Advertisement

ಫಿಲ್ಮ್‌ ಬಜಾರ್‌ : ಸಿನಿಮಾಗಳೆಂದರೆ ಬರೀ ಸ್ಟಾರ್‌ಗಳಲ್ಲ!

12:45 PM Nov 25, 2019 | Hari Prasad |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಇಫಿ]  ಸುವರ್ಣ ಅಧ್ಯಾಯದ ಸಂಭ್ರಮದ ಹೊತ್ತಿನಲ್ಲೇ 13 ನೇ ವರ್ಷಾಚರಣೆಯಲ್ಲಿ ತೊಡಗಿರುವ ಎನ್ಎಫ್ಡಿಸಿ ಫಿಲ್ಮ್ಬಜಾರ್ನಲ್ಲಿ ಶುಕ್ರವಾರ ಸಾಕಷ್ಟು ಚಟುವಟಿಕೆಗಳು ನಡೆದವು. ಬೆಳಗ್ಗೆಯಿಂದಲೇ ಚಟುವಟಿಕೆಗಳು ಜೋರಾಗಿದ್ದವು. ಸಂವಾದ, ಸಿನಿಮಾ ಪ್ರದರ್ಶನ, ಕೌಶಲ ಕಾರ್ಯಾಗಾರ ಎಲ್ಲವೂ ನಡೆದವು.

Advertisement

 ಕನ್ನಡದ ಸಿನಿಮಾ ನಿರ್ದೇಶಕರೂ ಸಾಕಷ್ಟು ಮಂದಿಯಲ್ಲಿ ಸಂತೆಯಲ್ಲಿ ಕಂಡು ಬಂದಿದ್ದು ವಿಶೇಷ. ನಟ ಕಿಶೋರ್‌, ನಿರ್ದೇಶಕರಾದ ಪೃಥ್ವಿ ಕೊಣನೂರು, ನಟೇಶ್ಹೆಗಡೆ, ಅಭಿಷೇಕ್ಸರ್ಪೇಶ್ಕರ್ತಮ್ಮ ಹೊಸ ಯೋಜನೆಯಲ್ಲಿ ತೊಡಗಿದ್ದರು.

 ಸಹ ನಿರ್ಮಾಣ ಯೋಜನೆಯಲ್ಲಿ 14 ಆಸಕ್ತಿಕರ ಪ್ರಾಜೆಕ್ಟ್ಸ್ಗಳು ಭಾಗವಹಿಸಿವೆ. ಇದರಲ್ಲಿ ಭಾರತವೂ ಸೇರಿದಂತೆ ಬಾಂಗ್ಲಾದೇಶ, ಭೂತಾನ್‌, ಫ್ರಾನ್ಸ್‌, ನೇಪಾಳ್‌, ಸಿಂಗಾಪುರ ಹಾಗೂ ಅಮೆರಿಕದ ಸಿನಿಮಾ ನಿರ್ದೇಶಕರಿದ್ದಾರೆ. ಹಿಂದಿ, ಇಂಗ್ಲಿಷ್‌, ಬಂಗಾಳಿ, ಮಲಯಾಳಂ, ಅಸ್ಸಾಮೀ, ನೇಪಾಳಿ, ಗುಜರಾತಿ, ಭೂತಾನೀ ಭಾಷೆಯ ಚಿತ್ರಗಳು ವಿಭಾಗದಲ್ಲಿ ಭಾಗವಹಿಸಿವೆ. ವಲಸೆಯೂ ಸೇರಿದಂತೆ ಹಲವು ವಿಷಯ ವೈವಿಧ್ಯಗಳು ಹದಿನಾಲ್ಕು ಚಿತ್ರಗಳ ಕಥಾವಸ್ತುಗಳಾಗಿವೆ.


