Advertisement
ಅನುಮತಿ ಪಡೆದ ಡೀಲರ್ಗಳು, ಏಜೆನ್ಸಿಗಳ ಮೂಲಕ ಟ್ಯಾಗ್ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರ ಪರಿಣಾಮ ಏಜೆನ್ಸಿ ಪಡೆದವರು ಮಧ್ಯವರ್ತಿಗಳಾಗಿ ನಿಗದಿಯಾದ ಬೆಲೆಗಿಂತ ಹೆಚ್ಚಿನ ಮೊತ್ತ ಪಡೆದು ವಾಹನ ಸವಾರರಿಂದ ಹಣ ಲೂಟಿ ಮಾಡುತಿದ್ದಾರೆ.ಎಸ್‌ಬಿಐ ಬ್ಯಾಂಕ್‌ನಲ್ಲಿ ಫಾಸ್ಟ್‌ಟ್ಯಾಗ್ ವಿತರಣೆಗೆ ಮಾಡಲು ಕಾರಿಗೆ 400 ರೂ.ಸಣ್ಣ ಪ್ರಮಾಣದ ಖಾಸಗಿ ವಾಹನಕ್ಕೆ 140 ರೂ.ಬಸ್ಸುಗಳಿಗೆ 300 ರೂ.ಮಿನಿ ಬಸ್‌ಗೆ 140. ಟ್ರಕ್‌ಗೆ 300.ಟಾಟಾ ಎಸಿಗೆ 400 ರೂ.ನಿಗದಿ ಮಾಡಲಾಗಿದೆ.
Related Articles
Advertisement
ಮಧ್ಯವರ್ತಿಗಳ ಕಂಟಕ: ಫಾಸ್ಟ್‌ಟ್ಯಾಗ್ ಕಡ್ಡಾಯ ವಾಗುವುದರಿಂದ ವಾಹನ ಸವಾರರು ಫಾಸ್ಟ್‌ಟ್ಯಾಗ್‌ಪಡೆಯುವುದು ಅನಿವಾರ್ಯವಾಗಿದ್ದು, ಇದನ್ನೇಬಂಡವಾಳ ಮಾಡಿಕೊಂಡ ಕೆಲ ಏಜೆನ್ಸಿಗಳು ಮಧ್ಯ ವರ್ತಿಗಳ ಮೂಲಕ ಹೆಚ್ಚಿನ ಮೊತ್ತ ಪಡೆದು ಹಣಲೂಟಿಯಲ್ಲಿ ತೊಡಗಿದ್ದಾರೆ.ವಾಹನ ಸವಾರರಿಗೆಟ್ಯಾಗ್ ಸರಿಯಾದ ಸಮಯಕ್ಕೆ ಸಿಗದೆ, ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
-ಕೊಟ್ರೇಶ್. ಆರ್