Advertisement

ಶಿಕ್ಷಣಕ್ಕೆ ಪೂರಕವಾಗಿರಲಿ ಇಂಟರ್‌ನೆಟ್‌

10:00 PM Aug 13, 2019 | mahesh |

ಮನುಷ್ಯನ ಕೈಗೆ ಮೊಬೈಲ್‌ ಬಂದು ಬಹಳಷ್ಟು ವರ್ಷಗಳೇ ಆಯ್ತು. ಇಂಟರ್‌ನೆಟ್‌ ಎಂಬ ತಂತ್ರಜ್ಞಾನ ಕೂಡ ಮೊಬೈಲ್‌ ಅನ್ನು ಹಿಂಬಾಲಿಸಿಕೊಂಡು ಬಂದು ಇಂದು ಸ್ಮಾರ್ಟ್‌ ಯುಗ ಸೃಷ್ಟಿಯಾಗಿದೆ. ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ ಇದೆ ಹುಡುಕೋಣ ಎಂಬ ಮಟ್ಟಿಗೆ ನಾವು ಬೆಳೆದಿದ್ದೇವೆ. ಗೂಗಲ್‌ನ ಸಹಾಯದಿಂದ ಜಗತ್ತಿನ ಕೊನೆಯ ಊರಿನ ಮಾಹಿತಿ ಅಷ್ಟೇ ಯಾಕೆ ಚಂದಿರ ಬಗೆಗಿನ ಮಾಹಿತಿಗಳನ್ನೂ ಕೂಡ ಪಡೆಯಬಹುದು. ಈ ತಂತ್ರಜ್ಞಾನಗಳ ಉಗಮದಿಂದಾಗಿ “ಗೋಬಲ್‌ ವಿಲೇಜ್‌’ ಎಂಬ ವಿಷಯ ಸೃಷ್ಟಿಯಾಗಿದೆ.

Advertisement

ಏನೇ ಸಂಶಯವಿದ್ದರೂ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸುವ ಜಮಾನದಲ್ಲಿ ನಾವಿದ್ದೇವೆ. ಶಿಕ್ಷಣ ಕ್ಷೇತ್ರ ಕೂಡ ಇಂಟರ್‌ನೆಟ್‌ ಧಾರಾಳವಾಗಿ ಬಳಕೆಯಾಗುತ್ತಿದೆ. ಶಿಕ್ಷಣಕ್ಕೆ ಸ್ಮಾರ್ಟ್‌ ಟಚ್‌ ನೀಡಿ ಹೊಸ ಆಯಾಮವನ್ನು ನೀಡಲಾಗಿದೆ. ಶಾಲೆಗಳಲ್ಲಿ ಕಪ್ಪು ಹಲಗೆ ಮಾಯವಾಗಿ ಸ್ಮಾರ್ಟ್‌ ಸ್ಕ್ರೀನ್‌ಗಳು ಬಳಕೆಗೆ ಬಂದಿವೆ.

ಯಾವುದೋ ಅನಿವಾರ್ಯ ಕಾರಣಕ್ಕೆ ಹೆತ್ತವರು ಮಕ್ಕಳ ಕೈಗೆ ಮೊಬೈಲ್‌ಗ‌ಳನ್ನು ನೀಡುತ್ತಾರೆ. ಮಕ್ಕಳ್ಳೋ ಅವುಗಳನ್ನು ಗೇಮಿಂಗ್‌, ಸೆಲ್ಫಿ ಹೀಗೆ ಹಲವು ಕಾಲಹರಣಕ್ಕಾಗಿರುವ ಆ್ಯಪ್‌ಗ್ಳನ್ನು ಬಳಸಿ ದಿನದೂಡುತ್ತಿದ್ದಾರೆ. ಹೆತ್ತವರಂತೂ ಮಕ್ಕಳು ಯಾವ ರೀತಿ ಮೊಬೈಲ್‌ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ಗಮನಹರಿಸುವುದಿಲ್ಲ. ಶಿಕ್ಷಣಕ್ಕೆ ಇಂಟರ್‌ನೆಟ್‌ ಬಳಕೆಯನ್ನು ಯಥೇತ್ಛವಾಗಿ ಉಪಯೋಗಿಸಿದರೆ ಯಶಸ್ವಿ ವಿದ್ಯಾರ್ಥಿಯಾಗಿ ಮೂಡಿಬರಬಹುದು.

