Advertisement
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್‌ಫೋನ್‌ಗಳ ಮೂಲಕ ಇಂಟರ್‌ನೆಟ್ ದಾಸ್ಯಕ್ಕೆ ಒಳಗಾಗಿ ಮಾನಸಿಕ ಖನ್ನತೆ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಟರ್‌ನೆಟ್ ಬಳಕೆಯಿಂದ ಆಗುವ ಸಮಸ್ಯೆ, ಸೈಬರ್ ನೈತಿಕ ನಿಯಮಗಳು ಮತ್ತಿತರ ವಿಚಾರಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸೋಮವಾರ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಮಂಡಳಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ. ಈ ನಡುವೆ ಮಾಜಿ ರಾಷ್ಟ್ರಪತಿ ದಿ| ಡಾ| ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯ ಕೆಲ ಭಾಗಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲೂ ಚಿಂತನೆ ನಡೆಸಲಾಗಿದೆ. Advertisement
ಇಂಟರ್‌ನೆಟ್ ಬಳಕೆ ಹಾನಿ: ಪಠ್ಯಕ್ಕೆ ಸೇರ್ಪಡೆ?
06:00 AM Jan 15, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.