Advertisement
ಸುರೇಶ್ ಬಟ್ಟೆಯಂಗಡಿಯಲ್ಲಿ ಉದ್ಯೋಗಿ . ಬಾಡಿಬಿಲ್ಡ್ ಬಗ್ಗೆ ಸಾಕಷ್ಟು ಆಸಕ್ತಿ ಇವರಿಗಿದೆ. ಆರ್ಮ್ ರೆಸ್ಲಿಂಗ್ ಬಗ್ಗೆ ಯೂಟ್ಯೂಬ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಸಹಪಾಠಿಯೊಬ್ಬ ನೀವು ಟ್ರೈ ಮಾಡಿ ಎಂದು ಸಲಹೆ ನೀಡಿದ್ದ. ಅದನ್ನೇ ಒಪ್ಪಿಕೊಂಡ ಸುರೇ ಶ್ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಅದೇ ವರ್ಷ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎಡ ಕೈ ಹಾಗೂ ಬಲ ಕೈ ಎರಡೂ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆದು ಫ್ರಾನ್ಸ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಆದರೆ ಅರ್ಥಿಕ ಮುಗ್ಗಟ್ಟಿನಿಂದ ಪಂದ್ಯಾಟದಲ್ಲಿ ಭಾಗವಹಿಸಲಾಗಿರಲಿಲ್ಲ.
2023ರ ಎಪ್ರಿಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಗೆದ್ದು, ಮೇನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ಎರಡು ಬೆಳ್ಳಿ ಪದಕ ಧರಿಸಿದರು. ಅಕ್ಟೋಬರ್‌ನಲ್ಲಿ ಮಲೇಶಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಲ ಮತ್ತು ಎಡ ಎರಡೂ ಕೈಗಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. ಈಗ ಮೂರನೇ ಬಾರಿಗೆ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಯಿಸಿ ಗ್ರೀಸ್ ನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ಗೆ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಭಾರತದ ಬೇರೆ-ಬೇರೆ
ರಾಜ್ಯದಿಂದ 30 ಮಂದಿ ಈ ಸ್ಪರ್ಧೆಯಲ್ಲಿದ್ದಾರೆ. ಕರ್ನಾಟಕದಿಂದ ಸುರೇಶ್ ಒಬ್ಬರೇ.
Related Articles
Advertisement
ಆರ್ಥಿಕ ಬಲ ಬೇಕಾಗಿದೆಹಣವಿಲ್ಲದ ಕಾರಣಕ್ಕಾಗಿ ಹಿಂದೆ ಫ್ರಾನ್ಸ್ ಕೂಟವನ್ನು ಮಿಸ್ ಮಾಡಿಕೊಂಡಿದ್ದ ಸುರೇಶ್ ಅವರಿಗೆ ಈ ಬಾರಿಯೂ ಅನಿಶ್ಚಿತತೆ ಕಾಡಿದೆ. ಕ್ರೀಡಾಪ್ರೇಮಿಗಳು ಸಹಕಾರ ನೀಡಿದರೆ ಇವರ ಕ್ರೀಡಾಯಾನ ಮುಂದುವರಿಯಲಿದೆ. ಕ್ರೀಡಾಭಿಮಾನಿಗಳು, ಸಹೃದಯರು ಅವರನ್ನು ಸಂಪರ್ಕಿಸಿ (ಸಂಪರ್ಕ ಸಂಖ್ಯೆ: 9986550577) ಬೆಂಬಲಿಸಬಹುದು.