Advertisement
“5ಜಿ’ ತರಂಗಗಳ ವಿಶೇಷತೆಹೈ ಸ್ಪೀಡ್ ಇಂಟರ್ನೆಟ್ ಹಾಗೂ ದೂರವಾಣಿ ಸೇವೆಗಳನ್ನು ನಿಸ್ತಂತು (ವೈರ್‌ಲೆಸ್) ಮಾದರಿಯಲ್ಲಿ ನೀಡುವ ತಂತ್ರಜ್ಞಾನವಿದು. ಇವು ಮೈಕ್ರೋವೇವ್ ಮಾದರಿಯ ಸೂಕ್ಷ್ಮಾತಿಸೂಕ್ಷ್ಮ ಆದರೆ, ಬಲು ಶಕ್ತಿಶಾಲಿಯಾದ ತರಂಗಗಳು. ಇವನ್ನು ಸಿ-ಬ್ಯಾಂಡ್ ತರಂಗಗಳೆಂದು ವರ್ಗೀಕರಿಸಲಾಗಿದೆ.
ಎಫ್ಎಎ ನೀಡಿರುವ ವರದಿಯ ಪ್ರಕಾರ, 5ಜಿ ತರಂಗಗಳು ವಿಮಾನಗಳ ನೇವಿಗೇಷನ್ ವ್ಯವಸ್ಥೆ ಹಾಗೂ ಬ್ರೇಕಿಂಗ್ ವ್ಯವಸ್ಥೆಗೆ ತೊಂದರೆ ಉಂಟು ಮಾಡುತ್ತವೆ. ಇದರಿಂದ, ವಿಮಾನಗಳು ದಿಕ್ಕು ತಪ್ಪುವುದು ಒಂದು ತೊಂದರೆಯಾದರೆ, ಅವುಗಳ ಲ್ಯಾಂಡಿಂಗ್‌ಗೂ ಸಮಸ್ಯೆಯಾಗುತ್ತದೆ. ಅಂದರೆ, ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ಓಡುವ ವಿಮಾನಗಳ ಬ್ರೇಕ್‌ಗಳು 5ಜಿ ತರಂಗಗಳ ಅಡಚಣೆಯಿಂದಾಗಿ ನಿಷ್ಕ್ರಿಯವಾಗುತ್ತವೆ. ಏರ್ ಇಂಡಿಯಾ ಸೇವೆಗಳು ರದ್ದು
5ಜಿ ತರಂಗಗಳ ಸಮಸ್ಯೆ ಹಿನ್ನೆಲೆಯಲ್ಲಿ ಜ. 19ರಿಂದ ಅಮೆರಿಕ-ಭಾರತ ನಡುವಿನ ವೈಮಾನಿಕ ಸೇವೆಯನ್ನು ರದ್ದುಗೊಳಿಸುತ್ತಿರುವುದಾಗಿ ಏರ್ ಇಂಡಿಯಾ ಪ್ರಕಟಿಸಿದೆ.
Related Articles
Advertisement