Advertisement
ಉತ್ಸವದ ಮೊದಲ ದಿನವಾದ ಸೆ. 22ರಂದು ಕೊಡಿಗೇಹಳ್ಳಿ, ಕನ್ನಳಿಯ ಅಲ್ಲಮ ಕಲಾಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ಚತ್ತೀಸ್‌ಗಡಧ ಪಂಥಿ ಜಾನಪದ ನೃತ್ಯ, ಸಮನ್ವಯ ನೃತ್ಯ ಕಂಪನಿಯಿಂದ ಗರ್ಬಾ ಮತ್ತು ದಾಂಡಿಯಾ ಹಾಗೂ ಡಾ. ಅರ್ಧನಾರೀಶ್ವರ ವೆಂಕಟ್ ಅವರಿಂದ ಕೂಚಿಪುಡಿ ನೃತ್ಯ ಪ್ರದರ್ಶನಗೊಳ್ಳಲಿವೆ. ಸಂಜೆ ಫ್ರೀಡಂಪಾರ್ಕ್‌ನಲ್ಲಿ ರಮೇಶ್ ಪಾಲ್ ಮತ್ತು ತಂಡದಿಂದ ದಿವಾರಿ ಜಾನಪದ ನೃತ್ಯ ನಡೆಯಲಿದೆ. ಜತೆಗೆ ತ್ರಿಧರ ತಂಡದಿಂದ ಒಡಿಸ್ಸಿ ನೃತ್ಯ, ಚತ್ತೀಸ್‌ಗಢದ ಪಂಥಿ ಜಾನಪದ ನೃತ್ಯ, ಶ್ರೀಲಂಕಾದ ರಂಗೀಸರ ನೃತ್ಯ ತಂಡದಿಂದ ನೃತ್ಯ, ಸಮನ್ವಯ ತಂಡದಿಂದ ಗರ್ಭಾ ಮತ್ತು ದಾಂಡಿಯಾ ಹಾಗೂ ಅರ್ಧನಾರೀಶ್ವರ ವೆಂಕಟ್ ಅವರಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಸ್ಮತಿ ನಂದನ್ ಸಾಂಸ್ಕೃತಿಕ ಭವನ, ವಸಂತನಗರ ಫ್ರೀಡಂ ಪಾರ್ಕ್ ಯಾವಾಗ?: ಸೆ. 22, 23, 30
ಪ್ರವೇಶ: ಉಚಿತ
ಸಂಪರ್ಕ: 9741350377