Advertisement

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರಸ್ತೆಯ ಮೇಲೆ ಕ್ಯಾಮರಾಗಳನ್ನು ಇಟ್ಟುಪ್ರತಿಭಟನೆ

08:11 PM Nov 20, 2021 | Team Udayavani |

ಪಣಜಿ: ಗೋವಾದ ಬಾಂಬೋಲಿಂ ಶಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 52 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪತ್ರಿಕಾ ವರದಿಗಾರರಿಗೆ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ಪ್ರವೇಶ ನೀಡಲು ನಿರಾಕರಿಸಿದ್ದನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಗೋವಾ ಪೋಟೊ ಪತ್ರಕಾರ ಸಂಘಟನೆ ಹಾಗೂ ಇಲೆಕ್ಟ್ರಾನಿಕ್ಸ್ ಮೀಡಿಯಾ ಸಂಘಟನೆ ಸ್ಟೇಡಿಯಂ ಹೊರ ಭಾಗದ ಮುಖ್ಯ ರಸ್ತೆಯ ಮೇಲೆ ಕ್ಯಾಮರಾಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ :52 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ: ಗಣ್ಯಾತಿಗಣ್ಯರು ಭಾಗಿ

ಪ್ರಸಕ್ತ ವರ್ಷ ಸರ್ಕಾರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನಾ ಸಮಾರಂಭದ ಛಾಯಾಗ್ರಹಣದ ಹಕ್ಕನ್ನು ಖಾಸಗಿ ಕಂಪನಿಗೆ ನೀಡಿರುವುದನ್ನು ಪತ್ರಿಕಾ ಸಂಘಟನೆ ವತಿಯಿಂದ ತೀವ್ರವಾಗಿ ವಿರೋಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next