Advertisement
ಬುಧವಾರ ತಣ್ಣೀರು ಬಾವಿಯಲ್ಲಿರುವ ಬಿಡಿಐಎಲ್‌ಗೆ ಸೇರಿದ ರಾಜ್ಯದ ಅತೀ ದೊಡ್ಡ ಹಡಗು ಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲ್ಪಾ ಕೋಯರ್ ಅವರು ತೆಂಗಿನಕಾಯಿ ಒಡೆ ಯುವ ಮೂಲಕ ಬೋಟನ್ನು ನೀರಿ ಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಭಾರತದ ರಕ್ಷಣಾ ಇಲಾಖೆಯು ನೌಕಾ ಸೇನೆ, ಕೋಸ್ಟ್ ಗಾರ್ಡ್‌ಗೆ ಕಣ್ಗಾವಲು ನೌಕೆ ಸಹಿತ 15 ಸ್ಪೀಡ್ ಇಂಟರ್‌ಸೆಪ್ಟರ್ ಬೋಟ್‌ಗಳನ್ನು ತಯಾ ರಿಸಿಕೊಡಲು ಬಿಡಿಐಎಲ್ ಜತೆ ಸುಮಾರು 500 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ. ಸ್ಪೀಡ್ ಬೋಟ್ ಆವೃತ್ತಿಯಲ್ಲಿ ಇದು 6ನೆಯದು. ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕರ್ನಾಟಕ ವಿಭಾಗದ ಡಿಐಜಿ ಎಸ್.ಎಸ್. ದಸೀಲಾ, ಗೋವಾ ವಿಭಾಗದ ಡಿಐಜಿ ಅತುಲ್ ಪರ್ಲಿಕರ್ ಮತ್ತಿತರ ಅ ಧಿಕಾರಿಗಳು ಉಪಸ್ಥಿತರಿದ್ದರು. ಭಾರತೀ ಡಿಫೆನ್ಸ್ ಆ್ಯಂಡ್ ಇನ್‌ಫ್ರಾ ಸ್ಟ್ರಕ್ಚರ್ ಲಿಮಿಟೆಡ್‌ನ ಮಂಗಳೂರು ಯಾರ್ಡ್‌ನ ಪರವಾಗಿ ಚೀಫ್ ಆಪ ರೇಟಿಂಗ್ ಆಫೀಸರ್ ನಿವೃತ್ತ ಡಿಐಜಿ ನರೇಂದ್ರ ಕುಮಾರ್ ಸಿಂಗ್, ಮಂಗಳೂರು ಯಾರ್ಡ್‌ನ ಅಧ್ಯಕ್ಷ ಹಾಗೂ ಶಿಪ್ ಯಾರ್ಡ್ ಮುಖ್ಯಸ್ಥ ಪವಿತ್ರನ್ ಆಲೋಕನ್, ಜನರಲ್ ಮ್ಯಾನೇಜರ್ ಎಂ.ಎನ್. ಮಹೇಶ್ ಉಪಸ್ಥಿತರಿದ್ದರು.
Related Articles
ವೆಸ್ಸೆಲ್ 5-410 ಸರಣಿಯ ಈ ಇಂಟರ್‌ಸೆಪ್ಟರ್ ಬೋಟ್ ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸುವ ಶಕ್ತಿ ಹೊಂದಿದ್ದು, ಮೀನುಗಾರರ ರಕ್ಷಣೆ, ಸಮುದ್ರ ಕಳ್ಳಸಾಗಣೆ ತಡೆ ಮತ್ತಿತರ ಕಾರ್ಯಾಚರಣೆಗಳಿಗೆ ಬಳಸ ಬಹುದಾಗಿದೆ. ಎರಡು ಪ್ರಬಲ ಎಂಜಿನ್‌ಗಳನ್ನು ಬೋಟ್ ಒಳಗೊಂಡಿದ್ದು ಅಲ್ಯೂಮಿನಿಯಂ ಹಲ್‌ನಿಂದ ತಯಾರಿಸಲಾಗಿದೆ. 28 ಮೀ. ಉದ್ದ, 60 ಟನ್ ಭಾರವಿದ್ದು 11 ಸಿಬಂದಿ ಗಸ್ತು ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ.
Advertisement