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ಯೋಗಿಶ್ ಕದ್ಯಾನ್ ಎಂಬಾತನ ವಿರುದ್ಧ ಕೊಲೆ ಯತ್ನ, ಕ್ರಿಮಿನಲ್ ಪಿತೂರಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಆರೋಪವಿದೆ.

Advertisement

ಈ ವಿಷಯದ ಗೌಪ್ಯ ಮೂಲಗಳ ಪ್ರಕಾರ, ಯೋಗಿಶ್ ಕದ್ಯಾನ್ ಭಾರತದಿಂದ ತಪ್ಪಿಸಿಕೊಂಡು ಯುಎಸ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ದರೋಡೆಕೋರ-ಭಯೋತ್ಪಾದನಾ ಜಾಲದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದ ಕಾರ್ಯಾಚರಣೆಯ ನಂತರ, ಹಲವಾರು ದರೋಡೆಕೋರರು ಭೂಗತರಾಗಿದ್ದಾರೆ ಅಥವಾ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಭಾರತದಿಂದ ಪಲಾಯನ ಮಾಡಿದ್ದಾರೆ. ಕಾಡ್ಯನ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಪರಾರಿಯಾಗಿರುವ ಸಾಧ್ಯತೆ ಇದೆ.

ಭಾರತ ಮತ್ತು ಕೆನಡಾದ ನಡುವಿನ ಸಂಬಂಧ ಸರಿಯಿಲ್ಲದಿರುವ ಸಮಯದಲ್ಲಿ ಈ ವಿಚಾರ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.