Advertisement
ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯ “ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಂತಹ (ಐಎಫ್ಎಫ್) ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಜೊತೆಗೆ ಒಟ್ಟಾರೆ ರಾಷ್ಟ್ರೀಯ ಸೌಖ್ಯವನ್ನೂ (ಜಿಎನ್‌ಎಚ್) ಅಭಿವೃದ್ಧಿಯ ಮಾನದಂಡವನ್ನಾಗಿ ಪರಿಗಣಿಸುತ್ತಿವೆ. ಹಾಗಾಗಿ ಒಂದು ದೇಶದ ಅಭಿವೃದ್ಧಿಗೆ ಜಿಡಿಪಿಯ ಅಂಕಿ-ಅಂಶಗಳಷ್ಟೇ ಮುಖ್ಯ ಆಗುವುದಿಲ್ಲ. ಜಿಡಿಪಿಯ ಜೊತೆಗೆ ದೇಶದ ಜಿಎನ್ ಎಚ್ ಸಹ ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಭಾರತ ಜಾಗತಿಕ ಶಕ್ತಿ ಕೇಂದ್ರ ಆಗಬೇಕಾದರೆ, ಇಲ್ಲಿಯ ಜೆಡಿಪಿಯಲ್ಲದೇ ಜಿಎನ್‌ಎಚ್ ಸಹವೃದ್ಧಿಯಾಗಬೇಕು ಎಂದು ಹೇಳಿದರು.
Related Articles
ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಹೇಳಿದ ರಾಷ್ಟ್ರಪತಿಯವರು, ಕೌಶಲ್ಯ ವಿವಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.
Advertisement
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯಡ್ಡಿ ಮಾತನಾಡಿ, ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರ ಆರ್ಥಿಕ ಸುಧಾರಣೆಗಳ ಸೂತ್ರಗಳಿಗೆ 25 ವರ್ಷ ಮುಗಿದಿರುವ ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭವಾಗುತ್ತಿರುವುದು ವಿಶೇಷ ಸಂದರ್ಭದಲ್ಲಿ ಇದಕ್ಕಾಗಿ ರಾಜ್ಯ ಸರ್ಕಾರ 275 ಕೋಟಿ ರೂ. ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಇದೊಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಲೋಕಸಭೆಯಕ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಆರ್.ವಿ. ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಡಾ. ಎಚ್.ಸಿಮಹದೇವಪ್ಪ, ಎಚ್. ಆಂಜನೇಯ, ಆರ್. ರೋಷನ್‌ಬೇಗ್, ಮುಖ್ಯಕಾರ್ಯದರ್ಶಿ ಸುಭಾಷಚಂದ್ರ ಕುಂಟಿಯಾ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಡಾ. ಬಿ.ಆರ್. ಅಂಬೇಡ್ಕರ್ಸ್ಕೂಲ್ ಆಫ್ ಎಕನಾಮಿಕ್ಸ್‌ನ ನಿರ್ದೇಶಕ ಅನುಪ್ ಕೆ. ಪೂಜಾರಿ ಮತ್ತಿತರರು ಇದ್ದರು. ಅಭಿವೃದ್ಧಿ ಅಂದ್ರೆ ಬರೀ ರಸ್ತೆ, ಸೇತುವೆಗಳಲ್ಲ: ಸಿಎಂ
ಕರ್ನಾಟಕದಲ್ಲಿ ಆಕರ್ಷಕ ರಸ್ತೆಗಳು, ಉಕ್ಕು ಮತ್ತು ಗಾಜಿನ ಎತ್ತರದ ಸೇತುವೆಗಳು, ಬುಲೆಟ್ ರೈಲುಗಳನ್ನಷ್ಟೇ ಅಭಿವೃದಿಟಛಿಯೆಂದು ಪರಿಗಣಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆಗಳ ನಿರ್ಮಾಣ ಮಾತ್ರ ಅಭಿವೃದ್ಧಿಯಲ್ಲ. ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ಅವಕಾಶಗಳು ನಿಜವಾದ ಅಭಿವೃದ್ಧಿ ಎಂದರು. ಜನರಿಗೆ ತಮಗಿಷ್ಟದ ಆಹಾರ ಆಯ್ಕೆ ಮಾಡಿಕೊಳ್ಳಲು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಯಗ್ರಸ್ಥರಾಗಿದ್ದರೆ ಸಮಾಜದ ಪ್ರಗತಿ ಹೊಂದಲು ಸಾಧ್ಯವಿಲ್ಲ. ಹಸಿವು ಏನೆಂದುಗೊತ್ತಿರದವರು ಅನ್ನಭಾಗ್ಯ ಯೋಜನೆಯನ್ನು ಕಿಸುತ್ತಾರೆ. ಆದರೆ, ಇಂತಹ ಟೀಕೆಗಳಿಗೆ ರ್ಕಾರ ಕಿವಿಗೊಡುವುದಿಲ್ಲ ಎಂದರು. ಇಡೀ ದೇಶದಲ್ಲಿ ಶಿಕ್ಷಣ ತ್ತು ಆರೋಗ್ಯದ ಉತ್ತಮ ಸೌಲಭ್ಯಗಳಿರುವುದು ಕರ್ನಾಟಕದಲ್ಲಿ ತ್ರ. ಬೆಂಗಳೂರು ಡಾ. ಬಿ.ಆರ್. ಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ದೇಶದ ಮೊದಲ ಸಂಸ್ಥೆಯಾಗಿದ್ದು, ಇದು ರ್ನಾಟಕದ ಪ್ರಗತಿಯ ಸಂಕೇತ.
– ವಜುಭಾಯಿ ವಾಲಾ, ರಾಜ್ಯಪಾಲರು ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ದಾಖಲಾತಿ ಅನುಪಾತ ಶೇ.27 ರಷ್ಟಿದ್ದು, 10 ವರ್ಷ ಗಳಲ್ಲಿ ಅದನ್ನು ಶೇ.40ಕ್ಕೆ ಹೆಚ್ಚಿಸುವ ಗುರಿ
ಹೊಂದಲಾಗಿದೆ. ಅದಕ್ಕಾಗಿ ಕಾಲೇಜು ಶಿಕ್ಷಣ ಪಡೆಯುವ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಈ ನಿಟ್ಟಿನ ಮಹತ್ವದ ಹೆಜ್ಜೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