Advertisement
ಜಾಗತಿಕ ಮಟ್ಟದಲ್ಲಿ ವಿಜ್ಞಾನ ಸಂಶೋಧನೆಗಳನ್ನು ಸ್ಪರ್ಧೆಗೆ ಆಹ್ವಾನಿಸುವ ಗೂಗಲ್ ಸೈನ್ಸ್ ಫೇರ್ ವಿಭಾಗವು ಮೊದಲ ಹಂತದಲ್ಲಿ 1,000 ಸಂಶೋಧನೆಗಳನ್ನು ಆಯ್ಕೆ ಮಾಡುತ್ತದೆ. ಅವುಗಳಲ್ಲಿ ರೀಜನಲ್ ಫೈನಲಿಸ್ಟ್ ಆಗಿ 100 ತಂಡಗಳನ್ನು ಆರಿಸಲಾಗುತ್ತದೆ. ಅವುಗಳಲ್ಲಿ 20 ತಂಡಗಳನ್ನು ಗ್ಲೋಬಲ್ ಫೈನಲಿಸ್ಟ್ ಆಗಿ ಆರಿಸಿ ಅಂತಹ ತಂಡಗಳನ್ನು ಕ್ಯಾಲಿಪೋರ್ನಿಯಾದಲ್ಲಿ ನಡೆಯುವ ಪ್ರಶಸ್ತಿ ಪ್ರದಾನಕ್ಕೆ ಆಹ್ವಾನಿಸಲಾಗುತ್ತದೆ.
ನಚಿಕೇತ್ ಹಾಗೂ ಅಮನ್ ಅಪ್ರಾಪ್ತ ವಯಸ್ಕರಾಗಿರುವುದರಿಂದ ಗಾರ್ಡಿಯನ್ ಆಗಿ ಭಾಗವಹಿಸಲು ಅವರ ಹೆತ್ತವರಿಗೆ ಗೂಗಲ್ ಸಂಸ್ಥೆ ವ್ಯವಸ್ಥೆ ಕಲ್ಪಿಸಿತ್ತು. ಸಕಾಲದಲ್ಲಿ ವೀಸಾ ದೊರೆಯದ ಕಾರಣ ಹೆತ್ತವರಿಗೆ ಪ್ರಯಾಣ ಬೆಳೆಸಲು ಅಸಾಧ್ಯವಾಯಿತು. ಮಕ್ಕಳ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತದೆ ಎಂದಾದಾಗ ನಚಿಕೇತ್ ಸಂಬಂಧಿ ಪೊಲೀಸ್ ಇಲಾಖೆ ನಿವೃತ್ತ ಸಿಬಂದಿ ದಿನೇಶ್ ಕುಮಾರ್ ಎಂ. ಮತ್ತು ಅಮನ್ ಅವರ ತಂದೆಯ ಸ್ನೇಹಿತ ಸಾಮ್ಯುಯೆಲ್ ಜೋಸ್ ಅಮನ್ ಅವರು ಗಾರ್ಡಿಯನ್‌ಗಳಾಗಿ ಜತೆಗೂಡಿದ್ದರು. ಭಾರತದ ನಾಲ್ಕು ತಂಡ
ಜಗತ್ತಿನ ವಿವಿಧೆಡೆಗಳ ಒಟ್ಟು 20 ಗ್ಲೋಬಲ್ ಫೈನಲಿಸ್ಟ್‌ಗಳಲ್ಲಿ ಭಾರತದ 4 ತಂಡಗಳು ಇದ್ದವು. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಗ್ಗಳಿಕೆ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾಲಯದ್ದಾಗಿರುವುದು ವಿಶೇಷ.
Related Articles
ಸರ್ವಾಂಗೀಣ ಸಾಧನೆಗಾಗಿ ಅಯರ್‌ಲ್ಯಾಂಡಿನ ಫಿಯಾನ್ ಪೆರೆರಾ ತಂಡಕ್ಕೆ ಗೂಗಲ್ ಗ್ರ್ಯಾಂಡ್ ಪ್ರçಜ್ (50 ಸಾವಿರ ಅಮೆರಿಕನ್ ಡಾಲರ್) ಲಭಿಸಿದೆ.
ಪರಿಸರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ನ್ಯಾಶನಲ್ ಜಿಯೋಗ್ರಫಿಕ್ ಎಕ್ಸ್ ಪ್ಲೋರರ್ ಪ್ರಶಸ್ತಿಯು (15 ಸಾವಿರ ಅಮೆರಿಕನ್ ಡಾಲರ್) ಭಾರತವನ್ನು ಪ್ರತಿನಿಧಿಸಿದ ಇಂದ್ರಪ್ರಸ್ಥ ಕಾಲೇಜಿನ ತಂಡದ ಪಾಲಾಗಿದೆ.
Advertisement
ತಲಾ 15 ಸಾವಿರ ಅಮೆರಿಕನ್ ಡಾಲರ್ ಬಹುಮಾನವುಳ್ಳ ಲೀಗೋ ಎಜುಕೇಶನ್ , ಸೈಂಟಿಫಿಕ್ ಅಮೆರಿಕನ್ ಇನೋವೇಟರ್ ಮತ್ತು ಫಯೋನಿಕ್ ಅವಾರ್ಡ್‌ಗಳನ್ನು ರಷ್ಯಾದ ಡ್ಯಾನಿಯಲ್ ಕಜನೆr$Õàವ್, ಟರ್ಕಿಯ ತೌನ್ ಡೋಲ್‌ವುನ್ ಹಾಗೂ ಇಂಡೋನೇಷ್ಯಾದ ಸೆಲೆಸ್ಟಿನ್ ವೆನಾರ್ಡಿ ಗೆದ್ದುಕೊಂಡಿದ್ದಾರೆ. ಮಾರ್ಗದರ್ಶಿ ಶಿಕ್ಷಕರಿಗೆ ನೀಡಲಾಗುವ ಇನ್ಸ್‌ಫಯರಿಂಗ್ ಎಜುಕೇಟರ್ ಪ್ರಶಸ್ತಿ 5 ಸಾವಿರ ಅಮೆರಿಕನ್ ಡಾಲರ್ ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ನಿಶಿತಾ ಕೆ. ಗೆದ್ದುಕೊಂಡಿದ್ದಾರೆ.