Advertisement

ಅಂತರ್ಜಾಲದ ಆಟ

06:00 AM Aug 17, 2018 | |

ಭಾರತದಲ್ಲಿ 200 ಮಿಲಿಯದಷ್ಟು ಮಂದಿ ವಾಟ್ಸಾಪ್‌ ಬಳಕೆ ಮಾಡುವವರಿದ್ದಾರೆ. 241 ಮಿಲಿಯದಷ್ಟು ಮಂದಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ. ಬ್ಲೂವೇಲ್‌ ಆಡಿ ತಮ್ಮ ಜೀವನವನ್ನೇ ಕಳೆದುಕೊಂಡ ಮಕ್ಕಳ ಸಂಖ್ಯೆ ದೇಶಾದ್ಯಂತ 130ಕ್ಕೂ ಅಧಿಕ! 

Advertisement

ಈ ಅಂತರ್ಜಾಲ ಇನ್ನೆಷ್ಟು ಮಕ್ಕಳ ಜೀವ ತೆಗೆಯಲಿದೆಯೋ?
ಇತ್ತೀಚಿಗಿನ ಹೈಟೆಕ್‌ ಯುಗದಲ್ಲಿ ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ತುಂಬಾ ಮುಂದುವರೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಚಾಕ್‌ ಬದಲು projector ಮೂಲಕ ಅಥವಾ ಗಣಕಯಂತ್ರಗಳ ಸಹಾಯದಿಂದ ಪಾಠ ನಡೆಯುತ್ತಿದೆ, ಹೀಗೆ ಹತ್ತು ಹಲವಾರು ಹೈಟೆಕ್‌ ಯಂತ್ರಗಳಿಂದ ಪುಸ್ತಕ ಹಿಡಿಯುವ ಕೈಯಲ್ಲಿ ಮೊಬೈಲ್‌ ಬಂದು ಕುಳಿತಿದೆ. ಮೊಬೈಲ್‌ ಟವರುಗಳು ರಾರಾಜಿಸುತ್ತಿದ್ದಾವೆ. ತಾನು ಎಲ್ಲೇ ಹೋದರೂ ಕೈಯಲ್ಲೊಂದು ಮೊಬೈಲ್‌ ಇರಲೇಬೇಕು. ಕಾಲೇಜಿಗೆ ಹೋಗುವಾಗ ಬರುವಾಗ ಬಸ್‌ನಲ್ಲಿ ಎಲ್ಲೆಡೆ ಕಿವಿಯಲ್ಲಿ ಹಾಡು ಕೇಳಿಸುತ್ತಿರಬೇಕು. ಹೊರಗಿನ ಪ್ರಪಂಚದ ಅರಿವೇ ಇಲ್ಲ. ಅಂತರ್ಜಾಲ ಕೇವಲ ಮಾಹಿತಿಗಾಗಿ ಸೀಮಿತವಾಗಿರದೆ, ಬಂಧುಗಳನ್ನು ದೂರಮಾಡಿ ವಾಟ್ಸಾಪ್‌, ಫೇಸುºಕ್‌ ಹೀಗೆ ಹಲವಾರು ಆ್ಯಪ್‌ಗ್ಳನ್ನು ತನ್ನ ನೆಂಟರನ್ನಾಗಿ ಮಾಡಿಕೊಂಡು ಅದರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ತಾನು ಇಷ್ಟು ಶೇಕಡ ಪಡೆಯಬೇಕೆಂದು ನಿರೀಕ್ಷೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ, ಆದರೆ, ಕ್ಯಾಂಡಿಕ್ರಶ್‌, ಕ್ಲಾಶ್‌ ಆಫ್ ಕ್ಲಾನ್ಸ್‌ ಗೇಮ್‌ನಲ್ಲಿ, ಫೇಸ್‌ಬುಕ್‌ ಗೆಳೆಯರಲ್ಲಿ ತಾನು ಎಲ್ಲರಿಗಿಂತ ಮೇಲಿರಬೇಕೆಂದು ದಿನದಿಂದ ದಿನಕ್ಕೆ ಅದರ ಹುಚ್ಚಿನಲ್ಲಿ ಆ ಅಂತರ್ಜಾಲದ ಗುಂಗಿನಲ್ಲಿ ಮುಳುಗಿ ಹೋಗಿದ್ದಾರೆ. 

ಲ್ಯಾಂಡ್‌ಲೈನ್‌ ಕಾಲ ಬದಲಾಗಿ ಮೊಬೈಲ್‌ ಬಂತು, ನಂತರ ಕರೆಗೆ ಸೀಮಿತವಾಗಿರದೆ ವಿಡಿಯೋಕಾಲ್‌, ಯೂಟ್ಯೂಬ್‌ ಶುರುವಾಯಿತು. ಇದರಿಂದ  ಇನ್ನೂ ಪ್ರಪಂಚವನ್ನು ನೋಡದೇ ಇರುವ ಅದೆಷ್ಟೋ ಪುಟ್ಟ ಕಂದಮ್ಮಗಳ ಅತ್ಯಾಚಾರ ನಡೆಯುತ್ತಿದೆ, ಮೊಬೈಲ್‌ ತಂತ್ರಜ್ಞಾನ ಯೋಚಿಸಲಾರದಷ್ಟು ಹೆಮ್ಮರವಾಗಿ ಬೆಳೆದುನಿಂತಿದೆ. ವಿದ್ಯಾರ್ಥಿಗಳಿಗೆ ಅಂತರ್ಜಾಲದಲ್ಲಿ ಅಪ್ಪ-ಅಮ್ಮ ಬಿಟ್ಟು ತಮಗೆ ಬೇಕಾದ ಎಲ್ಲವೂ ಇಲ್ಲಿಯೇ ದೊರಕುತ್ತದೆ. ಅಂತಹ ಪರಿಸ್ಥಿತಿಗೆ ಈ ಸಮಾಜ ಬಂದು ನಿಂತಿದೆ.

ಈ ಡಿಜಿಟಲ್‌ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಓದಿಗೆ ಗಮನ ಕೊಡದೆ ಅದನ್ನು ಮೀರಿ ದಿನದ ಮುಕ್ಕಾಲು ಭಾಗ ಅದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಮ್ಮ ಭವಿಷ್ಯವನ್ನೇ ಮರೆತು ಅದರಲ್ಲಿಯೇ ಮಗ್ನರಾಗಿದ್ದಾರೆ. ಹೌದು, ಅಂತರ್ಜಾಲದ ಬಳಕೆ ಬೇಕು. ಆದರೆ, ಮಿತಬಳಕೆಯಲ್ಲಿದ್ದರೆ ಸಾಕಿತ್ತು. ಆದರೆ, ಇದರ ಜಾಲ ಇನ್ನೆಲ್ಲೋ ತಲುಪಿದೆ, ಈ ರಾಕ್ಷಸ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಅಂತರ್ಜಾಲ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆದು ತಾನೇ ಅವರನ್ನು ಪ್ರಪಾತಕ್ಕೆ ಕೊಂಡೊಯ್ಯುತ್ತಿದೆ. ಆದರೆ, ಜನರಿಗೆ ಇದರ ಪರಿವೇ ಇಲ್ಲದೆ ಅಂತರ್ಜಾಲದಲ್ಲಿ ಮುಳುಗಿಹೋಗಿ¨ªಾರೆ.

ಚೈತ್ರಾ
ದ್ವಿತೀಯ ಬಿ. ಎ. ಪತ್ರಿಕೋದ್ಯಮ, ಎಂಜಿಎಂ ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next