Advertisement
ಸಂಸ್ಥೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಚೇರಮನ್ ಪ್ರೊ. ಬಸವರಾಜ ಕೊಣ್ಣೂರ, ಹೊಸ ಮಾದರಿಯಲ್ಲಿ ಕೇಂದ್ರ ಹಾಗೂ ರಾಜ್ಯ ರಾಜಧಾನಿಗಳಲ್ಲಿ ದೊರಕುವಂಥ ಸೌಲಭ್ಯಗಳನ್ನು ಹೊತ್ತು ಸದ್ಯ ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಪ್ರಮುಖವಾಗಿ ಮೂಲ ಗಣಿತ ವಿಷಯಗಳ ಸಂಯೋಜನೆ ಹೊತ್ತು, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಪ್ರತಿ ಶನಿವಾರ ರವಿವಾರ ಸಿಎ ವಿಶೇಷ ತರಬೇತಿ ನೀಡಲಾಗುವುದು. ಟ್ಯಾಲಿ(ಇಆರ್‌ಪಿ), ಸಿಎ, ಫೌಂಡೇಶನ್ ಕೋರ್ಸ್ ಗಳನ್ನು ಒದಗಿಸಲಾಗುವದೆಂದು ತಿಳಿಸಿದರು. ಕಡ್ಡಾಯವಾಗಿ ವಾಣಿಜ್ಯ ವಿಭಾಗದ ಪಪೂ ಎರಡು ವರ್ಷಗಳಲ್ಲಿನ ಅವಧಿಯಲ್ಲಿ ಹೊರ ಜಗತ್ತಿನ ಶಿಕ್ಷಣ, ಶಿಸ್ತು ಹಾಗೂ ವಾಣಿಜ್ಯವಾಗಿ ಪ್ರಗತಿ ಹೊಂದಿದ ದೇಶಗಳ ವೀಕ್ಷಣೆಗಾಗಿ ಸಿಂಗಾಪುರ ಹಾಗೂ ದುಬೈ ಪ್ರವಾಸವನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಕನಸ್ಸುಗಳ ದೊಡ್ಡದಾಗಿವೆ. ಅವುಗಳಿಗೆ ಪುಷ್ಠಿ ನೀಡುವುದು ನಮ್ಮೆಲ್ಲರ ಕೆಲಸ. ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಭಾಷೆಯಾದ ಫ್ರೆಂಚ್, ಸ್ಪಾನಿಷ್ ಹಾಗೂ ಜರ್ಮನ್ ಭಾಷೆಗಳಲ್ಲಿ ಒಂದನ್ನು ಕಲಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಅನುಕೂಲವಾಗಲಿದೆ ಎಂದು ಕೊಣ್ಣೂರ ತಿಳಿಸಿದರು. ಒಟ್ಟಾರೆ ಅಮೂಲಾಗ್ರ ಬದಲಾವಣೆಯೊಂದಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣ ರಂಗದಿಂದ ವಂಚಿತರಾಗದಿರಲೆಂದು ವಿನೂತನ ಹಾಗೂ ಹೈಟೆಕ್ ಮಾದರಿಯ ವಾಣಿಜ್ಯ ಮಹಾವಿದ್ಯಾಲಯ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ ಎಂದರು. ಮೇ 12 ರವಿವಾರದಂದು ಬೆಳಗ್ಗೆ ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆಯನ್ನು ಕರೆಯಲಾಗಿದ್ದು, ಇಚ್ಛೇಯುಳ್ಳವರು 95918-62106 ಸಂಪರ್ಕಿಸಬಹುದಾಗಿದೆ ಎಂದು ಆಡಳಿತಾಧಿಕಾರಿ ಶೀತಲ್ ಕೊಣ್ಣೂರ ತಿಳಿಸಿದ್ದಾರೆ. Advertisement
ಅಂತಾರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯ ಪ್ರಾರಂಭ
10:57 AM May 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.