Advertisement
ಈಗ ಮುಖ್ಯರಸ್ತೆಯ ಬದಿ ಇಂಟರ್ ಲಾಕ್ ರಾಶಿ ಬಿದ್ದಿದೆ. ಇದರಿಂದ ರಸ್ತೆ ಬದಿ ನಡೆದುಕೊಂಡು ಹೋಗಲು ಕೂಡಾ ಸಾಧ್ಯವಾಗುತ್ತಿಲ್ಲ. ಇಂಟರ್ ಲಾಕ್ ತೆಗೆದವರು ಕಾಮಗಾರಿ ಮುಗಿದು ಹಲವು ದಿನಗಳಾದರೂ ಅದನ್ನು ಮತ್ತೆ ಅಳವಡಿಸಿಲ್ಲ. ಸ್ಥಳೀಯಾಡಳಿತ ನಗರಸಭೆಯವರೂ ಇಂಟರ್‌ಲಾಕ್ ಗಳನ್ನು ಮತ್ತೆ ಸ್ವಸ್ಥಾನದಲ್ಲಿ ಅಳವಡಿಸುವ ಅಥವಾ ಅಳವಡಿಸುವಂತೆ ಸೂಚಿಸುವ ಕೆಲಸವನ್ನು ಮರೆತು ಬಿಟ್ಟಿದ್ದಾರೆ. ಆದ ಕಾರಣ ಸಾರ್ವಜನಿಕರ ತೆರಿಗೆಯ ಹಣ ಮಣ್ಣು ಪಾಲಾಗುತ್ತಿದೆ ಮತ್ತು ನಿತ್ಯ ಸಾರ್ವಜನಿಕ ಸಮಸ್ಯೆಯೂ ಆಗುತ್ತಿದೆ.
ಇಂತಹ ಅವ್ಯವಸ್ಥೆಗಳು ಉಂಟಾದಾಗ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುವುದಿಲ್ಲ. ಬೊಳುವಾರಿನಲ್ಲಿ ಮತ್ತೆ ರಸ್ತೆ ಬದಿಯ ಇಂಟರ್‌ಲಾಕ್ ಗಳನ್ನು ಅಳವಡಿಸದಿದ್ದರೆ ರಸ್ತೆ ಬದಿ ರಾಶಿ ಹಾಕಿರುವ ಇಂಟರ್‌ಲಾಕ್‌ಗಳು ತೋಡಿಗೆ ಬಿದ್ದು ಹಾಳಾಗುತ್ತವೆ. ನಗರಸಭೆ ಜನರ ತೆರಿಗೆ ಹಣ ನಷ್ಟವಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ನಿಯಮ ಉಲ್ಲಂಘನೆ
ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ರಾಜ್ಯ ಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ಧಾರಿ ಬದಿಗಳಲ್ಲಿ ಖಾಸಗಿಯವರು ಕಾಮಗಾರಿ ನಡೆಸಬೇಕಾದರೆ ಅದರ ಮರುನಿರ್ಮಾಣದ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿ ಮಾಡಬೇಕು. ಇಲಾಖೆಗೆ ಕಾಮಗಾರಿ ವೆಚ್ಚವನ್ನು ಭರಿಸಿದ ಅನಂತರವೇ ಕಾಮಗಾರಿಗಳನ್ನು ನಡೆಸಬೇಕು. ಕಾಮಗಾರಿ ನಡೆದ ಬಳಿಕ ಸಂಬಂಧಪಟ್ಟ ಇಲಾಖೆ ಕಾಮಗಾರಿಯ ಕಾರಣಕ್ಕಾಗಿ ಆಗಿರುವ ನ್ಯೂನ್ಯತೆಗಳನ್ನು ಕಾಮಗಾರಿ ನಡೆಸಿದ ಖಾಸಗಿಯವರು ಪಾವತಿಸಿದ ಹಣದಿಂದ ಸರಿಪಡಿಸಬೇಕು. ಆದರೆ ಈ ನಿಯಮ ಇಲ್ಲಿ ಮಾತ್ರ ಪಾಲನೆಯಾಗಿಲ್ಲ.
Related Articles
ಇಂಟರ್‌ಲಾಕ್ ತೆಗೆದಿರುವುದನ್ನು ಮರು ಜೋಡಿಸುವ ಕೆಲಸವನ್ನು ಸಂಸ್ಥೆಯವರು ಮಾಡಬೇಕು. ಈ ಕುರಿತು ಅವರಿಗೆ ಸೂಚಿಸಲಾಗಿದೆ. ಮತ್ತೊಮ್ಮೆ ಅವರ ಗಮನಕ್ಕೆ ತರಲಾಗುವುದು.
- ರೂಪಾ ಟಿ. ಶೆಟ್ಟಿ ಪೌರಾಯುಕ್ತರು,
ನಗರಸಭೆ ಪುತ್ತೂರು
Advertisement