ದಿ ನಾಲೆಡ್ಜ್ಸೀರಿಸ್ನಡಿ ಕೌಶಲಗಳ ಕುರಿತು ಮಾತನಾಡಿದ ಸೆನ್ಸಾರ್ಬೋರ್ಡ್ಅಧ್ಯಕ್ಷ ಪ್ರಸೂನ್ಜೋಷಿ, ಮಧ್ಯಮ ವರ್ಗಗಳ ಕನಸುಗಳಿಗೆ ಸಿನಿಮಾಗಳಿಗೆ ರೂಪ ಕೊಡಬೇಕಿದೆ ಎಂದರಲ್ಲದೇ, ಸಿನಿಮಾ ಎಂದ ಕೂಡಲೇ ಜನರು ಸ್ಟಾರ್ಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಜನರಿಗೆ ಸಿನಿಮಾ ಉದ್ಯಮವೆಂದರೆ ಅರ್ಪಣಾ ಮನೋಭಾವ, ಪ್ರೀತಿ, ಕೌಶಲಗಳೇ ಯಶಸ್ಸಿಗೆ ಮುಖ್ಯವೇ ಹೊರತು ಬೇರೇನೂ ಅಲ್ಲ ಎಂಬುದನ್ನು ಅರ್ಥ ಮಾಡಿಸಬೇಕುಎಂದರು.

 ಚಿತ್ರ ನಿರ್ಮಾಪಕ ಸಿದ್ಧಾರ್ಥ ರಾಯ್‌, ಕೌಶಲ ಕಾರ್ಯಾಗಾರ ಒಂದು ಒಳ್ಳೆಯ ಆಲೋಚನೆ. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಯಶಸ್ವಿಗೊಳಿಸಬೇಕು. ಚಿತ್ರೋದ್ಯಮ ಮತ್ತು ಸರಕಾರ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಬೇಕು. ಚಿತ್ರೋದ್ಯಮವು ಸರಕಾರದ ಸವಾಲುಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಸರಕಾರವೂ ಚಿತ್ರೋದ್ಯಮದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಇದು ವೇದಿಕೆಯಾಗಲಿ ಎಂದು ಅಭಿಪ್ರಾಯಪಟ್ಟರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಹೆಚ್ಚುವರಿ ಕಾರ್ಯದರ್ಶಿ ಅತುಲ್ತಿವಾರಿ, ಸರಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

Advertisement

 ಸಂವಾದದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಕ್ಯೂರೇಟರ್ಜೋಶ್ಸೆಗಲ್‌, ನ್ಯೂಯಾರ್ಕ್ ಮ್ಯೂಸಿಯಂ ಆಫ್ಮಾಡರ್ನ್ಆರ್ಟ್ಸ್‌ನ [ಮೋಮಾ], ಭಾರತದ ಪ್ರಯೋಗಶೀಲ ಸಿನಿಮಾಗಳನ್ನು ಜಾಗತಿಕ  ನೆಲೆಯಲ್ಲಿ ಪ್ರೊಜೆಕ್ಟ್ಮಾಡುವ ಕೆಲಸ ಮೊಮಾ ಮಾಡಲಿದೆ. ಪ್ರತಿ ವರ್ಷವೂ ನಾವು 1200 ವಿವಿಧ ಬಗೆಯ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂದರು.

 ನಟ ಅದಿಲ್ಹುಸೇನ್ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಭಾವನೆಗಳನ್ನು ನಿಯಂತ್ರಿಸುವುದೆಂದರೇ ಕಠಿಣ ಕೆಲಸ. ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು. ನಟನೆ ಎಂಬುದು ನೀರಿದ್ದಂತೆ. ಹಾಗಾಗಿ ಯುವ ಸಿನಿಮಾ ನಿರ್ದೇಶಕರು ನೀರಿನ ಗುಣಗಳಿಂದ ಕಲಿತುಕೊಳ್ಳಬೇಕಾದದ್ದಷ್ಟಿದೆ ಎಂದರು. ಇದಲ್ಲದೇ ನಿರ್ಮಾಪಕರ ಕಾರ್ಯಾಗಾರ ಇತ್ಯಾದಿ ಹಲವು ಚಟುವಟಿಕೆಗಳು ಭರದಿಂದ ನಡೆಯುತ್ತಿದ್ದು, . 24ರವರೆಗೆ ಈ ಎಲ್ಲಾ ಚಟುವಟಿಕೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next