Advertisement

ಪೆನ್ನು ಹಿಡಿಯುವ ಕೈಗೆ ಕತ್ತಿ ಚಾಕು ಸಿಕ್ಕರೆ ಏನಾದೀತು?

09:28 AM May 10, 2019 | Hari Prasad |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೆ ಇಲ್ಲೊಂದು ಪುಟ್ಟ ಜಾಗ

Advertisement

ವಿಜ್ಞಾನ ಪ್ರಪಂಚ ಹಲವು ಮಹನೀಯರನ್ನು ನೀಡಿದೆ. ಅವರಿಂದ ಪ್ರಪಂಚಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ವೈಯಕ್ತಿಕ ಜೀವನದಲ್ಲಿ ವಿಕ್ಷಿಪ್ತ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದಕ್ಕೆ ಈ ಘಟನೆ ನಿದರ್ಶನ.

16ನೇ ಶತಮಾನದ ಡೆನ್ಮಾರ್ಕ್‌ನಲ್ಲಿ ಖಗೋಳಶಾಸ್ತ್ರಜ್ಞನೊಬ್ಬನಿದ್ದ. ಆತನ ಹೆಸರು ಟೈಕೊ ಬ್ರಾಹೆ. ಒಮ್ಮೆ ಟೈಕೋಗೂ, ಮತ್ತೂಬ್ಬ ವಿಜ್ಞಾನಿಗೂ ನಡುವೆ ಮನಸ್ತಾಪ ಏರ್ಪಟ್ಟಿತು. ಗಣಿತ ಸೂತ್ರ ಅದಕ್ಕೆ ಕಾರಣ. ಒಬ್ಬರು ಪರ, ಇನ್ನೊಬ್ಬರು ಅದರ ವಿರುದ್ಧ. ಈ ಮನಸ್ತಾಪ ತಾರಕಕ್ಕೇರಿ, ಯಾರು ಸರಿ ಎಂದು ಇಬ್ಬರ ನಡುವೆಯೂ ಪಂದ್ಯ ಏರ್ಪಟ್ಟಿತು. ಈಗಲಾದರೆ ಯಾವ ಸೂತ್ರ ಸರಿಯೆಂಬುದನ್ನು ಪತ್ತೆ ಹಚ್ಚಲು ಇಂಟರ್‌ನೆಟ್‌ ಸಹಾಯ ಪಡೆದುಕೊಳ್ಳಬಹುದು.

ಆದರೆ ಆಗಿನ ಕಾಲದಲ್ಲಿ ಆ ಸೌಕರ್ಯ ಇರಲಿಲ್ಲವಲ್ಲ. ಹೀಗಾಗಿ ಇಬ್ಬರೂ ಜಿದ್ದಿಗೆ ಬಿದ್ದು ಹೊಡೆದಾಡಿಕೊಂಡರು. ಹೊಡೆದಾಟದಲ್ಲಿ ಯಾರು ಜಯಗೊಳಿಸುವರೋ ಅವರೇ ಜಯಶಾಲಿ! ಇಬ್ಬರೂ ಗಣಿತ ಸೂತ್ರದ ತಪ್ಪು ಸರಿ ಕಂಡುಹಿಡಿಯಲು ಬುದ್ಧಿಮತ್ತೆಯ ಪರೀಕ್ಷೆಗೆ ಬದಲಾಗಿ ಬಲಪರೀಕ್ಷೆಯ ಮೊರೆಹೋಗಿದ್ದರು.

ಕಡೆಗೂ ಟೈಕೋ ಸೋತ. ಸೋಲುವುದು ಹಾಗಿರಲಿ; ಈ ಕಾಳಗದಲ್ಲಿ ಮೂಗು ಕಳೆದುಕೊಂಡು ಜೀವನ ಪರ್ಯಂತ ತಾಮ್ರದ ಕೃತಕ ಮೂಗನ್ನು ಆತ ಧರಿಸಬೇಕಾಗಿ ಬಂದಿತು. ಪೆನ್ನು ಹಿಡಿಯುವ ಕೈಗೆ ಕತ್ತಿ ಸಿಕ್ಕರೆ ಇನ್ನೇನಾದೀತು?!

Advertisement

— ಹವನ

Advertisement

Udayavani is now on Telegram. Click here to join our channel and stay updated with the latest news.

Next