ಅಡಿಕೆ ಬೆಳೆಗಾರರು ಪಡೆಯುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ.ವರೆಗಿನ ಸಾಲಕ್ಕೆ ಶೇ. 5ರಷ್ಟು ಬಡ್ಡಿ ವಿನಾಯ್ತಿ ನೀಡಲಾಗಿದೆ. ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ಅಡಿಕೆ ಬೆಳಗಾರರ ಕುಟುಂಬಕ್ಕೆ ನೀಡುವ ದೀರ್ಘಾವಧಿ ಸಾಲದಲ್ಲಿ ಗರಿಷ್ಠ ಎರಡು ಲಕ್ಷ ರೂ.ವರೆಗಿನ ಸಾಲಕ್ಕೆ ಈ ಬಡ್ಡಿ ವಿನಾಯ್ತಿ ಅನ್ವಯ ಆಗಲಿದೆ. ಈ ವಿನಾಯ್ತಿ ಮೊತ್ತವನ್ನು ಸರ್ಕಾರವೇ ಆಯಾ ಸಂಘಗಳಿಗೆ ಭರಿಸಲಿದೆ. ಇನ್ನು ಸುಸ್ತಿ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದ್ದು, ಇದಕ್ಕಾಗಿ ಪ್ರಸಕ್ತ ಸಾಲಿಗೆ 466 ಕೋಟಿ ರೂ. ಒದ ಗಿಸ ಲಾಗಿದೆ. ಇದರಿಂದ 92 ಸಾವಿರ ರೈತರಿಗೆ ಪ್ರಯೋಜನ ಆಗಲಿದೆ.
ನೀತಿ, ಯೋಜನೆಗಳ ಜಾಣ ನಡೆ?: ಯೋಜನೆ ರೂಪಿಸುವುದು, ನೀತಿ ರಚಿಸುವುದು, ತಂತ್ರ ಜ್ಞಾನ ಪರಿಚಯಿಸುವುದು, ಕಾರ್ಯಾ ಸಾಧ್ಯತೆಗಳನ್ನು ಪರಿಶೀಲಿಸುವಂತಹ ಸರ್ಕಾರದ ಜಾಣ ನಡೆ ಕೃಷಿ ವಲಯದಲ್ಲಿ ಕಾಣಬಹುದು. ಕೃಷಿಯನ್ನು ಉದ್ದಿಮೆ ಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಜಾರಿ ಗೊಳಿ ಸಲಾಗುವುದು. ರೈತರಿಗೆ ಪ್ರದೇಶವಾರು ಸೂಕ್ತ ಬೆಳೆ ಬೆಳೆಯಲು, ರಸಗೊಬ್ಬರ ಶಿಫಾರಸುಗಳಿಗೆ ಒಂದು ನೀತಿ ರೂಪಿಸಲಾಗುವುದು. ಆಹಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ಹೊಸ ತಂತ್ರಜ್ಞಾನ ಪರಿಚಯಿಸಲಾಗುವುದು.
ಜಲಾಮೃತ ಯೋಜನೆ ಅನುಷಾನಗೊಳಿಸಲಾಗುವುದು. ಹಾಪ್‌ಕಾಮ್ಸ್ ಸಂಸ್ಥೆಗಳ ಬಲಪಡಿÓ ಲಾ ಗುವುದು. ಸಾಂಪ್ರದಾಯಿಕ ನೀರಾವರಿ ಪದ್ಧತಿಯಿಂದ ಇಸ್ರೇಲ್ ಮಾದರಿಗೆ ಪರಿವರ್ತಿಸಲು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು. ಪಶುಸಂಗೋಪನೆ ಗೊಂದು ಸಮಗ್ರ ನೀತಿ ಸಿದ್ಧಪಡಿಸಲಾಗುವುದು ಎನ್ನುವುದು ಸೇರಿದಂತೆ ಹೀಗೆ ಹಲವಾರು ಕ್ಷೇತ್ರಗಳಿಗೆ ನೀತಿ-ಯೋಜನೆ ಘೋಷಿಸಲಾಗಿದೆ. ಆದರೆ, ಅವುಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಅವುಗಳ ರೂಪುರೇಷೆ ಹೇಗಿರಲಿದೆ ಎಂಬುದರ ಸ್ಪಷ್ಟ ಮಾಹಿತಿಯನ್ನೂ ನೀಡಿಲ್ಲ.
ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ.ಮೀಸಲಿಡಲಾಗಿದೆ. ಫಸಲ್ ಭೀಮಾ ಯೋಜನೆಯಡಿ ರಾಜ್ಯದ ವಿಮಾ ಕಂತಿನ ಪಾಲು 900 ಕೋಟಿ ರೂ.ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್ ಕೃಷಿಗೆ ಪೂರಕವಾಗಿದೆ.
-ಬಿ.ಸಿ.ಪಾಟೀಲ್,ಕೃಷಿ ಸಚಿವ
ಕೃಷ್ಣ ಮೇಲ್ದಂಡೆ ಯೋಜನೆಗೆ ನೀರಾವರಿ ಇಲಾಖೆಯು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್ -ಆರ್ ) ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ. ಅನುದಾನವನ್ನು 2020- 21 ನೇ ಸಾಲಿನಲ್ಲಿ ಒದಗಿಸುವ ಭರವಸೆ ನೀಡಿದ್ದಾರೆ.
-ಗೋವಿಂದ ಕಾರಜೋಳ, ಡಿಸಿಎಂ
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಅಸ್ವಿತ್ವಕ್ಕೆ ಬಂದರೆ ಅಭಿವೃದ್ಧಿ ಮಹಾಪೂರವೇ ಹರಿಯಲಿದೆ ಎಂದಿದ್ದ ಬಿಜೆಪಿ ಈಗ ಒಂದೇ ಪಕ್ಷದ ಸರಕಾರವಿದ್ದರೂ ರಾಜ್ಯಕ್ಕೆ ಯಾವ ಅನುಕೂಲವೂ ಆಗುತ್ತಿಲ್ಲ. ಹಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಅದು ಹುಸಿಯಾಗಿದೆ.
-ಡಾ.ಜಿ.ಪರಮೇಶ್ವರ, ಮಾಜಿ ಡಿಸಿಎಂ