Advertisement

ಕೋವಿಡ್ ಎರಡನೇ ಅಲೆ : ಜು.30ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧ ವಿಸ್ತರಣೆ

01:51 AM Jul 01, 2021 | Team Udayavani |

ಹೊಸದಿಲ್ಲಿ: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿಷೇಧ ಹೇರಿರುವ ಕೇಂದ್ರ ಸರಕಾರ, ಆ ನಿಷೇಧವನ್ನು ಜು.30ರ ವರೆಗೆ ವಿಸ್ತರಿಸಿದೆ.

Advertisement

ಈ ಕುರಿತಂತೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ (ಡಿಜಿಸಿಎ) ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಆದರೆ, ಸರಕು ಸಾಗಣೆ ವಿಮಾನಗಳಿಗೆ ಈ ನಿಯಮ ಅನ್ವಯವಾಗದು. ಇನ್ನು, ಅತ್ಯಗತ್ಯವಾಗಿ ವಿದೇಶ ಪ್ರಯಾಣ ಮಾಡುವವರಿಗಾಗಿ ಕೆಲವು ನಾಗರಿಕ ಸೇವಾ ವಿಮಾನಗಳಿಗೆ ನಿರ್ದಿಷ್ಟ ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಕೊರೊನಾ ಮೊದಲ ಅಲೆ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ 2020ರ ಮಾ. 23ರಿಂದ ನಿಷೇಧ ಹೇರಲಾಗಿತ್ತು. ಆದರೆ ಕೊರೊನಾದಿಂದ ಉಂಟಾದ ನಾನಾ ಸಾಮಾಜಿಕ ಕಾರಣಗಳಿಂದ ಸ್ವದೇಶಕ್ಕೆ ಹಿಂದಿರುಗಲು ಬಯಸಿದ ಭಾರತೀಯರಿಗಾಗಿ “ವಂದೇ ಭಾರತ್‌ ಮಿಷನ್‌’ ಯೋಜನೆಯಡಿ ಸರಕಾರಿ ಸ್ವಾಮ್ಯದ “ಏರ್‌ ಇಂಡಿಯಾ’ ಸಂಸ್ಥೆಯ ಕೆಲವು ವಿಮಾನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next