Advertisement

ಫೆ.22ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

08:00 AM Dec 12, 2017 | Team Udayavani |

ಬೆಂಗಳೂರು: “10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2018ರ ಫೆಬ್ರವರಿ 22 ರಿಂದ ಮಾರ್ಚ್‌ 1 ರ ವರೆಗೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಚಲನಚಿತ್ರೋತ್ಸವ ಮೈಸೂರು ಹಾಗೂ ಬೆಂಗಳೂರಿನಲ್ಲಿ ಏಕ ಕಾಲಕ್ಕೆ ನಡೆಯಲಿದೆ.

ಮಾನವ ಹಕ್ಕು ಸಾಮಾಜಿಕ ನ್ಯಾಯದ ಆಶಯದ ಮೇಲೆ ಈ ಬಾರಿಯ ಚಲನಚಿತ್ರೋತ್ಸವ ನಡೆಯಲಿದೆ ಎಂದರು. ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ವಿಧಾನಸೌಧದ ಮುಂಭಾಗ ನಡೆಯಲಿದ್ದು, ಇದೇ ವೇಳೆ ಚಲನಚಿತ್ರ ರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಒಬ್ಬರು ಕಲಾವಿದರಿಗೆ 10 ಲಕ್ಷ ರೂ.ನಗದು ಒಳಗೊಂಡ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next