Advertisement

ಕಾಂಗ್ರೆಸ್‌ ವಕೀಲ ಮಿತ್ರರೊಂದಿಗೆ ಸಂವಾದ

10:16 PM Apr 14, 2019 | Team Udayavani |

ಮಹಾನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ಎಂ. ರೈ ಅವರನ್ನು ಬೆಂಬಲಿಸಲು ಕಾಂಗ್ರೆಸ್‌ನ ವಕೀಲ ಮಿತ್ರರ ಸಭೆ ನಿರ್ಧರಿಸಿದೆ.

Advertisement

ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಕಾಂಗ್ರೆಸ್‌ನ ವಕೀಲ ಮಿತ್ರರ ಸಭೆಯಲ್ಲಿ ಮಾತನಾಡಿದ ರಾಜ್ಯ ವಕೀಲರ ಪರಿಷತ್‌ನ ಮಾಜಿ ಉಪಾಧ್ಯಕ್ಷ, ಹಿರಿಯ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ, ದೇಶದ ರಾಜಕಾರಣ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಮರ್ಥರನ್ನು ನಮ್ಮ ವಕೀಲರ ಸಂಘ ನೀಡಿದೆ. ನಮ್ಮ ವಕೀಲರ ಸಂಘದವರು ದೊಡ್ಡ ದೊಡ್ಡ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಸಮರ್ಥ ಪ್ರತಿನಿಧಿಯನ್ನು ಚುನಾ ಯಿಸಬೇಕು ಎಂದು ಹೇಳಿದರು.

ಮಾಜಿ ಸ್ಪೀಕರ್‌ ವಿ.ಆರ್‌. ಸುದರ್ಶನ್‌ ಮಾತನಾಡಿ, ವಕೀಲರಾಗಿದ್ದ ಎಂ. ವೀರಪ್ಪ ಮೊಲಿ, ಬಿ. ಜನಾರ್ದನ ಪೂಜಾರಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು ಎಂದರು.ಹಿರಿಯ ವಕೀಲ ಕಳ್ಳಿಗೆ ತಾರನಾಥ ಶೆಟ್ಟಿ , ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಎ.ಸಿ. ವಿನಯರಾಜ್‌ , ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಶಾಸಕ ಜೆ.ಆರ್‌. ಲೋಬೋ, ಹಿರಿಯ ವಕೀಲರಾದ ಬಿ. ಇಬ್ರಾಹಿಂ, ಡೆರಲ್‌ ಅಂದ್ರಾದೆ, ಸದಾಶಿವ ಉಳ್ಳಾಲ್‌, ಕುಂಬ್ರ ದುರ್ಗಾಪ್ರಸಾದ್‌ ರೈ, ರಾಘವೇಂದ್ರ ಶೆಣೈ, ಅರುಣ್‌ ಬಂಗೇರ, ಮನೋರಾಜ್‌, ವಸಂತ ಪೂಜಾರಿ ಕಾರಂದೂರ್‌, ಫಸಲುಲ್‌ ರಹಿಮಾನ್‌, ಮೊಹಮ್ಮದ್‌ ಶುಕೂರ್‌, ಪವಾಝ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next