Advertisement

ಅಂತರ್‌ ಜಿಲ್ಲಾ ಗಡಿ ವಿವಾದ ಸಮಸ್ಯೆ: ಪರಿಶೀಲನೆ

04:17 PM Sep 13, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಅಂತರ್‌ ಜಿಲ್ಲಾ ಗಡಿ ಸಮಸ್ಯೆ ಉದ್ಭವಾಗಿದ್ದು, ಶೆಡ್‌ ನಿರ್ಮಿಸುವ ವಿಚಾರದಲ್ಲಿ ಎರಡುಊರುಗಳ ಗ್ರಾಮಸ್ಥರ ನಡುವೆ ಹೊಸ ವಿವಾದ ಸೃಷ್ಟಿಯಾಗಿದೆ.

Advertisement

ಶಿಡ್ಲಘಟ್ಟ ತಾಲೂಕಿನ ಗಂಭೀರ್ನಹಳ್ಳಿ ಹಾಗೂ ಹೊಸಕೋಟೆ ತಾಲೂಕಿನ ರಾಳಕುಂಟೆ ಗ್ರಾಮಸ್ಥರ ನಡುವೆ ಶೆಡ್‌ ನಿರ್ಮಿಸುವ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ. ಗೋಮಾಳದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚಿಗೆ ಶೆಡ್‌ ನಿರ್ಮಾಣ ತಡೆಗಟ್ಟಲು ಕ್ರಮ ಕೈಗೊಳ್ಳ ಬೇ ಕೆಂದು ಗಂಭೀರ್ನಹಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ ಅವರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಕೆ.ಅರುಂಧತಿ, ರಾಜಸ್ವ ನಿರೀಕ್ಷಕ ಶ್ರೀಧರ್‌ ಮತ್ತು ಸಿಪಿಐ ಸುರೇಶ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಂತರ್‌ ಜಿಲ್ಲಾ ಗಡಿ ಪ್ರದೇಶ ಗುರುತಿಸುವವರೆಗೆ ಯಾರು ಸಹ ಶೆಡ್‌ ಅಥವಾ ನಿರ್ಮಾಣ ಕಾರ್ಯ ನಡೆಸಬಾರದೆಂದು ಸೂಚನೆ ನೀಡಿದ್ದಾರೆ.

ಶಿಡ್ಲಘಟ್ಟ ತಾಲೂಕಿನಲ್ಲಿ ಗಡಿ ಪ್ರದೇಶವನ್ನು ಈಗಾಗಲೇ ಗುರುತಿಸಿದ್ದಾರೆ. ಆದರೆ ಶೆಡ್‌ ನಿರ್ಮಿಸುವ ವಿಚಾರದಲ್ಲಿ ಗಡಿ ವಿವಾದ ಭುಗಿಲೆದ್ದಿದೆ. ತಾಲೂಕು ದಂಡಾಧಿಕಾರಿಗಳು ಎರಡು ಗ್ರಾಮಗಳ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಗಡಿ ಪ್ರದೇಶ ಗುರುತಿಸುವವರೆಗೆ ಯಾರು ಸಹ ನಿರ್ಮಾಣ ಕಾರ್ಯ ನಡೆಸಬಾರದೆಂದು ಸೂಚನೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಹ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ತಹಶೀಲ್ದಾರ್‌ ಕೆ.ಅರುಂಧತಿ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ಶಿಡ್ಲಘಟ್ಟತಾ.ಗಂಭೀರ್ನಹಳ್ಳಿ ಹಾಗೂ ಹೊಸಕೋಟೆ ತಾ.ರಾಳಕುಂಟೆ ಗ್ರಾಮಸ್ಥರ ನಡುವೆ ಶೆಡ್‌ ನಿರ್ಮಿಸುವ ವಿಚಾರದಲ್ಲಿ ಸಮಸ್ಯೆ ಬಂದಿದೆ. ಅದಕ್ಕಾಗಿ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಅವರ ಸೂಚನೆ ಆಧರಿಸಿ ಮುಂದಿನ ಕ್ರಮ ಜರುಗಿಸುತ್ತೇವೆ. ಸದ್ಯ ಶೆಡ್‌ಗ  ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದು, ರಾಜಸ್ವನಿರೀಕ್ಷಕರಿಗೆ ಎಚ್ಚರ ವಹಿಸಲು ಸೂಚನೆನೀಡಲಾಗಿದೆ ಎಂದರು.

ಕೋಚಿಮುಲ್‌ ನಿರ್ದೇಶಕ ಶ್ರೀನಿವಾಸ್‌ ರಾಮಯ್ಯ, ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಭೀಮೇಶ್‌,ಯುವ ಕಾಂಗ್ರೆಸ್‌ ಮುಖಂಡ ಸುಗಟೂರು ನಾಗೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next