ಬೆಂಗಳೂರು: ದೇಶದ ಅತ್ಯುತ್ತಮ ಖಾಸಗಿ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಸರುಗಳಿಸಿರುವ ಅಪೋಲೋ ಕ್ಯಾನ್ಸರ್ ಸೆಂಟರ್ ಸೆಂಟರ್ಸ್ (ಎಸಿಸಿ) ಬೆಂಗಳೂರಿನಲ್ಲಿ ಮೊಟ್ಟ ಮೊದಲ ನೇರ “ಇಂಟರ್ಯಾಕ್ಟಿವ್ ಕೊಲೊರೆಕ್ಟಲ್ ಶಸ್ತ್ರ ಚಿಕಿತ್ಸಾ ಕಾರ್ಯಾಗಾರ ನಡೆಸಿತು.
ಕೊಲೊರೆಕ್ಟಲ್ ಆಂಕೊಲಾಜಿ ಮತ್ತು ರೋಬೊಟಿಕ್ ಸರ್ಜರಿ, ಅಪೋಲೋ ಕ್ಯಾನ್ಸರ್ ಸೆಂಟರ್ ಬೆಂಗಳೂರು ಇದರ ಹಿರಿಯ ಸಲಹೆಗಾರ ಡಾ.ನರಸಿಂಹಯ್ಯ ಶ್ರೀನಿವಾಸಯ್ಯ, (ಎಂಡಿ, ಎಫ್ ಆರ್‌ಸಿಎಸ್, ಎಂಆರ್‌ಸಿಎಸ್, ಎಫ್ಇಬಿಎಸ್) ಮತ್ತು ಕೊಲೊರೆಕ್ಟಲ್ ಸರ್ಜರಿ, ಅಪೋಲೋ ಆಸ್ಪತ್ರೆಗಳು, ಚೆನ್ನೆçನ ಹಿರಿಯ ಸಮಾಲೋಚಕ ಡಾ.ವೆಂಕಟೇಶ್ ಮುನಿಕೃಷ್ಣನ್, ಎಂಬಿಬಿಎಸ್, ಎಂಆರ್‌ಸಿಎಸ್, ಎಫ್ಆರ್‌ಸಿಎಸ್ ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು. ಭಾರತದಲ್ಲಿನ ಅತಿ ಹೆಚ್ಚು ರೋಬೊಟಿಕ್ ಕೊಲೊರೆಕ್ಟಲ್ ಸರ್ಜರಿಗಳನ್ನು ಮಾಡಿರುವ ಡಾ.ವೆಂಕಟೇಶ್ ಮುನಿಕೃಷ್ಣನ್ ಮತ್ತು ಡಾ. ನರಸಿಂಹಯ್ಯ ಶ್ರೀನಿವಾಸಯ್ಯ ಅವರ ಮಾರ್ಗ ದರ್ಶನದಲ್ಲಿ ನಿಷ್ಕ್ರಿಯ ಲೂಪ್ ಇಲಿಯೊ ಸ್ಟೊಮಿಯೊಂದಿಗೆ ಲೋ ಆಂಟೀರಿಯರ್ ರಿಸೆಕ್ಷನ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಹೂಗ್ಲಿಯ 30 ವರ್ಷದ ರೋಗಿಯ ಗುದನಾಳದ ರೋಗ ಲಕ್ಷಣಗಳು ಮತ್ತು ಮಧ್ಯ ಗುದನಾಳದಲ್ಲಿ ಮುಂದುವರಿದ ಹಂತದ ಕ್ಯಾನ್ಸರ್ ಅನ್ನು ಹೊಂದಿದ್ದರು. ಕ್ಯಾನ್ಸರ್ ಸಿಗ್ನೆಟ್ ಕೋಶಗಳೊಂದಿಗೆ ಮ್ಯೂಸಿನಸ್ ಆಗಿತ್ತು. ಟ್ಯೂಮರ್ ಬೋರ್ಡ್‌ನಲ್ಲಿ ಅವರ ಸ್ಥಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ನಂತರ, ಅವರು ವೀರ್ಯ ಸಂರಕ್ಷಣೆ ಮತ್ತು ರೇಡಿಯೊಥೆರಪಿಯ ಸಣ್ಣ ಅವಧಿಯ ಚಿಕಿತ್ಸೆ ಮತ್ತು ಕೀಮೋ ಥೆರಪಿಗೆ ಮೂರು ಬಾರಿ ಒಳಗಾದರು. ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಪ್ರತಿಕ್ರಿಯಿಸಿದ, ಡಾ. ನರಸಿಂಹಯ್ಯ ಶ್ರೀನಿವಾಸಯ್ಯ, ರೋಗಿಯ ಮೇಲೆ ನಡೆಸಿದ ಶಸ್ತ್ರಚಿಕಿತ್ಸೆಯು ಸೂಕ್ಷ¾ ಮತ್ತು ಸಂಕೀರ್ಣವಾಗಿತ್ತು, ರೋಗಲಕ್ಷಣಗಳು ಮುಂದು ವರಿದ ಹಂತದಲ್ಲಿದ್ದವು. ಮ್ಯೂಸಿನಸ್ ಮತ್ತು ಸಿಗ್ನೆಟ್ ಕೋಶಗಳು ಅವರ ಚಿಕಿತ್ಸೆಗೆ ಬೇರೆಯದೇ ಸವಾಲೊಡಿತು. ಈ ವೇಳೆ ರೋಗಿಗೆ ಸರಿಯಾದ ವಿಧಾನ ಮತ್ತು ಚಿಕಿತ್ಸೆಯನ್ನು ನಿರ್ಧರಿಸಿ ಟ್ಯೂಮರ್ ಬೋರ್ಡ್ ಸಲಹೆ ಪಡೆದು ಚಿಕಿತ್ಸೆ ನೀಡಿದೆವು. ಅಪೋಲೋದಲ್ಲಿ, ನಾವು ಸುಧಾರಿತ ರೋಬೋಟ್ ಸಹಾಯಕ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಹೊಂದಿ ದ್ದೇವೆ, ಇದು ಕಡಿಮೆ ತಂತ್ರಗಳನ್ನು ಒಳಗೊಂಡಿ ರುತ್ತದೆ, ವೇಗವಾಗಿ ಚೇತರಿಸಿಕೊಳ್ಳಲು ಸಹಾಯಕ ಮತ್ತು ಚಿಕಿತ್ಸೆಯ ನಂತರ ಶೀಘ್ರ ಗುಣಮುಖ ರಾಗುತ್ತಾರೆ. ನಮ್ಮ ರೋಗಿಗೆ ಪ್ರತಿ ಚಿಕಿತ್ಸೆಯ ವಿಶೇಷ ಹಂತದಲ್ಲಿ ಮತ್ತು ಚೇತರಿಕೆಯ ಉದ್ದಕ್ಕೂ ಸಂಪೂರ್ಣ ಆರೈಕೆ ಮತ್ತು ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಪೋಲೋ ಆಸ್ಪತ್ರೆಗಳ, ಕರ್ನಾಟಕ ವಲಯದ ಸಿಇಒ ಡೇವಿಸನ್ ಕೆ.ಪಿ., ಭಾರತದಲ್ಲಿ ವೈದ್ಯಕೀಯ ಉದ್ಯಮದಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ, ಕರ್ನಾಟಕದ ಮೊದಲ ಲೈವ್ ಇಂಟರ್ಯಾಕ್ಟಿವ್ ರೋಬೊಟಿಕ್ ಕೊಲೊರೆಕ್ಟಲ್ ಸರ್ಜರಿ ಕಾರ್ಯಾಗಾರವು ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಕೇಂದ್ರದಲ್ಲಿ ನಡೆಯಿತು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ನಮ್ಮದು ಬೆಂಗಳೂರಿನ ಮೊದಲ ಕೊಲೊರೆಕ್ಟಲ್ ಆಂಕೊಲಾಜಿ ಘಟಕವಾಗಿರುವುದರಿಂದ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡಲು ನಮ್ಮ ಧ್ಯೇಯಕ್ಕೆ ಅನುಗುಣವಾಗಿ, ನಮ್ಮಲ್ಲಿ ನಂಬಿಕೆ ಇಟ್ಟಿರುವ ರೋಗಿಗಳಿಗೆ ಗರಿಷ್ಠ ಬೆಂಬಲ ಮತ್ತು ಸೌಕರ್ಯವನ್ನು ನೀಡಲು ನಾವು ನಮ್ಮ ಚಿಕಿತ್ಸೆಗಳ ಪೋರ್ಟ್ ಪೋಲಿಯೊಗೆ ವಿಶೇಷ ಘಟಕಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಕೆಯಾಗುತ್ತಿದೆ ಎಂದು ಹೇಳಿದರು.