ನಗರದಲ್ಲಿ ಡಾಮರು ರಸ್ತೆಗಳ ಬದಲಿಗೆ ಕಾಂಕ್ರೀಟ್ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಹುತೇಕ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನೇ ಮಾಡಲಾಗಿದೆ. ಆದರೆ ಇತ್ತೀಚೆಗೆ ರಸ್ತೆಗಳ ಮಧ್ಯದಲ್ಲಿ ಬಿರುಕು ಬಿಟ್ಟಂತಹ ಅಂತರಗಳು ಗೋಚರಿಸುತ್ತಿದೆ. ಇದು ಹೆಚ್ಚಾಗಿ ದ್ವಿಚಕ್ರ ವಾಹನ ಸವಾರ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೂ ಕೆಲವು ಭಾಗಗಳಲ್ಲಿ ಹಂಪ್ಸ್‌ಗಳಿಗೆ ಬಣ್ಣ ಬಳಿಯದೆ ಇರುವುದು, ರಸ್ತೆಯ ನಡುವಿನ ಅಂತರಗಳು ರಸ್ತೆಯಲ್ಲಿ ಗುಂಡಿಗಳುಂಟಾಗುವುದಕ್ಕಿಂತಲೂ ಅಪಾಯಕಾರಿಯಾಗಿದೆ. ಗುಂಡಿಗಳು ದೂರದಿಂದಲೇ ಕಾಣುತ್ತವೆ. ಆದರೆ ಅನಿರೀಕ್ಷಿತ ಹಂಪ್ಸ್‌ಗಳು ರಸ್ತೆಯಲ್ಲಿ ಬಿರುಕುಗಳು ದೂರದಿಂದ ಗೋಚರಿಸದೆ ಇರುವುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅನಿರೀಕ್ಷಿತ ಹಂಪ್ಸ್‌ಗಳು, ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದೂರದಿಂದ ಕಾಣದೆ ಇರುವುದರಿಂದ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು. ಎರಡು ರಸ್ತೆಗಳ ನಡುವಿನ ಅಂತರದಲ್ಲಿ ದ್ವಿಚಕ್ರ ವಾಹನಗಳ ಟೈರ್ ಸಿಲುಕಿ ಆಯತಪ್ಪಿ ವಾಹನ ಸಮೇತ ಸವಾರರು ನೆಲಕ್ಕೆ ಬೀಳುತ್ತಾರೆ. ಇದರಿಂದ ತರುಚಿದ ಗಾಯದಿಂದ ಗಂಭೀರ ಗಾಯಗೊಂಡ ಪ್ರಕರಣಗಳೂ
Advertisement
ನಗರದಲ್ಲಿವೆ. ನಗರದ ಕಾಂಕ್ರೀಟ್ ರಸ್ತೆಗೆ ಸಮನಾಗಿ ಅಳವಡಿಸಲಾಗಿದ್ದ ಇಂಟರ್‌ಲಾಕ್‌ಗಳು ಕುಸಿಯುತ್ತಿದ್ದು, ಕಾಂಕ್ರೀಟ್‌ನ ಅಂಚಿಗೆ ಹೋದ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳುತ್ತಿದೆ. ಇಂಟರ್‌ಲಾಕ್ ಅಳವಡಿಸಿದ ಬಹುತೇಕ ಕಡೆ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಇನ್ನೇನೂ ಮಳೆಗಾಲ ಆರಂಭವಾಗಲಿದ್ದು, ಈ ಸಮಯದಲ್ಲಿ ರಸ್ತೆಗಳ ನಡುವಿನ ಅಂತರ