ನೆಲಮಂಗಲ: ಅಯೋಧ್ಯೆಯಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರುನಾಡಿನ ಇತಿಹಾಸ ತಿಳಿಸುವ ಐಹೊಳೆ ಚಿತ್ರಕ್ಕೆ ದ್ವಿತೀಯ ಸ್ಥಾನ ಬಂದಿರುವುದು ಸಂತೋ ಷದ ಸಂಗತಿ ಎಂದು ನಿರ್ದೇಶಕ ರವೀಂದ್ರನಾಥ ಸಿರಿವರ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಸದಾಶಿವನಗರದ ರಂಗ ಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ರಂಗಶಿಕ್ಷಣ ಕೇಂದ್ರ ಹಾಗೂ ಜ್ಞಾನರಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಸಹಯೋಗದಲ್ಲಿ ಆಯೋಜಿಸಿದ್ದ ಐಹೊಳೆ ಚಿತ್ರ ತಂಡಕ್ಕೆಅಭಿನಂದನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಸ್ತು ಶಿಲ್ಪದ ತವರು ಐಹೊಳೆ ಎಂಬುದನ್ನು ನಾವು ಮರೆಯುವಂತಿಲ್ಲ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಬಾದಾಮಿ ಚಾಣುಕ್ಯರ ರಾಜಧಾನಿ ಎಂಬ ಇತಿಹಾಸವಿದೆ. ಸುಮಾರು 600 ವರ್ಷಗಳ ಹಿಂದೆ ಆಳ್ವಿಕೆ ಮಾಡಿದ್ದ ಹಲವಾರು ರಾಜರು ಮತ್ತು ಅವರು ನಿರ್ಮಿಸಿದ್ದ ದೇವಾಲಯವನ್ನು ಕಾಣಬಹುದಾಗಿದೆ.
ಇಂತಹ ಅದ್ಭುತಗಳನ್ನು ತೆರೆಯ ಮೇಲೆ ತರಲು ಐಹೊಳೆ ಚಿತ್ರಕ್ಕೆ ಏಳು ಮಂದಿ ಒಳಗೊಂಡ ಸ್ನೇಹಿತರ ತಂಡ ಚಲನಚಿತ್ರ ನಿರ್ಮಾಣ ಮಾಡಿದ್ದು, ಬಿರಾದರ್, ಡ್ರಾಮಾ ಜೂನಿಯರ್ ಖ್ಯಾತಿಯ ಮಂಜು ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ ಎಂದರು.
ಪ್ರಸ್ತುತ ಸಮಾಜಕ್ಕೆ ಐಹೊಳೆ ಇತಿಹಾಸ: ಸಾಹಿತಿ ಮಣ್ಣೆ ಮೋಹನ್ ಮಾತನಾಡಿ, ಮಕ್ಕಳಿಗೆ ಹಾಗೂ ಪ್ರಸ್ತುತ ಸಮಾಜಕ್ಕೆ ಐಹೊಳೆ ಚಿತ್ರ ಇತಿಹಾಸ ತಿಳಿಸಲು ಮುಂದಾಗಿರುವ ಶ್ಲಾಘ ನೀಯ. ಬಿಡುಗಡೆಯ ಮೊದಲೆ ಪ್ರಶಸ್ತಿಯನ್ನು ಪಡೆದು ತನ್ನ ಸಾಮರ್ಥ್ಯವನ್ನು ಚಿತ್ರ ಗುರುತಿಸಿ ಕೊಂಡಿದೆ. ಶೀಘ್ರದಲ್ಲಿ ಚಿತ್ರ ಬಿಡುಗಡೆ ಮಾಡುವ ವಿಶ್ವಾಸವನ್ನು ನಿರ್ಮಾಪಕರು ತಿಳಿಸಿದ್ದು, ಎಲ್ಲರೂ ತಪ್ಪದೇ ಐಹೊಳೆ ನೋಡಲು ಮನವಿ ಮಾಡುತ್ತೇನೆ ಎಂದರು.
ಚಿತ್ರ ನಿರ್ಮಾಪಕಿ ಬೂದಿಹಾಳ್ ಸುಮಿತ್ರಾ ಕಿಟ್ಟಿ, ರಂಗ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇ ಶಕಿ ಮಂಜುಳಾ, ಕಲಾವಿದ ಬೂದಿಹಾಳ ಕಿಟ್ಟಿ, ಚಿಕ್ಕಮಾರನಹಳ್ಳಿ ದಿನೇಶ್, ಕಸಾಪ ಗೌರವ ಕಾರ್ಯದರ್ಶಿ ಪ್ರಕಾಶ್‌ಮೂರ್ತಿ, ನಿವೃತ್ತ ಪ್ರಾಂಶುಪಾಲ ಮಹಾಲಿಂಗಪ್ಪ, ವಿ. ನೆಗಳೂರು, ಬೋಗಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎನ್.ಜಿ. ಗೋಪಾಲ್, ಮಲ್ಲೇಶ್, ಭಾನುಪ್ರಕಾಶ್, ಚಿತ್ರಕಥೆಗಾರ ಮಂಜುನಾಥ್, ಛಾಯಾಗ್ರಹಣ ಮನೋಜ್ ಕು ಮಾರ್, ನಿರ್ಮಾಪಕ ವೆಂಕಟೇಶ್ ಹಾಗೂ ಮತ್ತಿತರರು ಇದ್ದರು.