Advertisement
ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಇಂತಹ ಒಂದು ಕೇಂದ್ರ ಪ್ರಾಥಮಿಕ ಹಂತದ ಸೇವೆ ಆರಂಭಿಸಿದ್ದು ಬೇರೆ ಜಿಲ್ಲೆಯವರು ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿಯಲ್ಲೂ ಕೇಂದ್ರಗಳು ಅಸ್ತಿತ್ವಕ್ಕೆ ಬರಲಿದ್ದು, ಅಕ್ಕಪಕ್ಕದ ಜಿಲ್ಲೆಗಳ ಅಭ್ಯರ್ಥಿ/ ಉದ್ಯೋಗಾಕಾಂಕ್ಷಿಗಳು ಇದರ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ. ಉಡುಪಿ ಜಿಲ್ಲೆಯವರು ಮಂಗಳೂರಿನ ಕೇಂದ್ರದ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಮಂಗಳೂರಿನಲ್ಲಿ ಪ್ರತ್ಯೇಕ ಕಟ್ಟಡದಲ್ಲಿ ಕೇಂದ್ರ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಗಲ್ಫ್, ಕೆನಡ, ಯುಕೆ, ಜಪಾನ್ ಮೊದಲಾದ ದೇಶಗಳ ರಾಯಭಾರ ಕಚೇರಿ, ಉದ್ಯೋಗ ನೇಮಕಾತಿ ಸಂಸ್ಥೆಗಳ ಜತೆಗೆ ಮಾತುಕತೆ-ಒಪ್ಪಂದ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿನ ಉದ್ಯೋಗ ಬೇಡಿಕೆಯನ್ನು ಗಮನದಲ್ಲಿರಿಸಿ ಅಭ್ಯರ್ಥಿಗಳನ್ನು ತಯಾರುಗೊಳಿಸಲು ಸಿದ್ಧತೆ ನಡೆದಿದೆ. ಕೊರೊನಾ, ವಿಮಾನಯಾನ ಸೇವೆ ಸ್ಥಗಿತಗೊಂಡಿದ್ದರಿಂದ ವಿದೇಶೀ ಉದ್ಯೋಗಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಚುರುಕಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಪ್ರಯೋಜನವೇನು ?
ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿ ಅಲ್ಲಿ ನಾನಾ ರೀತಿಯಲ್ಲಿ ವಂಚನೆ ಗೊಳಗಾಗುವುದನ್ನು ತಪ್ಪಿಸಲು ಮತ್ತು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ “ಐಎಂಸಿಕೆ’ ಆರಂಭಿಸಲಾಗುತ್ತಿದೆ. ಪ್ರಮುಖವಾಗಿ ಶೋಷಣೆ, ವಂಚನೆಗೊಳಗಾದವರಿಗೆ ರಕ್ಷಣೆ ನೀಡಲಿದೆ. ಮಾತ್ರವಲ್ಲದೆ ಆಯಾ ದೇಶಗಳ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಬೇಕಾದ ಮಾಹಿತಿ, ಕೌಶಲ, ಅರ್ಹತೆ, ಭಾಷೆ, ಅಗತ್ಯ ಅರ್ಹತಾ ಪರೀಕ್ಷೆ ತೇರ್ಗಡೆ ಮೊದಲಾದ ವಿಷಯಗಳಲ್ಲಿ ತರಬೇತಿ ದೊರೆಯುತ್ತದೆ. ಇದಕ್ಕಾಗಿ ಪಿಡಿಒಟಿ (ಪ್ರಿ ಡಿಪಾರ್ಚರ್ ಓರಿಯಂಟೇಶನ್ ಟ್ರೈನಿಂಗ್) ಗಳನ್ನು ಕೂಡ ಸ್ಥಾಪಿಸಲಾಗುತ್ತದೆ.
Related Articles
ಬೆಂಗಳೂರು ಮಾದರಿಯಲ್ಲಿಯೇ ಮಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಐಎಂಸಿಕೆಗಳು ಮುಂದಿನ ಎರಡು ವಾರಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ವಂಚನೆಗೊಳಗಾಗುವುದನ್ನು ತಪ್ಪಿಸಿ ರಕ್ಷಣೆ ನೀಡುವ ಜತೆಗೆ ವಿದೇಶದ ಉದ್ಯೋಗಗಳಿಗೆ ತಕ್ಕಂತೆ ನಮ್ಮ ಉದ್ಯೋಗಾಕಾಂಕ್ಷಿಗಳನ್ನು ಸಿದ್ಧಗೊಳಿಸುವ ಉದ್ದೇಶ ಕೂಡ ಇದರಲ್ಲಿದೆ.
-ಅಶ್ವಿನಿ ಗೌಡ, ಆಡಳಿತ ನಿರ್ದೇಶಕರು, ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮು¤ ಜೀವನೋಪಾಯ ಇಲಾಖೆ
Advertisement
ಸಂತೋಷ್ ಬೊಳ್ಳೆಟ್ಟು