ಆ್ಯಪ್‌ಗ್ಳ ಸದ್ಬಳಕೆ
ಮೊಬೈಲ್‌ ನಮ್ಮ ಬದುಕಾಗಿರುವುದರಿಂದ ಮೊಬೈಲ್‌ನಲ್ಲೇ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ಕಲಿಕೆಗೆ ಪೂರಕವಾದ ಆ್ಯಪ್‌ಗ್ಳು ಬೇಕಾದಷ್ಟಿವೆ. ಅವುಗಳಲ್ಲಿ ಯಾವುದು ಸೂಕ್ತವೋ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿರುವ ಮಾಹಿತಿಗಳನ್ನು ಪಡೆದು ಜ್ಞಾನ ಪಡೆದುಕೊಳ್ಳಬಹುದು.

ವಿಷಯದ ಕುರಿತು ಹೆಚ್ಚಿನ ಮಾಹಿತಿ
ಇಂಟರ್‌ನೆಟ್‌ನಲ್ಲಿ ಯಾವುದೇ ವಿಷಯದ ಕುರಿತು ಹುಡುಕಲು ಹೊರಟರೆ ಆ ವಿಷಯದ ಕುರಿತು ನಡೆದ ಹಲವು ಅಧ್ಯಯನಗಳು, ಸಮೀಕ್ಷೆಗಳ ಪಟ್ಟಿ ಅರ್ಧ ಸೆಕೆಂಡ್‌ಗಳಲ್ಲಿ ನಮ್ಮ ಮುಂದೆ ಬರುತ್ತದೆ. ಆಗ ವಿಷಯಗಳನ್ನು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ವಿಷಯಗಳ ಕುರಿತು ನಿಖರ ಮಾಹಿತಿಗಳು ದೊರೆಯುವವು.

Advertisement

ವಿಷಯ ಲಭ್ಯ
ಪಠ್ಯದಲ್ಲಿ ಚಿಕ್ಕ ಸಂಶಯವಿದ್ದರೆ ನೀವೇ ಅವುಗಳ ಕುರಿತು ಹುಡುಕಾಟ ನಡೆಸಿದರೆ ನಿಮ್ಮ ಸಂಶಯ ದೂರವಾಗುವುದು ಮಾತ್ರವಲ್ಲದೆ ಆ ಹುಡುಕಾಟದ ವೇಳೆ ಹೊಸ ಹೊಸ ವಿಷಯಗಳನ್ನು ಮೇಲೆ ಕಣ್ಣು ಹೊರಳುವುದರಿಂದ ಜ್ಞಾನ ವೃದ್ಧಿಸಿಕೊಳ್ಳಲು ಇಂಟರ್‌ನೆಟ್‌ ಸಹಕರಿಸುತ್ತದೆ.

ಮಾಹಿತಿ ಸಂಗ್ರಹಿಸಿ
ಕಲಿಕಾ ವಿಧಾನದಲ್ಲಿ ಇಂಟರ್‌ನೆಟ್‌ ಬಳಸುವಾಗ ಕೇವಲ ಮಾಹಿತಿ ಸಂಗ್ರಹಕ್ಕೆ ಒತ್ತು ನೀಡಬೇಕು. ಅದರ ಬದಲು ಅಲ್ಲಿರುವ ವಿಷಯಗಳನ್ನೇ ಭಟ್ಟಿ ಇಳಿಸುವಿಕೆಗೆ ಬಳಕೆ ಸಲ್ಲ. ಈ ಅಭ್ಯಾಸ ನಿಮ್ಮ ಯೋಜನಾ ಲಹರಿ ಕುಂಠಿತಗೊಳಿಸುತ್ತದೆ. ಇಂಟರ್‌ನೆಟ್‌ನಿಂದ ವಿಷಯಗಳನ್ನು ಸಂಗ್ರಹಿಸಿ, ಅರ್ಥೈಸಿಕೊಂಡು ಅವುಗಳನ್ನು ನಿಮ್ಮ ವಾಕ್ಯಗಳಲ್ಲಿ ಬರೆಯಲಾರಂಭಿಸಿದರೆ ನಿಮ್ಮ ಬರವಣಿಗೆಗೆ ಹೆಚ್ಚಿನ ತೂಕ ಬರುತ್ತದೆ.

ಆರ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next