Advertisement
ಈ ಕಾಡನ್ನು ಕೇವಲ 10 ರಿಂದ 15 ದಿನಗಳಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ತುಳುನಾಡಿನ ನೃತ್ಯಕಲೆ ಹುಲಿ ಕುಣಿತದ ಪ್ರತಿಬಿಂಬವಾಗಿ, ಕಾಡಿನ ಮುಖ್ಯದ್ವಾರವನ್ನು ಹುಲಿಯ ಮುಖದ ಆಕಾರದಲ್ಲಿಯೇ ರಚಿಸಲಾಗಿದೆ.
Related Articles
Advertisement
ಹಾಗೆಯೇ ಕೆಲವೊಂದು ವಿಶಿಷ್ಟ ಹಾವಿನ ಬಗ್ಗೆ ಮಾಹಿತಿಯ ಫಲಕಗಳನ್ನು ಮರಕ್ಕೆ ನೇತ್ತುಹಾಕಿದ್ದಾರೆ. ಅಲ್ಲಿನ ವಿಶಿಷ್ಟ ಸೆಳೆತವೆಂದರೆ ಸಹಜೀವನಕ್ಕಾಗಿ ಉದಾಹರಣೆಯಾಗಿ ಹುಲಿ ಜಿಂಕೆಯನ್ನು ಅಟ್ಟಿಸಿಕೊಂಡು ಬರುವುದು, ಅದಕ್ಕೆ ಮಂಗ ಸಂದೇಶವನ್ನು ನೀಡುವುದು ಈ ತರಹದ ವಿಶೇಷತೆಗಳನ್ನು ಇರಿಸಿದ್ದಾರೆ.
ಈ ಕಾಡಿನಲ್ಲಿ ಮತ್ತೊಂದು ವಿಶಿಷ್ಟತೆ ಎಂದರೇ ಅಲ್ಲಿ ಜಲಪಾತವನ್ನೂ ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಆ ಜಲಪಾತದ ನೀರು ಹರಿದು ಒಂದು ಕಡೆ ಸೇರುತ್ತದೆ. ಅಲ್ಲಿ ಮನುಷ್ಯನು ಮೀನನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು. ಆ ಬಳಿಕ, ನಾವು ತೂಗು ಸೇತುವೆಯ ಮೇಲೆ ಸಂಚರಿಸಬಹುದು.
ಈ ಸೇತುವೆಯು ಎಲ್ಲರಿಗೂ ಭಯದ ವಾತಾವರಣದಲ್ಲಿ ಖುಷಿಯನ್ನೂ ನೀಡುತ್ತದೆ. ಸುಮಾರು 1.5 ಕಿಲೋಮೀಟರ್ ಟ್ರೆಕ್ಕಿಂಗ್ ಜಾಗವಾಗಿ ಮಾಡಿದ್ದು ಅಲ್ಲಿ ನಡೆಯುವಾಗ ಬೆಟ್ಟವನ್ನು ಹತ್ತಿ ಎಳಿಯುವ ಅನುಭವ ದೊರಕುತ್ತದೆ.
ಈ ಕೃತಕ ಕಾಡು ನಮಗೆ ಪೂರ್ತಿಯಾದ ಕಾಡಿನ ಅನುಭವವನ್ನು ನೀಡುತ್ತದೆ. ಅಲ್ಲಿಲ್ಲಿ ಪ್ರಾಣಿ ಪಕ್ಷಿಗಳ ಘರ್ಜನೆ ಹಾಗೂ ಕೂಗುವ ಶಬ್ದವನ್ನು ಇರಿಸಿದ್ದಾರೆ. ಇದು ಮಕ್ಕಳಿಗೆ ಹಾಗೂ ನೋಡುಗರಿಗೆ ಒಳ್ಳೆಯ ಅನುಭವ ಕೊಡುತ್ತದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿ ಪಕ್ಷಿಗಳಿಗೆ ಮನುಷ್ಯರಿಂದ ಬಹಳ ತೊಂದರೆ ಆಗುತ್ತಿದ್ದು, ಅವುಗಳು ನಾಡಿಗೆ ಬರುತ್ತಿರುವುದು ಕಷ್ಟವಾಗಿದೆ ಮತ್ತು ಪ್ರಾಣಿ ಪಕ್ಷಿಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಜನರಿಗೆ ಹಾಗು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಈ ಕೃತಕ ಕಾಡನ್ನು ನಿರ್ವಿಸಿದ್ದಾರೆ.
– ಧನುಶ್ರೀ ಗೌಡ