Advertisement

ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಕಾಗದಗಾರ ಚಿತ್ರ ಆಯ್ಕೆ

06:22 PM Dec 14, 2019 | Suhan S |

ರಾಣಿಬೆನ್ನೂರು: ನಗರದ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ನಾಮದೇವ ಕಾಗದಗಾರ ಅವರು ಸೆರೆ ಹಿಡಿದ ನಿಸರ್ಗ ವಿಭಾಗದ ಮೂರು ಚಿತ್ರಗಳು ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಆಯ್ಕೆಯಾಗಿವೆ.

Advertisement

ಪಶ್ಚಿಮ ಬಂಗಾಳದ ಫೋಟೋ ಹಂಟರ್‌ ಇಂಟರ್‌ ನ್ಯಾಷನಲ್‌ ಸರ್ಕ್ನೂಟ್‌, ಫೋಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ನಾಮದೇವ ಕಾಗದಗಾರ ಸೆರೆ ಹಿಡಿದ ರಾಬರ್‌ ಫ್ಲೈ ವಿತ್‌ ಕಿಲ್‌ ಗ್ರಾಸ್‌ ಹಾಫರ್‌ (ಮಿಡತೆಯನ್ನು ಬೇಟೆಯಾಡಿದ ದರೋಡೆ ನೊಣ), ಓರಿಯಂಟಲ್‌ ಯಲ್ಲೋ ಫ್ಯಾನ್ಸಿ ಮೀಟಿಂಗ್‌ (ಪತಂಗದ ಮಿಲನಕ್ರಿಯೆ) ಮತ್ತು ಮರಿಗಳನ್ನು ಹೊತ್ತಿರುವ ಚೇಳು ಚಿತ್ರಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿ ನೇಚರ್‌ ವಿಭಾಗದಲ್ಲಿ ಆಯ್ಕೆಯಾಗಿವೆ.

ಇಟಲಿ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಬಾಂಗ್ಲಾದೇಶ, ಬಲ್ಗೇರಿಯಾ, ಕೆನಡಾ, ಚೀನಾ, ಡೆನ್ಮಾರ್ಕ್‌, ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌, ಜರ್ಮನಿ, ಹಾಂಕಾಂಗ್‌, ಹಂಗೇರಿ, ಭಾರತ, ಇಟಲಿ, ಮ್ಯಾನ್ಮಾರ್‌, ನೆದರಲ್ಯಾಂಡ್‌, ನ್ಯೂಜಿಲ್ಯಾಂಡ್‌, ಪೋಲಾಂಡ್‌, ರೊಮೇನಿಯಾ, ಸಿಂಗಾಪುರ ಸೇರಿದಂತೆ ಸುಮಾರು 77 ರಾಷ್ಟ್ರಗಳ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next