Advertisement
ದ.ಕ.ದ 10,000 ಮಂದಿ ಮತ್ತು ಉಡುಪಿಯ 5,000 ಮಂದಿ ಸ್ಕೌಟ್ಸ್-ಗೈಡ್ಸ್- ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಸ್ಪರ್ಧಾತ್ಮಕ ಸಾಹಸಮಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು, ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ವೈಯಕ್ತಿಕವಾಗಿ ಮತ್ತು ಗುಂಪುಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಜಾಂಬೂರಿಯ ದಿನಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಸ್ಕಿಲ್-ಒ-ರಾಮಾ, ಪಯೋನಿಯ ರಿಂಗ್, ಸಾಂಸ್ಕೃತಿಕ ಸಂಜೆ, ಸಮುದ್ರ ತೀರ ಚಾರಣ, ಮ್ಯಾರಥಾನ್, ಯೋಗ-ಧ್ಯಾನ, ಕೃಷಿಮೇಳ, ವಿಜ್ಞಾನ ಕೇಂದ್ರ, ಖಗೋಳ ವೀಕ್ಷಣಾಲಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ವಿವಿಧ ರಾಜ್ಯಗಳ ಪ್ರತಿನಿಧಿಗಳ ಚರ್ಚೆಯಲ್ಲಿ ಭಾಗ ವಹಿಸಿ ಅಭಿಪ್ರಾಯ ಮಂಡಿಸುತ್ತಾರೆ. ಸ್ಕೌಟ್ಸ್ ಮತ್ತು ಗೈಡ್ಸ್‌ಗಳು/ರೋವರ್-ರೇಂಜರ್ ಚಳವಳಿ ಯಲ್ಲಿ ಪ್ರಸ್ತುತ ಇರುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾವಣೆ ಮಾಡಬೇಕು ಮತ್ತು ಚಳವಳಿಯ ವ್ಯಾಪ್ತಿಯನ್ನು ಹೇಗೆ ಹೆಚ್ಚಿಸಬೇಕೆಂಬ ಬಗ್ಗೆಯೂ ಚರ್ಚಿಸಲು ಅವಕಾಶವಿದೆ.
Related Articles
ಸಾಮಾನ್ಯವಾಗಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವ ಜಾಂಬೂರಿ ನಡೆಯುತ್ತದೆ. ಈ ವರ್ಷ ವಿಶೇಷವಾಗಿ ಸಾಂಸ್ಕೃತಿಕ ಜಾಂಬೂರಿ ಆಯೋಜಿಸಲಾಗಿದೆ.
Advertisement
ಅಮೆರಿಕದಲ್ಲಿ ಯಕ್ಷಗಾನಪ್ರದರ್ಶಿಸಿದ್ದ ವಿದ್ಯಾರ್ಥಿಗಳು
ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ಜಾಂಬೂರಿ ನಡೆದಿದ್ದು, ದ.ಕ. ಜಿಲ್ಲೆಯ 12 ಮಂದಿ ಭಾಗಿಯಾಗಿದ್ದರು. ಕೌಶಲಗಳ ಜತೆ ತಾನು ಪ್ರತಿನಿಧಿಸಿದ ರಾಜ್ಯದ ಸಾಂಸ್ಕೃತಿಕ ಕಲೆ ಗಳಿಗೂ ವೇದಿಕೆ ಕಲ್ಪಿಸಲಾಗಿತ್ತು. ದ.ಕ. ಜಿಲ್ಲೆಯ ಪ್ರತಿನಿಧಿಗಳು ರಾಜ್ಯದ ಸಾಂಸ್ಕೃತಿಕ ಕಲೆಯಾದ ಯಕ್ಷಗಾನವನ್ನು ಅನವಾರಣ ಗೊಳಿಸಿದ್ದರು. ಮುಂದಿನ ಜಾಂಬೂರಿ ಕೊರಿಯಾದಲ್ಲಿ ನಡೆಯಲಿದೆ.
– ಬಿ. ಮೊಹಮ್ಮದ್ ತುಂಬೆ,
ಸ್ಕೌಟಿಂಗ್ ವಿಭಾಗ ರಾಜ್ಯ ಪ್ರತಿನಿಧಿ -ನವೀನ್ ಭಟ್ ಇಳಂತಿಲ ಫೋಟೋ: ಸತೀಶ್ ಇರಾ