Advertisement
ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸ್ಕೌಟ್, ಗೈಡ್, ರೋವರ್ ಮತ್ತು ರೇಂಜರ್ಸ್ ಶಿಬಿರಾರ್ಥಿಗಳು ಈಗಾಗಲೇ ಆಗಮಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ 60 ಸಾವಿರ ಮಂದಿ ಆಗ ಮಿಸುವರು. ಬೆಳಗ್ಗೆಯಿಂದಲೇ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಡಿ. 27ರ ವರೆಗೂ ಮುಂದು ವರಿಯಲಿದೆ.
Related Articles
ಡಿ. 21ರಂದು ಸಂಜೆ 5 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಾಂಬೂರಿಗೆ ಚಾಲನೆ ನೀಡುವರು. ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ವಿಶ್ವ ಸ್ಕೌಟ್ ಅಭಿಯಾನದ ಮಹಾಕಾರ್ಯದರ್ಶಿ ಅಹಮದ್ ಅಲ್‌ಹಂದಾವಿ, ಸಚಿವರಾದ ವಿ. ಸುನಿಲ್ ಕುಮಾರ್, ಸಚಿವ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಒಡಿಶಾ ಸಚಿವ ಅತನು ಸಬ್ಯಸಾಚಿ ನಾಯಕ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷ ಡಾ| ಅನಿಲ್ ಕುಮಾರ್ ಜೈನ್ ಮತ್ತಿತರರು ಪಾಲ್ಗೊಳ್ಳುವರು.
Advertisement
ದೇಶದ ಸಂಸ್ಕೃತಿಯನ್ನು ಬಿಂಬಿಸುವ ಮೂರು ಸಾವಿರ ಜನಪದೀಯ ಕಲಾವಿದರು 150 ಕಲಾ ಪ್ರದರ್ಶನಗಳನ್ನು ದರ ಮೆರವಣಿಗೆ ಉದ್ಘಾಟನೆ ವೇಳೆ ನಡೆಸಿಕೊಡುವರು. ಇದು ಸಾಂಸ್ಕೃತಿಕ ಪಥಸಂಚಲನ ಶೈಲಿಯಲ್ಲಿ ಇರಲಿದೆ. ಶ್ರೀಲಂಕಾದ ಕಲಾವಿದರೂ ಪಾಲ್ಗೊಳ್ಳುವರು.
1 ಸಾವಿರ ಬಾಣಸಿಗರುಊಟೋಪಚಾರಕ್ಕೆ ಸಾರ್ವಜನಿಕರು ಹಾಗೂ ಶಿಬಿರಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಯಿದ್ದು ಒಟ್ಟಾರೆ 1 ಸಾವಿರ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಸುಸಜ್ಜಿತ ಪಾಕಶಾಲೆ, ಉಗ್ರಾಣಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ 5 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲಾಪ
ಆಳ್ವಾಸ್ ನುಡಿಸಿರಿ ವೇದಿಕೆ, ಡಾ| ವಿ.ಎಸ್. ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 6 ರ ವರೆಗೆ, ಕೆ.ವಿ. ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9ರ ವರೆಗೆ ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ. ವಿದೇಶಿ ಪ್ರತಿನಿಧಿಗಳು
ಮಲೇಷ್ಯಾ, ದ. ಕೊರಿಯಾವಲ್ಲದೇ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ರಾಜ್ಯಗಳಿಂದ ಸ್ಕೌಟ್ಸ್, ಗೈಡ್ಸ್, ರೇಂಜರ್, ರೋವರ್ ಹಾಗೂ ದಕ್ಷಿಣ ರೈಲ್ವೇ ಪ್ರತಿನಿಧಿಗಳು ಭಾಗಿ. ಜಾಂಬೂರಿಯ ವಿಶೇಷತೆಗಳು
35 ಸಾಹಸಮಯ ಕ್ರೀಡೆಗಳು, ಜಂಗಲ್ ಟ್ರಯಲ್, 168 ಕಿ.ಮೀ ಸ್ವಚ್ಛತಾ ಕಾರ್ಯ, ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ಆಹಾರ ಮಳಿಗೆಗಳು ಸೇರಿದಂತೆ 1000ಕ್ಕೂ ಮಿಕ್ಕಿ ವೈವಿಧ್ಯಮಯ ಮಳಿಗೆಗಳು. ಹೊರೆಕಾಣಿಕೆ
ಮೂಲ್ಕಿ, ಕಿನ್ನಿಗೋಳಿ, ಬಜಪೆ, ಬಂಟ್ವಾಳ, ಬಿಸಿರೋಡು, ಉಳ್ಳಾಲ, ಬೆಳ್ತಂಗಡಿ, ಉಡುಪಿ, ಕೊಡಗು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಕ್ಕಿ, ತೆಂಗಿನಕಾಯಿ ತರಕಾರಿಗಳು, ಸಕ್ಕರೆ ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಬೃಹತ್ ಹೊರೆಕಾಣಿಕೆ ಹರಿದುಬರುತ್ತಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಊಟೋಪಚಾರ ಉಚಿತವಾಗಿದೆ. ಪಂಚ ಮೇಳಗಳು
ಕೃಷಿ ಮೇಳ: 12 ಎಕ್ರೆ ಕೃಷಿ ಲೋಕ ದಲ್ಲಿ 4 ಎಕ್ರೆ ತರಕಾರಿ ಸೊಬಗು
ವಿಜ್ಞಾನ ಮೇಳ: ವಿಜ್ಞಾನ ಮಾದರಿಗಳ ಪ್ರದರ್ಶನ, ವೈಜ್ಞಾ ನಿಕ ಆಟಿಕೆ ಪ್ರದರ್ಶನ ಇತ್ಯಾದಿ.
ಪುಸ್ತಕ ಮೇಳ: ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಪುಸ್ತಕಗಳ ಪ್ರದರ್ಶನ. ಕಲಾಮೇಳ: ಕಲಾವಿದರ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ, ಛಾಯಾಚಿತ್ರಗಳ ಪ್ರದರ್ಶನ.
ಆಹಾರ ಮೇಳ:ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳು, ಹಣ್ಣುಹಂಪಲುಗಳ ಪ್ರದರ್ಶನ. ಜಾಂಬೂರಿ: ವಿಶೇಷ ಬಸ್ ಸೌಲಭ್ಯ
ಜಾಂಬೂರಿಗೆ ವಿವಿಧ ರಾಜ್ಯಗಳಿಂದ ತಂಡೋಪ ತಂಡವಾಗಿ ಜನರು ಮೂಡುಬಿದಿರೆಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರು ರೈಲು ನಿಲ್ದಾಣದಿಂದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ಗೆ ಕೆಎಸ್ಸಾರ್ಟಿಸಿಯ 40ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಿಸಿವೆ. ಬುಧವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿ ಯಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.