Advertisement

ಕಾರ್ಮಿಕರ ಕಾರ್ಡ್‌ಗೆ ಮಧ್ಯವರ್ತಿಗಳ ಕಾಟ

08:49 AM May 22, 2020 | Suhan S |

ಕಲಘಟಗಿ: ಪಟ್ಟಣದ ಅನೇಕ ಗಣಕೀಕೃತ ಕೇಂದ್ರ ಸೇರಿದಂತೆ ತಾಲೂಕಿನ ಜೋಡಳ್ಳಿ, ಗಳಗಿಹುಲಕೊಪ್ಪ, ದುಮ್ಮವಾಡ, ಹಿರೇಹೊನ್ನಿಹಳ್ಳಿ, ತಬಕದಹೊನ್ನಿಹಳ್ಳಿ, ಮಿಶ್ರೀಕೋಟಿ, ತುಮರಿಕೊಪ್ಪ, ದೇವಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾರ್ಮಿಕ ಕಾರ್ಡ್‌ ಮಾಡಿಕೊಡುವ ಮಧ್ಯವರ್ತಿಗಳು ಹೆಚ್ಚಿದ್ದಾರೆ.

Advertisement

ಕೇಂದ್ರ ಸರಕಾರದಿಂದ ಚಾಲ್ತಿಯಲ್ಲಿರುವ ಪ್ರತಿ ಕಾರ್ಡ್‌ದಾರರಿಗೆ 3 ಸಾವಿರ ಮತ್ತು 2 ಸಾವಿರದಂತೆ ಒಟ್ಟು 5 ಸಾವಿರ ರೂ. ಜಮೆಯಾಗುತ್ತದೆ. ಇದರಿಂದ ತಾಲೂಕಿನಲ್ಲಿ ನೂತನವಾಗಿ ಕಾರ್ಮಿಕ ಕಾರ್ಡ್‌ ಮಾಡುವವರ ಹಾಗೂ ಹಳೆ ಕಾರ್ಡ್‌ ಮರುಚಾಲ್ತಿ ಮಾಡುವವರ ಸಂಖ್ಯೆ ಇಮ್ಮಡಿಗೊಂಡಿದೆ. ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ಇದ್ದು, ಕಚೇರಿಯಲ್ಲಿ ವರ್ಷಗಳಿಂದ ಕಂಪ್ಯೂಟರ್‌ ಆಪರೇಟರ್‌ ಹೊರತುಪಡಿಸಿ ಸಿಪಾಯಿಯಾಗಲಿ, ಬೇರೆ ಯಾವುದೇ ಸಿಬ್ಬಂದಿ ಇರಲ್ಲ. ಅಲ್ಲದೆ ಪೂರ್ಣ ಪ್ರಮಾಣದ ಕಾರ್ಮಿಕ ನಿರೀಕ್ಷಕ ಅಧಿಕಾರಿಗಳು ಇಲ್ಲದೇ ಇರುವುದು ಇಂತಹ ವ್ಯವಹಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ. ಜಿಲ್ಲಾಡಳಿತ, ತಾಲೂಕಾಡಳಿತ ಇನ್ನಾದರೂ ಕಾರ್ಮಿಕರ ನೆರವಿಗೆ ಬರಬೇಕಿದೆ.  ತಾಲೂಕಿನಲ್ಲಿ ಕೂಲಿ ಕಾರ್ಮಿಕರಲ್ಲದವರ ಹೆಸರು ನೋಂದಣಿ ಮಾಡಿಸಲಾಗುತ್ತಿದೆ ಎಂದು ಸಮಾಜ ಸೇವಕ ಬಸವರಾಜ ಹೊನ್ನಿಹಳ್ಳಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next