Advertisement
ಪ್ರಸಕ್ತ ಸಾಲಿನಲ್ಲೇ ಈ ಬದಲಾವಣೆ ಜಾರಿಗೊಳ್ಳಲಿದೆ. ಶೀಘ್ರವೇ ವಿಶ್ವವಿದ್ಯಾನಿಲಯಗಳಿಗೆ ಈ ಸಂಬಂಧ ನಿರ್ದೇಶನ ಕಳುಹಿಸಲಿದೆ.
ಆಂತರಿಕ ಅಂಕ ಹೆಚ್ಚಳಕ್ಕೆ ವಿ.ವಿ.ಗಳ ಕುಲಪತಿಗಳ ಪರ, ವಿರುದ್ಧ ನಿಲುವು ವ್ಯಕ್ತವಾಗಿದೆ. ಕೆಲವು ವಿ.ವಿ.ಗಳ ಕುಲಪತಿಗಳು ಥಿಯರಿಯಲ್ಲಿ 50 ಆಂತರಿಕ ಅಂಕ ಮತ್ತು 50ರಷ್ಟು ಪರೀಕ್ಷಾ ಅಂಕ ನಿಗದಿ ಮಾಡಬೇಕು ಎಂದಿದ್ದಾರೆ. ಕೆಲವು ಕುಲಪತಿಗಳು ಅಂತರಿಕ ಅಂಕದಲ್ಲಿ ಸ್ವಲ್ಪ ಏರಿಕೆ ಮಾಡಬೇಕು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಆಂತರಿಕ ಅಂಕವನ್ನು ಈಗಿರುವ ಗರಿಷ್ಠ 30ರಿಂದ 40ಕ್ಕೆ ಏರಿಸುವ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪರಿಣಾಮವೇನು?
ಆಂತರಿಕ ಅಂಕ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಅನನುಕೂಲ ಎರಡೂ ಇವೆ. ಪ್ರಾಧ್ಯಾಪಕರು ಮೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚು ಆಂತರಿಕ ಅಂಕ ನೀಡುವ ಸಾಧ್ಯತೆ ಇದೆ. ಆಂತರಿಕ ಅಂಕಗಳಲ್ಲಿ 30ಕ್ಕೆ 30 ಪಡೆಯಲು ಅವಕಾಶವಿದೆ. ಹಾಗೆಯೇ ತೇರ್ಗಡೆಗೆ ಕನಿಷ್ಠ ಆಂತರಿಕ ಅಂಕ ಪಡೆಯಲೇ ಬೇಕು. ಹೀಗಾಗಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಆಂತರಿಕ ಅಂಕ ಕಡಿಮೆಯಾಗಬಹುದು. ಅಂತರಿಕ ಅಂಕ ಚೆನ್ನಾಗಿ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು.
Related Articles
Advertisement
ಥಿಯರಿ ವಿಷಯದಲ್ಲಿ 40 ಆಂತರಿಕ ಅಂಕ ಮತ್ತು 60 ಪರೀಕ್ಷೆ ಅಂಕ ಇರಲಿದೆ. ಹಾಗೆಯೇ ಪ್ರಾಯೋಗಿಕ ವಿಷಯಗಳಲ್ಲಿ ಆಂತರಿಕ ಅಂಕ ಮತ್ತು ಪರೀಕ್ಷಾ ಅಂಕ ತಲಾ 50 ಇರಲಿವೆ.-ಪ್ರೊ| ಬಿ. ತಿಮ್ಮೇಗೌಡ,ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ವಿದ್ಯಾರ್ಥಿಗಳಿಗೆ ತಾರತಮ್ಯ ಆಗಬಾರದು. ಹೆಚ್ಚುವರಿ ವಿಷಯ ಕಲಿಕೆಯ ಆಧಾರದಲ್ಲಿ ಆಂತರಿಕ ಅಂಕ ನೀಡಲು ನಿರ್ದಿಷ್ಟ ಮಾನದಂಡ ನಿಗದಿಪಡಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ.
-ಪ್ರೊ| ವೇಣುಗೋಪಾಲ್,
ಬೆಂಗಳೂರು ವಿ.ವಿ. ಕುಲಪತಿ -ರಾಜು ಖಾರ್ವಿ ಕೊಡೇರಿ