Advertisement

ಅಂತರ್‌ ವಿ.ವಿ. ವನಿತಾ ನೆಟ್‌ಬಾಲ್‌ ಮಂಗಳೂರು ವಿ.ವಿ. ಚಾಂಪಿಯನ್‌

06:00 AM Feb 24, 2018 | Team Udayavani |

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖೀಲ ಭಾರತ ಅಂತರ್‌ ವಿ.ವಿ. ಮಹಿಳೆಯರ ನೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಮಂಗಳೂರು ವಿ.ವಿ. ತಂಡ ಚಾಂಪಿಯನ್‌ ಆಗಿ ಮೂಡಿಬಂದಿದೆ. 

Advertisement

ಎರಡನೆಯ ಸ್ಥಾನವನ್ನು ಕಲ್ಲಿಕೋಟೆ ವಿ.ವಿ., ಮೂರನೆಯ ಸ್ಥಾನವನ್ನು ದಿಲ್ಲಿ ವಿ.ವಿ., ನಾಲ್ಕನೆಯ ಸ್ಥಾನವನ್ನು ಚಂಡೀಗಢದ ಪಂಜಾಬ್‌ ವಿ.ವಿ. ತಂಡ ಪಡೆದುಕೊಂಡಿವೆ. ಮಂಗಳೂರು ವಿ.ವಿ. ಕಲ್ಲಿ ಕೋಟೆ ವಿ.ವಿ.ಯನ್ನು 56-44 ಅಂಕ ಗಳೊಂದಿಗೆ, ಪಂಜಾಬ್‌ ವಿ.ವಿ.ಯನ್ನು 65-39, ದಿಲ್ಲಿ ವಿ.ವಿ.ಯನ್ನು 65-41 ಅಂಕಗಳೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಮಂಗಳೂರು ವಿ.ವಿ.ಯ ಮೇಘಾ ಅವರು ಶ್ರೇಷ್ಠ ಗೋಲ್‌ ಶೂಟರ್‌, ದಿಲ್ಲಿ ವಿ.ವಿ.ಯ ತನು ಶರ್ಮಾ ಶ್ರೇಷ್ಠ ಆಲ್‌ರೌಂಡರ್‌ ಆಗಿ ಮೂಡಿಬಂದರು. 

ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಹುಮಾನ ವಿತರಿಸಿ ಶುಭಕೋರಿದರು. ಮಾಜಿ ಕ್ರಿಕೆಟ್‌ ಆಟಗಾರ ವಿಜಯ ಭಾರದ್ವಾಜ್‌, ಮಂಗಳೂರು ವಿ.ವಿ. ಕುಲಸಚಿವ ಬಿ.ಎಸ್‌. ನಾಗೇಂದ್ರ ಪ್ರಕಾಶ್‌, ಕಾಲೇಜು ಆಡಳಿತ ಮಂಡಳಿ ಕಾರ್ಯ ದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌, ಕೋಶಾಧಿಕಾರಿ ಪ್ರದೀಪಕುಮಾರ್‌, ಮುಖ್ಯ ತೀರ್ಪುಗಾರ ಪ್ರೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿ ದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ| ಬಿ. ಜಗದೀಶ ಶೆಟ್ಟಿ ವಹಿಸಿದ್ದರು. ಇಂಗ್ಲಿಷ್‌ ವಿಭಾಗದ ವಸಂತಾ ಸ್ವಾಗತಿಸಿ, ದೈ.ಶಿ. ನಿರ್ದೇಶಕ ಸುಕುಮಾರ್‌ ವಂದಿಸಿದರು. ಮಂಗಳೂರು ವಿ.ವಿ. ದೈ.ಶಿ. ನಿರ್ದೇಶಕ, ಸಂಘಟನ ಕಾರ್ಯ ದರ್ಶಿ ಡಾ| ಕಿಶೋರ್‌ ಕುಮಾರ್‌ ವರದಿ ವಾಚಿಸಿದರು. ಉಪನ್ಯಾಸಕಿ ದಿವ್ಯಾ ನನತ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next