Advertisement

ಶಾಲಾ ಮಕ್ಕಳಿಗೆ ಐತಿಹಾಸಿಕ ತಾಣಗಳ ಬಗ್ಗೆ ಆಸಕ್ತಿ ಮೂಡಿಸಿ

09:23 AM Jan 03, 2019 | |

ದೇವನಹಳ್ಳಿ: ಶಾಲಾ ಮಕ್ಕಳಿಗೆ ಶೈಕ್ಷ ಣಿಕ ಪ್ರವಾಸದಿಂದ ಐತಿಹಾಸಿಕ ತಾಣಗಳ ಇತಿಹಾಸ ತಿಳಿಸುವ ಮೂಲಕ ಅವರಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಶಾಸಕ ನಿಸರ್ಗ ಎಲ್‌.ಎನ್‌. ನಾರಾಯಣಸ್ವಾಮಿ ಸಲಹೆ ನೀಡಿದರು.

Advertisement

ನಗರದ ಗುರುಭವನ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋ ಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು. 

ಸರ್ಕಾರಿ ಶಾಲಾ ಮಕ್ಕಳ ಶೈಕಣಿಕ ಪ್ರವಾಸದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸುರಕ್ಷಿತವಾಗಿ ಹೋಗಿ ಬರಬೇಕು. ಶೈಕ್ಷಣಿಕ ಪ್ರವಾಸ ಜೀವನದ ನೆನಪಿನ ಬುತ್ತಿಯಲ್ಲಿ ಶಾಶ್ವತವಾಗಿತ್ತದೆ. ಶಿಕ್ಷಕರು ಪ್ರತಿ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಂಡು ಅವರ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಜ್ಞಾನಾ ರ್ಜನೆ ಹೆಚ್ಚಿಸಲು ಐತಿಹಾಸಿಕ ತಾಣಗಳು, ಅಲ್ಲಿನ ವೈವಿದ್ಯತೆ, ಉದ್ಯೋಗ, ಆಹಾರ ಪದ್ಧತಿ ತಿಳಿದುಕೊಳ್ಳಲು ಸರ್ಕಾರ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇತಿಹಾಸ ಪ್ರಸಿದ್ಧ ತಾಣಗಳನ್ನು ನೋಡಿದಾಗ ಅವುಗಳ ಮಾಹಿತಿಯನ್ನು ಮಕ್ಕಳು ತಿಳಿದುಕೊಳ್ಳಬಹುದು ಎಂದು ತಿಳಿಸಿದರು. 

ಬಿಇಒ ಗಾಯಿತ್ರಿ ದೇವಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2018 ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸಕ್ಕೆ ತಾಲೂಕಿನಿಂದ ಸುಮಾರು 166 ಸರ್ಕಾರಿ ಶಾಲಾ ಮಕ್ಕಳು ಎರಡು ಹಂತದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 

Advertisement

ಐತಿಹಾಸಿಕ ತಾಣಗಳ ಪರಿಚಯದಿಂದ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಾಗುತ್ತದೆ. 5 ದಿನಗಳ ಕಾಲ ಒಂದು ಮಗುವಿಗೆ ಸರ್ಕಾರ 3,500 ರೂ. ನೀಡುತ್ತಿದೆ. ಗಾಜನೂರು ಡ್ಯಾಂ, ಕುಪ್ಪಳ್ಳಿ, ಸಾಗರ, ಇಕ್ಕೇರಿ, ಜೋಗ್‌ ಜಲಪಾತ, ಬನವಾಸಿ, ಶಿರಸಿ, ಯಾಣ, ಮಿಜನ್‌ ಕೋಟೆ, ಇಡ ಗುಂಜಿ, ಮುರುಡೇಶ್ವರ, ಕೊಲ್ಲೂರು, ಆನೆಗುಡ್ಡ, ಮಣಿಪಾಲ, ಉಡುಪಿ, ಮಲ್ಫೆ ಬೀಚ್‌, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ತಾಪಂ ಸಾಮಾಜಿಕ ನ್ಯಾಯಾ ಸಮಿತಿ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಪೋಷಕರು ಮಕ್ಕಳಿಗೆ ಮೊಬೈಲ್‌ ಕೊಟ್ಟು ಕಳುಹಿಸಬಾರದು. ಸೆಲ್ಫಿಯಿಂದ ಪ್ರಾಣ ಹೋಗುತ್ತದೆ. ಜಾಗ್ರತೆಯಿಂದ ಪ್ರವಾಸ ಕೈಗೊಳ್ಳಬೇಕು. ದೇಶ ಸುತ್ತು ಕೋಶ ಓದು ಎಂಬ ಪರಿಪಾಠವನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. 

ಈ ವೇಳೆ ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಗ್ರಾಪಂ ಅಧ್ಯಕ್ಷ ರಾಮಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಎನ್‌. ನಾಗೇಶ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಿಯಾಜ್‌, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next