Advertisement

ಯೋಗದ ಮೂಲ ರೂಪ ಉಳಿಸಿ

12:04 AM Jun 22, 2019 | Sriram |

ಉಡುಪಿ: ಯೋಗಕ್ಕೆ ಪ್ರಸ್ತುತ ವಿಶ್ವಾದ್ಯಂತ ಮನ್ನಣೆ ದೊರೆತಿದ್ದು ರಾಜ್ಯದಲ್ಲಿ ಶಾಲೆಗಳಲ್ಲಿ ಸಹ ದೈಹಿಕ ಶಿಕ್ಷಣದಲ್ಲಿ ಯೋಗದ ಅಭ್ಯಾಸ ನಡೆಯುತ್ತಿದೆ. ಈ ವೇಗದಲ್ಲಿ ಯೋಗದ ಮೂಲ ಸ್ವರೂಪ ಬದಲಾವಣೆಯಾಗದಂತೆ ಯೋಗದ ಆಚರಣೆ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

Advertisement

ಅವರು ಶುಕ್ರವಾರ ಆಯುಷ್‌ ಇಲಾಖೆ, ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಅಜ್ಜರಕಾಡು ಮಹಿಳಾ ಕಾಲೇಜು ಸಹಭಾಗಿತ್ವದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ಕಾಲೇಜಿನ ಪ್ರಾಂಶುಪಾಲ ಡಾ| ರಾಜೇಂದ್ರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್‌, ಜಿಲ್ಲಾ ಆಯುರ್ವೇದ ವೈದ್ಯರ ಸಂಘದ ಅಧ್ಯಕ್ಷ ಡಾ| ನಾರಾಯಣ ಅಂಚನ್‌, ಸಂಪನ್ಮೂಲ ವ್ಯಕ್ತಿ ಜೋತ್ಸ್ನಾ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್‌ ಇಲಾಖೆಯ ಯೋಗ ಶಿಕ್ಷಕಿ ಲಲಿತಾ ಕೆದ್ಲಾಯ ಅವರನ್ನು ಸಮ್ಮಾನಿಸಲಾಯಿತು. ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಅಲಕಾನಂದ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next