Advertisement

ಶೆಟ್ಟರ್‌ ಮನೆಯಲ್ಲಿ ಶಾಸಕರ ಸಭೆ ಕುತೂಹಲ

11:27 PM Feb 18, 2020 | Lakshmi GovindaRaj |

ಬೆಂಗಳೂರು: ಕೆಲ ಶಾಸಕರೊಂದಿಗೆ ಸೋಮವಾರ ರಾತ್ರಿ ನಡೆಸಿದ ಸಭೆ ಬಗ್ಗೆ ಪಕ್ಷದಲ್ಲಿ ನಾನಾ ವಿಶ್ಲೇಷಣೆ ಕೇಳಿಬಂದ ಬೆನ್ನಲ್ಲೇ ಸಚಿವ ಜಗದೀಶ ಶೆಟ್ಟರ್‌ ಅವರು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಮಜಾಯಿಷಿ ನೀಡಿದರು. ಯಡಿಯೂರಪ್ಪ ಅವರ ಕರೆ ಮೇರೆಗೆ ಡಾಲರ್ ಕಾಲೋ ನಿಯ ಧವಳಗಿರಿ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ದೌಡಾ ಯಿಸಿದ ಜಗದೀಶ ಶೆಟ್ಟರ್‌ ಸಭೆಯ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ನಡೆಸಿದರು.

Advertisement

ಬಳಿಕ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್‌, ಪಕ್ಷದ ಕೆಲ ಶಾಸಕರು ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಮನೆಗೆ ಬಂದಿದ್ದರು. ಈ ಬಗ್ಗೆ ಕೇಳಿಬಂದಿರುವ ಮಾತುಗಳು ಊಹಾಪೋಹವಷ್ಟೇ. ಈ ಹಿಂದೆಯೂ ಹಲವು ಬಾರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಸಿದ್ದೇನೆ. ಸೋಮವಾರ ಕೆಲ ಶಾಸಕರು ಭೇಟಿಯಾದ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ.

ಇದಕ್ಕೆ ಯಾಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಗಬೇಕು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಯಾಗಿದ್ದೇನೆ. ಕೆಲ ಶಾಸಕರು ಜಗದೀಶ ಶೆಟ್ಟರ್‌ ಅವ ರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದನ್ನು ರಹಸ್ಯ ಮಾತುಕತೆ ಎನ್ನಲಾಗದು ಎಂದರು.

ಜಗದೀಶ ಶೆಟ್ಟರ್‌ ಅವರ ಸರ್ಕಾರಿ ನಿವಾಸದಲ್ಲಿ ಮಾಜಿ ಸಚಿವರಾದ ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಐದು ಮಂದಿ ಸೇರಿ ಮಾತುಕತೆ ನಡೆಸಿದ್ದರು. ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿರುವ ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ ಅವರು ಶೆಟ್ಟರ್‌ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅತೃಪ್ತರೆಲ್ಲಾ ಸೇರಿ ಪರ್ಯಾಯ ನಾಯಕತ್ವದ ಬಗ್ಗೆ ಚರ್ಚೆ ನಡೆಸಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಅನಾಮಧೇಯ ಪತ್ರ!: ಈ ನಡುವೆ ಯಡಿಯೂ ರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿರು ವುದು, ಪುತ್ರ ಬಿ.ವೈ. ವಿಜಯೇಂದ್ರ ಅವರಿಂದ ಆಡಳಿತದಲ್ಲಿ ಹಸ್ತಕ್ಷೇಪ ಇದೆ ಎಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅನಾಮಧೇಯ ಪತ್ರವೊಂದು ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದ್ದು, ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಜನಪ್ರಿಯ ನಾಯಕರಾಗಿದ್ದರೂ, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Advertisement

ಇದರಿಂದ ಸರ್ಕಾರ ನಿಷ್ಕ್ರಿಯವಾದಂತಾಗಿದೆ. ಪಕ್ಷದ ತತ್ವ, ಸಿದ್ಧಾಂತ ಹಾಗೂ ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲ ಹುದ್ದೆಯನ್ನು ನೀಡುವ ಮೂಲಕ ಅವರ ಅನುಭವ ಬಳಸಿಕೊಳ್ಳಬೇಕು. ಇನ್ನೊಂದೆಡೆ ಪುತ್ರ ಬಿ.ವೈ. ವಿಜಯೇಂದ್ರ ಅವರು “ಸೂಪರ್‌ ಸಿಎಂ’ ಎಂಬಂತಾಗಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂಬ ಒಕ್ಕಣೆಯುಳ್ಳ ಪತ್ರವೊಂದು ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next