Advertisement

ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

12:02 PM Feb 11, 2018 | Team Udayavani |

ಬೆಂಗಳೂರು: ಯಲಹಂಕ ಸಮೀಪದ ರೇವಾ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್‌ ಹಾಗೂ ಏಐಇಇ ಬೆಂಗಳೂರು ವಿಭಾಗ ಜಂಟಿ ಸಹಭಾಗಿತ್ವದಲ್ಲಿ ಶುಕ್ರವಾರ ಮತ್ತು ಶನಿವಾರ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್ ಮತ್ತು ಸಂವಹನ ಕ್ಷೇತ್ರದ ನವೀನ ಆವಿಷ್ಕಾರಗಳ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ಐಸಿಎಇಸಿಸಿ-2018 ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮವನ್ನು ಬಾರ್ಸಿಲೋನಾ ಸ್ಪೇನ್‌ನ ರಾಮನ್‌ ಸ್ಕೂಲ್‌ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಕ್ಟಸ್‌ ಆಂಟಿನಾನೇ ಸಂಸ್ಥೆಯ ಮುಖ್ಯ ಸಂಶೋಧಕ ಡಾ. ಜೇಮ್‌ ಅಂಜೆರಾ ಉದ್ಘಾಟಿಸಿದರು. “ಯುವಕರು ಸಂಶೋಧನೆಯಲ್ಲಿ ಆಸಕ್ತಿ ತೋರಿದರೆ ಅದು ವಿಶ್ವವಿದ್ಯಾಲಯ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂಬ ಭಾರತರತ್ನ ಅಬ್ದುಲ್‌ ಕಲಾಂ ಅವರ ಅಭಿವೃದ್ಧಿ ಬಗೆಗಿನ ಕನಸಿನ ಹೇಳಿಕೆಯನ್ನು ಡಾ. ಜೇಮ್‌ ಅಂಜೆರಾ ಅವರು, ತಮ್ಮ ಮಾತಿನ ನಡುವೆ ಉಲ್ಲೇಖೀಸಿದರು.

ಸಮ್ಮೇಳನದ ಅಧ್ಯಕ್ಷ, ರೇವಾ ವಿವಿ ಕುಲಾಧಿಪತಿ ಡಾ. ಶ್ಯಾಮರಾಜು ಮಾತನಾಡಿ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಬೋಧಿಸಲು ಶಿಕ್ಷಕರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆಗಳು ನೆರವಾಗಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಐಇಇಇ ಬೆಂಗಳೂರು ವಿಭಾಗದ ಮುಖ್ಯಸ್ಥ ಸುಧೀಂದ್ರ ಕೌಶಿಕ್‌, ವಿವಿ ಉಪಕುಲಪತಿ ಡಾ. ಎಸ್‌.ವೈ. ಕುಲಕರ್ಣಿ, ವಿವಿ ಕುಲಪತಿ ಡಾ. ಎಂ. ಧನಂಜಯ, ಡಾ. ಎನ್‌. ರಮೇಶ್‌, ಡಾ. ರಾಜಶೇಖರ ಸಿ. ಬೇರಾದಾರ್‌, ಪ್ರೊ. ಅನುಪಮಾ, ಪ್ರೊ. ಸುಗಾಧ, ಪ್ರೊ. ಆರ್ಯಲಕ್ಷೀ, ಡಾ. ವೆಂಕಟ್‌ ಶಿವಾರೆಡ್ಡಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next