Advertisement

ಮಹಿಳಾ ದಿನಾಚರಣೆ: ಗೂಗಲ್ ಡೂಡಲ್ ನಿಂದ ಮಹಿಳೆಯರಿಗೆ ವಿಶೇಷ ‘ವಿಡಿಯೋ ಗೌರವ’ !

10:11 AM Mar 09, 2020 | Mithun PG |

ನವದೆಹಲಿ: ಸರ್ಚ್ ಎಂಜಿನ್ ದೈತ್ಯ ಗೂಗಲ್  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶೇಷವಾದ  ಡೂಡಲ್ ಮತ್ತು ಆ್ಯನಿಮೇಟೆಡ್ ವಿಡಿಯೋದೊಂದಿಗೆ ಗೌರವ ಸಲ್ಲಿಸಿದೆ.
ನ್ಯೂಯಾರ್ಕ್ ಮತ್ತು ಲಂಡನ್ ಮೂಲದ ಅತಿಥಿ ಕಲಾವಿದರಾದ ಜೂಲಿ ವಿಲ್ಕಿನ್ಸನ್ ಮತ್ತು ಮೇಕೆರಿ ಸ್ಟುಡಿಯೋದ ಜೊಯಾನ್ನೆ ಹಾರ್ಸ್‌ಕ್ರಾಫ್ಟ್ ಮತ್ತು ಜುರಿಚ್ ಮೂಲದ ಅತಿಥಿ ಆನಿಮೇಟರ್‌ಗಳಾದ ಮರಿಯನ್ ವಿಲ್ಲಮ್ ಮತ್ತು ಡ್ರಾಸ್ಟಿಕ್, ಡಾಫ್ನೆ ಅಬೆರ್‌ಹಾಲ್ಡೆನ್ ಅವರು ಈ  ಆ್ಯನಿಮೇಟೆಡ್ ವಿಡಿಯೋವನ್ನು ಮತ್ತು ಡೂಡಲ್ ಅನ್ನು ರಚಿಸಿದ್ದಾರೆ.ಈ  ಆ್ಯನಿಮೇಷನ್ ಮಹಿಳಾ ದಿನದ ಇತಿಹಾಸ ಪ್ರತಿನಿಧಿಸುವುದು ಮಾತ್ರವಲ್ಲದೆ  ವಿವಿಧ ತಲೆಮಾರಿನ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದೆ.

Advertisement

ಗೂಗಲ್ ಡೂಡಲ್‌ನಲ್ಲಿ, ಕಪ್ಪು-ಬಿಳುಪು ಪದರವು(ಲೇಯರ್)  ಜಗತ್ತಿನಾದ್ಯಂತ 1800ರ ದಶಕದ ಅಂತ್ಯದಿಂದ 1930 ರವರೆಗೆ ನಡೆದ ಕಾರ್ಮಿಕ ಚಳುವಳಿಗಳನ್ನು ನಡೆಸಿದ ಮಹಿಳೆಯರನ್ನು ಪ್ರತಿಬಿಂಬಿಸುತ್ತದೆ. ಎರಡನೆಯ ಪದರವು 1950 ರಿಂದ 1980 ರವರೆಗಿನ ಮಹಿಳೆಯರ ಸಾಧನೆಯನ್ನು ತೋರ್ಪಡಿಸುತ್ತದೆ, ಹೊರಗಿನ ಪದರವು 1990 ರಿಂದ ಇಂದಿನವರೆಗಿನ ಮಹಿಳೆಯರನ್ನು ಸಂಕೇತಿಸುತ್ತದೆ.

ಜಾಗತಿಕವಾಗಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next