Advertisement

ಅಂತಾರಾಷ್ಟ್ರೀಯ ಹಿಪ್‌ ಹಾಪ್‌: ಅವಿನಾಶ್‌ ತಂಡಕ್ಕೆ ಪ್ರಶಸ್ತಿ

03:03 PM Jul 09, 2017 | |

ಮುಂಬಯಿ: ಕೆನಡಾದಲ್ಲಿ ಜು. 6ರಂದು ನಡೆದ ಹಿಪ್‌-ಹಾಪ್‌ ಡಾನ್ಸ್‌ ವಿಶ್ವಕಪ್‌ ಸ್ಪರ್ಧೆಯಲ್ಲಿ ಮುಂಬಯಿ ತುಳು-ಕನ್ನಡಿಗ ಅವಿನಾಶ್‌ ಪೂಜಾರಿ ನೇತೃತ್ವದ ಭಾರತ ತಂಡವು ವಿಶ್ವಕಪ್‌ ಟ್ರೋಫಿಯೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

Advertisement

ಜು. 3ರಂದು ಆರಂಭಗೊಂಡ ಹಿಪ್‌ಹಾಪ್‌ ವಿಶ್ವಕಪ್‌ ಡಾನ್ಸ್‌ ಸ್ಪರ್ಧೆಯಲ್ಲಿ ಒಟ್ಟು 50 ದೇಶಗಳ ಕಲಾವಿದರ ತಂಡಗಳು ಭಾಗವಹಿಸಿದ್ದವು. ಜು. 5ರಂದು ಭಾರತ ತಂಡವು ಫೈನಲ್‌ ಪ್ರವೇಶಿಸಿದ್ದು, ಜು. 6ರಂದು ಬೆಳಗ್ಗೆ ನಡೆದ ಅಂತಿಮ ಹಣಾಹಣಿಯಲ್ಲಿ ಕೆನಡಾ ವಿರುದ್ಧ ವಸಾಯಿಯ ಯುನಿಟಿಂಗ್‌ ದ ವರ್ಲ್ಡ್ ಆಫ್‌ ಹಿಪ್‌ಹಾಪ್‌ ಥ್ರೋ ಡಾನ್ಸ್‌ ಕ್ರೂ ಮೆಂಬರ್‌ ಐ ಕ್ರೂವ್‌ ಇಂಡಿಯಾ ತಂಡವು ವಿಶ್ವಕಪ್‌ನ್ನು ತನ್ನದಾಗಿಸಿಕೊಂಡಿತು.

ಕಳೆದ ಎರಡು ವರ್ಷ
ಗಳಿಂದ ವಸಾಯಿಯ ಇದೇ ತಂಡವು ಫೈನಲ್‌ ಪ್ರವೇಶಿಸಿ ಪರಾಜಯ ಕಾಣುತ್ತಿತ್ತು.  ಈ ಬಾರಿ ಅವಿನಾಶ್‌ ಪೂಜಾರಿ ನಾಯಕತ್ವದ ಭಾರತ ತಂಡವು ಹಿಪ್‌ಹಾಪ್‌ ಡಾನ್ಸ್‌ ವಿಶ್ವಕಪ್‌ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸ್ಪರ್ಧೆಗೆ ಭಾರತದ 20 ಮಂದಿಯ ತಂಡದಲ್ಲಿ ಮಹಾರಾಷ್ಟ್ರದಿಂದ ನಾಲ್ವರು ಆಯ್ಕೆಯಾಗಿದ್ದರು. ಅವರಲ್ಲಿ ಅವಿನಾಶ್‌ ಪೂಜಾರಿ ಏಕೈಕ ತುಳು-ಕನ್ನಡಿಗರಾಗಿದ್ದಾರೆ.

ಮೂಲತಃ ಮಂಗಳೂರಿನ ಬಜ್ಪೆಯ ಪೆರ್ರಾ ಗ್ರಾಮದ ವಾಸು ದೇವ ಪೂಜಾರಿ ಮತ್ತು ಮೂಡ ಬಿದ್ರೆಯ ಅನುಷಾ ಪೂಜಾರಿ ದಂಪತಿಯ ಪುತ್ರನಾಗಿರುವ ಇವರು ನವಿಮುಂಬಯಿ, ನೆರೂಲ್‌ ಎಸ್‌ಐಇಎಸ್‌ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು, ನವಿಮುಂಬಯಿ ಸೀವುಡ್ಸ್‌ ಸೆಕ್ಟರ್‌ 44ರಲ್ಲಿ ವಾಸ್ತವ್ಯವನ್ನು ಹೊಂದಿ
ದ್ದಾರೆ. ಕಾಲೇಜು ದಿನಗಳಿಂದಲೇ ಬೇಲಾಪುರದ ಮೂನ್‌ವಾಕರ್ ಡಾನ್ಸ್‌ ಅಕಾಡೆಮಿಗೆ ಸೇರಿ ಹಲವಾರು ಶೈಲಿಯ ನೃತ್ಯಾಭ್ಯಾಸದಲ್ಲಿ ಪರಿಣಿತರಾಗಿ ಹಲವಾರು ಪ್ರಶಸ್ತಿ ಗಳಿಗೂ ಭಾಜನರಾಗಿದ್ದಾರೆ. 

ಬಾಲಿವುಡ್‌ ನಟ ರಣವೀರ್‌ ಕಪೂರ್‌ ಹಾಗೂ ಕೊರಿಯೋಗ್ರಾಫರ್‌ ಗಣೇಶ್‌ ಹೆಗ್ಡೆ ಅವರೊಂದಿಗೆೆ ಹಲವು ನೃತ್ಯ ಗಳಲ್ಲಿ ಭಾಗಿಯಾಗಿರುವ ಇವರು ನಗರದಲ್ಲಿ ನಡೆದ ನೃತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next