ವಿಜಯಪುರ: ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಜಾಲತಾಣದಲ್ಲಿಯೇ ಉತ್ತರ ಕರ್ನಾಟಕ ಭಾಗದ ಅನೇಕ ಪ್ರಸಿದ್ಧ ಸ್ಥಳಗಳು ಉಲ್ಲೇಖೀತವಾಗಿಲ್ಲ. ಕೇವಲ ಬೆರಳಣಿಕೆಯಷ್ಟು ಸ್ಥಳಗಳು ಮಾತ್ರ ಜಾಲತಾಣಗಳಲ್ಲಿವೆ ಎಂದು ಅಕ್ಕಮಹಾದೇವಿ ಮಹಿಳಾ ವಿ.ವಿ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಪಿ.ಜಿ. ತಡಸದ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ಅಧಿಕೃತ ಜಾಲತಾಣಗಳಲ್ಲಿ ವಿಜಯಪುರದ ಗೋಳಗುಮ್ಮಟ ಸೇರಿದಂತೆ ಕೆಲವೇ ಕೆಲವು ಸ್ಮಾರಕಗಳ ಬಗ್ಗೆ ಮಾಹಿತಿ ಇದೆ. ಆಧ್ಯಾತ್ಮಿಕ ಸ್ಥಳಗಳ ಬಗ್ಗೆಯೂ ನೋಡಿದಾಗ ವಿಜಯಪುರದ ಜ್ಞಾನಯೋಗಾಶ್ರಮ, ಬಸವನ ಬಾಗೇವಾಡಿಯ ಐತಿಹಾಸಿಕ ಬಸವೇಶ್ವರ ದೇವಾಲಯ ಸಹ ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದರು.
ಸಾಮಾಜಿಕ ಜಾಲತಾಣ, ಅಂತರ್ಜಾಲ ಅಭಿವೃದ್ಧಿ ಪ್ರವಾಸೋದ್ಯಮ ಅಭಿವೃದ್ಧಿಗೆ ವರದಾನವಾಗಿ ಪರಿಗಣಿಸಿವೆ. ಈ ಕಾರಣದಿಂದಾಗಿಯೇ ಆಧುನಿಕ ತಂತ್ರಜ್ಞಾನಕ್ಕೆ ಪ್ರವಾಸೋದ್ಯಮ ನಿತ್ಯ ಧನ್ಯವಾದ ಅರ್ಪಿಸಬೇಕಾಗಿರುವುದು ಅವಶ್ಯವಾಗಿದೆ ಎಂದರು. ಈ ಹಿಂದೆ ಕೇವಲ ಒಂದು ಬಸ್, ಅಥವಾ ಟ್ರೈನ್‌ಬುಕ್ ಮಾಡಬೇಕಾದರೆ ದೊಡ್ಡ ಕ್ಯೂನಲ್ಲಿ ನಿಲ್ಲಬೇಕಾಗಿತ್ತು. ಹೀಗಾಗಿ ಪ್ರವಾಸ “ಪ್ರಯಾಸ’ವಾಗಿ ಪರಿಗಣಿತವಾಗುತ್ತಿತ್ತು. ಆದರೆ ಈಗ ಬೆರಳತುದಿಯಲ್ಲಿಯೇ ಕ್ಷಣಾರ್ಧದಲ್ಲಿಯೇ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿತವಾಗಿದೆ.
ಟಿಕೆಟ್ ಅಷ್ಟೇ ಅಲ್ಲ ಎಲ್ಲ ವಿವಿಧ ಸೌಕರ್ಯಗಳು ಮೊಬೈಲ್ ನಲ್ಲಿಯೇ ಲಭ್ಯವಿರುವುದು ಪ್ರವಾಸಿಗರಿಗೆ ವರದಾನವಾಗಿದೆ ಎಂದರು. ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಮಾತನಾಡಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಕ್ಯಾಪ್ಟನ್ ಮಹೇಶ ಕ್ಯಾತನ್, ಜಿಪಂ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರ, ಸಾಮಾಜಿಕ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್ ಪಾಲ್ಗೊಂಡಿದ್ದರು.
15.2 ಲಕ್ಷ ಕೋಟಿ ಆದಾಯ ಪ್ರವಾಸೋದ್ಯಮದಿಂದಾಗಿಯೇ ಪ್ರತಿ ವರ್ಷ 15.24 ಲಕ್ಷ ಕೋಟಿ ರೂ. ಆದಾಯ ಹರಿದು ಬರುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಿಂದಾಗಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ 416.22 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.
ಮೆಡಿಕಲ್ ಟೂರಿಸಂ, ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಆಧಾರಿತ ಪ್ರವಾಸೋದ್ಯಮ ಹೀಗೆ ಹಲವು ವಿಧವಾಗಿ ಪ್ರವಾಸೋದ್ಯಮವನ್ನು ವಿಂಗಡನೆ ಮಾಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಟೂರಿಸಂನ ಹಬ್ ಆಗಿ ಬೆಳವಣಿಗೆಯಾಗುತ್ತಿದೆ. ಡಾ| ಪಿ.ಜಿ. ತಡಸದ, ಮಹಿಳಾ ವಿವಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