Advertisement

ಮನೋಹರ ಪ್ರಸಾದ್‌ ಅವರಿಗೆ ಅಂತಾರಾಷ್ಟ್ರೀಯ ಮಾಧ್ಯಮ ಪುರಸ್ಕಾರ

01:21 AM Apr 26, 2023 | Team Udayavani |

ಮಂಗಳೂರು: ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಅವರಿಗೆ ರವಿವಾರ ದುಬಾೖಯ ಅಲ್‌-ಸಫಾ ಜೆ.ಎಸ್‌.ಎಸ್‌. ಸಭಾಂಗಣದಲ್ಲಿ “ಪತ್ರಿಕಾರಂಗದ ಭೀಷ್ಮ’ ಎಂಬ ಅಂತಾರಾಷ್ಟ್ರೀಯ ಮಾಧ್ಯಮ ಪುರಸ್ಕಾರ ನೀಡಿ ಗೌರವಿಸಲಾಯಿತು.

Advertisement

ಶೋಧನ್‌ ಪ್ರಸಾದ್‌ ಅವರ ಸ್‌ಸೆಂಟ್‌ ಮತ್ತು ಪ್ರಭಾಕರ ಅಂಬಲತ್ತೆರೆ ಅವರ ಅಂಬಲತ್ತೆರೆ ವಿಷನ್‌ ವತಿಯಿಂದ ಶೋಧನ್‌, ಪ್ರಭಾಕರ, ಸರ್ವೋತ್ತಮ ಶೆಟ್ಟಿ ಮೊದಲಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಸಂಧ್ಯಾ ಶೋಧನ್‌ ಪ್ರಸಾದ್‌ ಸ್ಮರಣಿಕೆ ನೀಡಿದರು.

ಮನೋಹರ ಪ್ರಸಾದ್‌ ಮಾತನಾಡಿ, ಪ್ರಶಸ್ತಿ ಧನ್ಯತೆ ನೀಡಿದೆ ಎಂದರು. ಸುದರ್ಶನ ಹೆಗ್ಡೆ ಅವರು ಸಮ್ಮಾನ ಪತ್ರ ವಾಚಿಸಿದರು. ನಿತ್ಯಾನಂದ ಬೆಸ್ಕಾರ್‌ ವಂದಿಸಿದರು.

ಇದೇ ಸಂದರ್ಭದಲ್ಲಿ ದಾಸರ ಪದಗಳನ್ನು ಪ್ರಸ್ತುತ ಪಡಿಸಿದ ಡಾ| ವಿದ್ಯಾಭೂಷಣ ಅವರನ್ನು ಸಂಗೀತ ಕಂಠೀರವ ಅಂತಾರಾಷ್ಟ್ರೀಯ ಸ್ವರ್ಣ ಪ್ರಶಸ್ತಿ ಸಹಿತ ಗೌರವಿಸಲಾಯಿತು.
ಸಂಗೀತ ಪ್ರಸ್ತುತಿಯನ್ನು ಮನೋಹರ ಪ್ರಸಾದ್‌ ಅವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next