Advertisement

26ರಿಂದ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

10:38 PM Feb 16, 2020 | Team Udayavani |

ಚಿತ್ರದುರ್ಗ: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಫೆ.26ರಿಂದ ಮಾ.4ರವರೆಗೆ ಅಂತಾರಾಷ್ಟ್ರೀಯ ಚಲನ ಚಿತ್ರೋ ತ್ಸವ ನಡೆಯಲಿದ್ದು, 50 ದೇಶಗಳ 200 ಚಿತ್ರಗಳು ಪ್ರದರ್ಶನಗೊ ಳ್ಳಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಿಎಂ ಯಡಿಯೂರಪ್ಪ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಮಾ.4ರಂದು ಬೆಂಗಳೂರಿನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿ ಹಲವು ಭಾಷೆಗಳ ಚಿತ್ರರಂಗದ ಗಣ್ಯರು, ನಟ, ನಟಿಯರು, ತಂತ್ರಜ್ಞರು ಭಾಗವಹಿ ಸಲಿದ್ದಾರೆ. ಒಟ್ಟು 11 ಪರದೆಗಳಲ್ಲಿ 50 ದೇಶಗಳ ಸುಮಾರು 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಎಂಟು ದಿನಗಳ ಕಾಲ ನಡೆಯುವ ಚಲನ ಚಿತ್ರೋತ್ಸವದಲ್ಲಿ ಗೋಷ್ಠಿ, ವಿಚಾರ ಸಂಕಿರಣ ನಡೆಯಲಿದ್ದು, ದೇಶ, ವಿದೇಶಗಳ ಪರಿಣತರು ಭಾಗವಹಿಸಲಿ ದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಸ್ವತ್ಛ ಪರಿಸರಕ್ಕಾಗಿ “ಗೋ ಗ್ರೀನ್‌’ ಉತ್ಸವ ಕೂಡ ನಡೆಯಲಿದೆ. ಈ ವರ್ಷದ ಚಲನ ಚಿತ್ರೋತ್ಸವದ ಥೀಮ್‌ ಸಂಗೀತವಾಗಿದ್ದು, ಸಂಗೀತ ನಡೆದು ಬಂದ ಹಾದಿ ಬಗ್ಗೆಯೂ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next